ಕಲಬುರಗಿ: ವೇದಾ ಪಬ್ಲಿಕ್ ಶಾಲೆಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ “ಎಜುಕೇಷನ್ ಟುಡೇ” ರಾಷ್ಟ್ರಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಸದರಿ ಶಾಲೆಯನ್ನು ಕೋ ಕ್ಯಾರಿಕುಲರ್ ಎಜ್ಯುಕೇಷನ್’ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಮೋಸ್ಟ ಇನಸ್ಪಿರೇಷನಲ್ ಪ್ರೈಮರಿ ಸ್ಕೂಲ್ ಎಂಬ ಎರಡು ಪುರಸ್ಕಾರ ದೊರೆತಿರುವುದಕ್ಕೆ ಶಾಲೆಯ ಮುಖ್ಯಸ್ಥರಾದ ಡಾ. ರವಿ ಮಲಶೆಟ್ಟ ರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸದರಿ ಪ್ರಶಸ್ತಿಗಳು. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ “ಎಜುಕೇಷನ್ ಟುಡೇ” ಅವರು ರಾಷ್ಟ್ರಾದ್ಯಂತ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳು (ಸಿ.ಬಿ.ಎಸ್.ಸಿ/ಐ.ಸಿ.ಎಸ್.ಇ/ರಾಜ್ಯ) ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಿಭಾಗದಲ್ಲಿ ಸುಮಾರು ೨೩೭೫ ಶಾಲೆಗಳನ್ನು ಸಮೀಕ್ಷೆ ಮಾಡಲಾಗಿತ್ತು ಅದರಲ್ಲಿ ೧೦ ಪ್ಯಾರಾ ಮೀಟರ್‌ಗಳ ಷರತ್ತುಗಳಿಂದ ಅಕ್ಯಾಡೆಮಿಕ್ ರೆಪ್ಯುಟೇಷನ್ ಇಂಡಿಯುಜ್ಯುವಲ ಅಟೆಷನ್. ಶಾಲೆಯ ಮಾದರಿ ಕಲಿಕೆ, ಗುಣಾತ್ಮಕ ಶಿಕ್ಷಣಕ್ಕೆ ಒತ್ತು, ಸುರಕ್ಷತೆ, ಕ್ರಿಡೆ, ಹಣದ ಪ್ರಾಮುಖ್ಯತೆ, ವಿದ್ಯಾರ್ಥಿಯ ಮೌಲ್ಯ ಶಿಕ್ಷಣ ನಾಯಕತ್ವ ಗುಣ, ಪಠ್ಯೇತರ ಚಟುವಟಿಕೆ ಇವುಗಳನ್ನು ಒಳಗೊಂಡಂತೆ ನಡೆದ ಸಮೀಕ್ಷೆಯ ಸುಮಾರು ರಾಷ್ಟ್ರಾದ್ಯಂತ ೯೮೯೭೦ ಮತಗಳನ್ನು ಪಡೆದು ಪ್ರಥಮ ರ‍್ಯಾಂಕಿನಲ್ಲಿ ನಮ್ಮ ಶಾಲೆಯು ಹೊರಹೊಮ್ಮಿದೆ ಅಲ್ಲದೇ ಈ ರಾಷ್ಟ್ರೀಯ ಪುರಸ್ಕಾರ ೨೦೨೦ ಹಾಗೂ ಜ್ಯೂರಿ ಅವಾರ್ಡಗೂ ಆಯ್ಕೆಯಾಗಿದೆ.
ಆಯ್ಕೆಯಾಗಿದ್ದಕ್ಕೆ ಶಾಲೆಯ ನಿರ್ದೆಶಕರಾದ ಡಾ. ರವಿ ಮಲಶೆಟ್ಟಿ ಹಾಗೂ ಆರತಿ ಮಲಶೆಟ್ಟಿ, ಶಿಕ್ಷಕವೃಂದ, ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತ ಪಡಿಸಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.