ಅಸ್ಪೃಶ್ಯತೆ ಅಳಿಸಿ ಸಮಾನತೆ ಬೆಳಸಲು ಶ್ರೀಶೈಲ ಬುಟ್ನಾಳ ಕರೆ

0
264

ಕಲಬುರಗಿ: ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲೂ ನಾವು ಬದುಕುತ್ತಿರುವಾಗ ಇನ್ನು ನಮ್ಮ ಸಮಾಜದಲ್ಲಿ ಅಸ್ಪೃಶ್ಯತಾ ಆಚರಿಸಲಾಗುತ್ತಿದೆ. ಅದನ್ನು ಬೇರು ಸಮೇತ ಕಿತ್ತು ಹಾಕಿ ಸಮಾನತೆ ಬೆಳಸಬೇಕು ಎಂದು ಮಂದೇವಾಲ ತಾಪಂ ಸದಸ್ಯ ಶ್ರೀಶೈಲ ಬುಟ್ನಾಳ ಕರೆ ನೀಡಿದರು.

ಜಿಲ್ಲೆಯ ಜೇವರ್ಗಿ ತಾಲೂಕಿನ ಮಯೂರ ಗ್ರಾಮದಲ್ಲಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಜ್ಞಾನ ಸಾಗರ ಏಜಿಕೇಶನ್ ಮತ್ತು ಕಲ್ಚರ್ ಅಸೋಸಿಯೇಷನ್ ಇವರ ಸಮಯುಕ್ತಾಶ್ರಯದಲ್ಲಿ ಏರ್ಪಡಿಸಿದ ಅಸ್ಪೃಶ್ಯತಾ ನಿವಾರಣೆಯ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ನಮ್ಮ ಭಾಷೆ ಮತ್ತು ಸಂಸ್ಕೃತಿ ಬೇರೆ ಬೇರೆಯಾಗಿದ್ದರೂ ನಾವೇಲ್ಲ ಒಂದೆ. ಸಮಾಜ ಸುಧಾರಕರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಬುದ್ಧ ಬಸವ ಹಾಗೂ ಡಾ ಅಂಬೇಡ್ಕರವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಹೇಳಿದರು.

ಸಾಹಿತಿ ಎಂ ಎನ್ ಸುಗಂಧಿ ಅವರು ಮಾತನಾಡಿ, ಮನುಷ್ಯ ತನ್ನ ಸ್ವಾರ್ಥವನ್ನು ಬದಿಗಿಟ್ಟು ನಿಜವಾದ ಮಾನವರಂತೆ ಬದುಕು ಸಾಗಿಸಬೇಕು. ಈ ನೆಲ, ನೀರು, ಗಾಳಿ ಒಂದೇ ಆಗಿರುವಾಗ ಬೇಧ ಭಾವ ಮಾಡವುದು ತರವಲ್ಲ.ಇದನ್ನು ಪ್ರತಿಯೊಬ್ಬರು ತಿಳಿದು ನಡೆದರೆ ಬಾಳು ಸಾರ್ಥಕವಾಗ ಬಲ್ಲದು. ಎಲ್ಲಡೆ ಸಮಾನತೆ ಗಾಳಿ ಸೂಸಲಿ ಎಂದರು.

ಪತ್ರಕರ್ತ ಹಾಗೂ ಸಂಪನ್ಮೂಲ ವ್ಯಕ್ತಿ  ಧರ್ಮಣ್ಣ ಎಚ್ ಧನ್ನಿ ಅವರು, ಯಾವುದೇ ಮೇಲು ಕೀಳು ಎನ್ನದೆ ಸಮಾಜದಲ್ಲಿನ ಅಸ್ಪೃಶ್ಯತೆ, ಭ್ಯಷ್ಠಾಚಾರ, ಮೂಡ ನಂಬಿಕೆಗಳನ್ನು ತೊಡೆದು ಹಾಕುವಲ್ಲಿ ಮುಂದಾಗಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ಆ ಮೂಲಕ ಜಾತೀಯತೆ ಅಳಿಸಿ ಸಮಾನತೆ ಬೇರು ಮೂಡಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಸಂಸ್ಥೆ ಕಾರ್ಯದರ್ಶಿ ಪೀರಪ್ಪ ಹಾದಿಮನಿ ಅವರು ಅಧ್ಯಕ್ಷತೆ ವಹಿಸಿದರು. ಮುಖ್ಯ ಅಥಿತಿಗಳಾಗಿ ಮಂದೇವಾಲ ಕ್ಷೇತ್ರದ ಜಿಪಂ ಸದಸ್ಯೆ ಕಮಲಾಬಾಯಿ ಎಂ ಬಡಿಗೇರ, ನೇದಲಗಿ ಪಿಡಿಓ ಹುಸ್ಮಾನ ಸಿಂದಗಿಕರ್, ಉಪನ್ಯಾಸಕ ನಿಜಲಿಂಗ ದೊಡ್ಡಮನಿ, ಜೇವರ್ಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಧರೇಪ್ಪಗೌಡ ಎಸ್ ಬಿರಾದಾರ, ಗ್ರಾಪಂ ಸದಸ್ಯ ಸತೀಶ ಜಹಾಗೀರ‍್ದಾರ, ಮುಖಂಡರಾಧ ಸಿದ್ದಪ್ಪ ಪೂಜಾರಿ, ಬಸಣ್ಣ ಹರವಾಳ, ಅಮೃತರಾವ ಜಹಾಗೀರ‍್ದಾರ, ಲಕ್ಕಪ್ಪ ಮಯೂರ, ನಿಂಗಣ್ಣ ಹೊಸಮನಿ, ಅಮೋಘಸಿದ್ದ ಹುಲ್ಲೂರ, ವಿಠ್ಠಲ ಚಿಕ್ಕಣಿ ಹಾಗೂ ಮಹಿಳೆಯರು, ಗಣ್ಯರು ಸೇರಿ ಮತ್ತಿತರರು ಭಾಗವಹಿಸಿದರು.

ನಂತರ ಓಂ ಸಾಯಿ ಜನ ಜಾಗೃತಿ ಕಲಾ ತಂಡದವರಿಂದ ಅಸ್ಪೃಶ್ಯತಾ ನಿವಾರಣೆ ಕುರಿತು ಬೀದಿ ನಾಟಕ ಪ್ರದರ್ಶಿಸಿದರು. ವೀರಣ್ಣ ಆರ್ ಬೆಣ್ಣೆಶಿರೂರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here