ಸ್ಪರ್ಧಾತ್ಮಕ ಯುಗವಾಗಿದೆ ಅಧ್ಯಯನ, ಅಧ್ಯಪನದ ಕಡೆಗೆ ಹೆಚ್ಚು ಗಮನ ಕೊಡಿ : ಪಾಟೀಲ 

0
20

ಕಲಬುರಗಿ: ನಗರದ ಡಾ. ಅಂಬೇಡ್ಕರ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಬಿ.ಎ. ಬಿ.ಕಾಂ., ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯಂಟೇಷನ್ ಮತ್ತು ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಲಬುರಗಿಯ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಇಂದುಮತಿ ಪಿ. ಪಾಟೀಲ ಮಾತನಾಡಿದರು.

ವಿದ್ಯಾರ್ಥಿ ಜೀವನ ನಿಂತ ನೀರಲ್ಲ ಸದಾ ಅಧ್ಯಯನದ ಕಡೆ ಹೆಚ್ಚು ಗಮನ ಕೊಡಬೇಕು ಜೀವನದ ಸತ್ಯ ಸಂಗತಿಗಳನ್ನು ಅರಿಯಬೇಕು. ಬುದ್ಧ, ಬಸವ, ಡಾ. ಅಂಬೇಡ್ಕರರ ವಿಚಾರ ಧಾರೆಗಳನ್ನು ಮೈಗೂಡಿಕೊಂಡು ಅವರ ಮಾನವೀಯ ಮೌಲ್ಯಗಳನ್ನು ಒಪ್ಪಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮೊಳಗಿನ ಚೈತನ್ಯವನ್ನು ಬೆಳಗಿಸಿ ಉತ್ತಮ ಗುರಿಗಳನ್ನು ಹೊಂದಿ ಸದೃಢ ಭಾರತವನ್ನು ನಿರ್ಮಾಣ ಮಾಡಬೇಕೆಂದರು.

Contact Your\'s Advertisement; 9902492681

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೆ.ಪಿ.ಇ. ಸಂಸ್ಥೆಯ ಪ್ರಧಾನ ಕಾರ್ಯಾದರ್ಶಿಗಳಾದ ಡಾ. ಮಾರುತಿರಾವ ಡಿ. ಮಾಲೆಯವರು ವಿದ್ಯಾರ್ಥಿಗಳು ಸಮಾಜ ಸುಧಾರಕರ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಧೃಢ ಭಾರತವನ್ನು ನಿರ್ಮಿಸಬಹುದು ಎಂದರು. ಕಾಲೇಜಿನ ಪ್ರಾಚಾರ್ಯಾರಾದ ಡಾ. ಐ.ಎಸ್. ವಿದ್ಯಾಸಾಗರ ಸ್ವಾಗತ ಮತ್ತು ಪ್ರಾಸ್ಥಾವಿಕ ಮಾತನಾಡಿದರು.

ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಡಾ. ಗಾಂಧೀಜಿ ಮೋಳಕೆರೆ ರವರು ಕಾಲೇಜಿನ ಪ್ರಾಧ್ಯಾಪಕರ ಕಿರು ಪರಿಚಯ ಮಾಡಿಕೊಂಡರು. ಸಮಾರಂಭದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಪ್ರೋ. ನಿರ್ಮಲಾ ಸಿರಗಾಪುರ ಪ್ರೋ ಸಿದ್ದಪ್ಪ ಎಂ. ಕಾಂತಾ, ಪ್ರೋ ಗೀರಿಶ ಮೀಸಿ, ಪ್ರೋ. ಮಹಾಂತೇಶ ಬಿದನೂರು ಹಾಗೂ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿಂದರು. ಡಾ. ವಸಂತ ನಾಸಿ ಕಾರ್ಯಾಕ್ರಮ ನಿರೂಪಿಸಿದರು. ಡಾ. ರಾಜನಾಳೆ ಅನೀಲಕುಮಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here