ಯಾದಗಿರಿ: ತಾಲ್ಲೂಕಿನ ಚಾಮನಳ್ಳಿ ಗ್ರಾಮದ ಮೂಲಭೂತ ಸಮಸ್ಯೆಗಳು ಪರಿಹರಿಸದ ಕ್ರಮ ಖಂಡಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ತಿಳಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೆಪಿಆರ್‌ಎಸ್ ಜಿಲ್ಲಾದ್ಯಕ್ಷ ಯುಲ್ಲಪ್ಪ ಚಿನ್ನಾಕಾರ ಮತ್ತು ಕೆ.ಪಿ.ಆರ್.ಎಸ್. ಚಾಮನಳ್ಳಿ ಗ್ರಾಮ ಘಟಕ ಅಧ್ಯಕ್ಷ ಮುದುಕಪ್ಪ ಚಾಮನಳ್ಳಿ ಗ್ರಾಮದ ಮೂಲಭೂತ ಸೌಕರ್ಯ ಒದಗಿಸುವಲ್ಲಿ ನಿರಂತರ ನಿರ್ಲಕ್ಷ್ಯ ತೋರುತ್ತಿರುವುದನ್ನು ಖಂಡಿಸಿ ಮುಖ್ಯಮಂತ್ರಿಗಳ ಗಮನ ಸೆಳೆಯಲು ವಿನೂತನವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಯಾದಗಿರಿ ತಾಲ್ಲೂಕಿನ ಕುಗ್ರಾಮ ಚಾಮನಳ್ಳಿಯಲ್ಲಿ ಕನಿಷ್ಟ ಶುದ್ಧ ಕುಡಿವ ನೀರು ಇಲ್ಲ. ಆರೋಗ್ಯ ಪರಿಹಾರವಿಲ್ಲ ಯಾವುದೇ ಸೌಲಭ್ಯ ಇಲ್ಲದ ಗ್ರಾಮದಲ್ಲಿ ಮೂಲಭೂತ ಸಮಸ್ಯೆಗಳು ನೂರಾರು ಇದ್ದು ಇವುಗಳನ್ನು ಪರಿಹರಿಸುವಂತೆ ಹತ್ತು ಹಲವು ಬಾರಿ ಮನವಿ ಆಗ್ರಹ ಒತ್ತಾಯ ಮಾಡಿದರೂ ನಮ್ಮ ಸಮಸ್ಯೆ ಪರಿಹಾರ ಕಂಡಿಲ್ಲ ಈ ನಿರ್ಲಕ್ಷ್ಯದ ಕ್ರಮ ಖಂಡಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಣಯಿಸಿದ್ದೇವೆ.
ಜೂನ್. 21 ರಂದು ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಚಂಡ್ರಕಿಗೆ ಗ್ರಾಮವಾಸ್ತವ್ಯಕ್ಕೆ ಆಗಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳಿಗೆ ಕಾರ್ಯಕರ್ತರು ಜಮಾಯಿಸಿ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.