ಪೌರಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಯೋಗದ ಅಧ್ಯಕ್ಷರಿಗೆ ಒತ್ತಾಯ

0
265

ಕಲಬುರಗಿ: ಲೋಡರ್ ಕೆಲಸ ಮಾಡುತ್ತಿರುವ 40 ಜನ ಪೌರಕಾರ್ಮಿಕರಾಗಿ ಪರಿಗಣಿಸಿ ಸೇವೆ ಖಾಯಂ ಗೊಲಿಸಿ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ನೌಕರುಗಳ ಸೇವಾ ಭದ್ರತೆಯನ್ನು ಒದಗಿಸಬೇಕೆಂದು ಒತ್ತಾಯಿಸಿ ಇಂದು ಕರ್ನಾಟಕ ಸಫಾಯಿ ಕರ್ಮಚಾರಿಗಳ ಆಯೋಗ ಅಧ್ಯಕ್ಷರಾದ ಎಮ್. ಶಿವಣ್ಣ ಕೋಟೆ ಅವರಿಗೆ ಕ.ನ.ನಿ.ಸ ಮತ್ತು ಒಳಚರಂಡಿ ಮಂಡಳಿ ಹೊರಗುತ್ತಿಗೆ ನೌಕರರ ಸಂಘ ಅಧ್ಯಕ್ಷರಾದ ಸುನೀಲ ಮಾನಪಡೆ ಭೇಟಿ ಒತ್ತಾಯಿಸಿದರು.

ಈ ವೇಳೆಯಲ್ಲಿ ಮಾತನಾಡಿದ ಸುನೀಲ್ ಮಾನ್ಪಡೆ, ಹೊರಗುತ್ತಿಗೆ ಸಿಬ್ಬಂದಿಗಳಿಗೆ ಎರಡು ವರ್ಷಗಳು ಕಳೆದರು ಮೂರು ತಿಂಗಳ ಸಂಬಳ ನೀಡದೆ ಅನ್ಯಾಯ ಮಾಡುವ ವಿರುಧ್ಧ ಶಿಸ್ತು ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

214 ಜನ ಪೌರಕಾರ್ಮಿಕರಿಗೆ ಮಂಜೂರಾಗಿರುವ ಅಂತಸ್ತಿನ ಮನೆ ಬದಲು (ಅಪಾರ್ಟ್ ಮೆಂಟ್) 30×40 ಅಳತೆ ನಿವೆಶನದಲ್ಲಿ ವಿಳಂಬವಿಲ್ಲದ ಮನೆ ಕಟ್ಟೀಸಿಕೊಡುವುದು, ಮಹಾನಗರ ಪಾಲಿಕೆಯಲ್ಲಿ 700 ಜನ ಸಂಖ್ಯಗೆ ಒಬ್ಬ ಪೌರ ಕಾರ್ಮಿಕರನ್ನು ನಿಮಿಸುವ ಬದಲು 500 ಜನಕ್ಕೆ ಒಬ್ಬರಂತೆ ಹುದ್ದೆಯನ್ನು ನಿಗದಿ ಪಡಿಸಿ ಹಾಲಿ ಪೌರಕಾರ್ಮಿಕರ ಸೇವೆಯನ್ನು ಖಾಯಂ ಗೊಲಿಸುವುದು ಹಾಗೂ ಕೆಲಸ ಹೊರೆಯನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.

ಖಾಯಂ ಸಿಬ್ಬಂದಿಗಳು ಕಾರ್ಯ ನಿರ್ವಹಿಸುವ ಅವಧಿಯಂತೆ ಹೊರಗುತ್ತಿಗೆ ಸಿಬ್ಬಂದಿಗಳು ಸಹ ಅಷ್ಟೇ ಪ್ರಮಾಣದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ಕಾರಣ ನೀರು ಸರಬರಾಜಿನ ಕೆಲಸವು “ಮೂಲಭೂತ ಅವಶ್ಯಕ ಸೇವೆ” ಎಂದು ಸರ್ಕಾರವು ಪರಿಗಣಿಸಿರುದರಿಂದ ಎಲ್ಲಾ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಅವರುಗಳು ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗೆ ಅನ್ವಯಿಸುವಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳ ಹಿತರಕ್ಷಣೆಯನ್ನು ಪರಿಗಣಿಸುವ ಮೂಲಕ ಬೇಡಿಕೆಗಳನ್ನು ಬಗೆಹರಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ವೇಳೆಯಲ್ಲಿ ಕ.ನ.ನಿ.ಸ ಮತ್ತು ಒಳಚರಂಡಿ ಮಂಡಳಿ ಹೊರಗುತ್ತಿಗೆ ನೌಕರರ ಸಂಘ ಅಧ್ಯಕ್ಷರಾದ ಸುನೀಲ ಮಾನಪಡೆ  ಪ್ರಧಾನ ಕಾರ್ಯದರ್ಶಿ ಪಂಪಣ್ಣ ಸಜ್ಜನ, ಕಾನೂನು ಸಲಹೆಗಾರ ಸುಧಾಂ ದಿನ್ನಿ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here