ಯಾದಗಿರಿ: ಜಿಲ್ಲೆಯ ವಿವಿಧ ಇಲಾಖೆಯ ಕಚೇರಿಗಳಲ್ಲಿ ನಾಗರಿಕರು ಬಂದು ನೀಡುವ ಆಧಾರ ಕಾರ್ಡ ಇಲ್ಲವೇ ಸಂಬಂಧಿಸಿದ ವಿವಿಧ ದಾಖಲೆಗಳಲ್ಲಿ ಇರುವಂತೆ ಹೆಸರು ಇನ್ನಿತರ ವಿವರಗಳನ್ನು ಕಂಪೂಟರ್ ಆಪರೇಟರ್ ಗಳು ದಾಖಲಿಸದೇ ತಮಗೆ ಮನಸ್ಸಿಗೆ ಬಂದಂತೆ ದಾಖಲಿಸುತ್ತಿರುವುದರಿಂದ ತೊಂದರೆ ಆಗುತ್ತಿರುವುದನ್ನು ಸರಿಪಡಿಸುವಂತೆ ಸಮಾಜಿಕ ಕಾರ್ಯಕರ್ತ ಮುಸ್ತಫಾ ಪಟೇಲ್ ಮನವಿ ಮಾಡಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಜಿಲ್ಲೆಯ ವಿವಿಧ ಇಲಾಖೆಯ ಕಚೇರಿಗಳಲ್ಲಿ ನಾಗರಿಕರು ತಮ್ಮ ಕೆಲಸ ಕಾರ್ಯಗಳಿಗೆ ಬಂದು ತಮ್ಮ ವೈಯಕ್ತಿಕ ವಿವರಗಳನ್ನು ನೀಡುವ ಆಧಾರ ಕಾರ್ಡ, ರೇಷನ್ ಕಾರ್ಡ, ಪಹಾಣಿ ಇಲ್ಲವೇ ಸಂಬಂಧಿಸಿದ ಪೂರಕ ದಾಖಲೆಗಳಲ್ಲಿ ಇರುವಂತೆ ಹೆಸರು ಇನ್ನಿತರ ವಿವರಗಳನ್ನು ಕಂಪೂಟರ್ ಆಪರೇಟರ್ ಗಳು ದಾಖಲಿಸದೇ ತಮಗೆ ಮನಸ್ಸಿಗೆ ಬಂದಂತೆ ದಾಖಲಿಸುತ್ತಿರುವುದರಿಂದ ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ಅದರಲ್ಲೂ ಅನಕ್ಷರಸ್ಥ, ಗ್ರಾಮೀಣ ಮತ್ತು ಭಾಷಾ ಅಲ್ಪಸಂಖ್ಯಾತರೆ ಹೆಚ್ಚು ಇರುವ ಈ ಜಿಲ್ಲೆಯಲ್ಲಿ ಕಂಪುಟರ್ ಆಪರೇಟರ್ ಗಳು ಮಾಡುತ್ತಿರುವ ಯಡವಟ್ಟಿನಿಂದಾಗಿ ಇನ್ನಿಲ್ಲದ ಸಮಸ್ಯೆಗಳು ಆಗುತ್ತಿರುವುದನ್ನು ತಾವು ಮನಗಂಡು ಇದನ್ನು ಸರಿಪಡಿಸುವಂತೆ ಅವರು ಮನವಿ ಮಾಡಿದ್ದಾರೆ.
ಹೆಚ್ಚುವರಿ ಜಿಲ್ಲಾದಿಕಾರಿಗಳು ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಎಂದು ಮುಸ್ತಫಾ ಪಟೇಲ್ ತಿಳಿಸಿದ್ದಾರೆ.