ಪಪಾಯ ಔಷಧಿಯ ಗುಣಗಳು ಮತ್ತು ಪೋಷಕಾಂಶಗಳ ಮಹತ್ವ

0
31

ರಾಯಚೂರು: ಪಪಾಯ ಉತ್ಕೃಷ್ಟವಾದ ಹಾಗೂ ಪೌಷ್ಟಿಕತೆಯಿಂದ ಪರಿಪೂರ್ಣವಾದ ಹಣ್ಣು. ಹಿಂದೊಮ್ಮೆ ಹಿತ್ತಲಗಿಡವಾಗಿದ್ದ ಪಪಾಯ ಈಗ ಆರ್ಥಿಕರಂಗದಲ್ಲಿ ವಿಶ್ವದಐದನೇ ಮುಖ್ಯ ಬೆಳೆಯಾಗಿದೆ, ಪಪಾಯಗಿಡದ ಹಣ್ಣು, ಕಾಯಿ, ಎಲೆ, ಕಾಂಡ, ಬೇರು, ಹೂವು ಎಲ್ಲವೂ ವಿಭಿನ್ನ ಪೋಷಕಾಂಶಗಳನ್ನು ಒಳಗೊಂಡಿದ್ದು ನಮ್ಮ ದಿನನಿತ್ಯದಆಹಾರದಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತದೆ.ಅಷ್ಟೇ ಅಲ್ಲದೆಇದರ ಬಣ್ಣ, ಸುವಾಸನೆ ಹಾಗೂ ರುಚಿ, ಊಟದಲ್ಲಿ ವೈವಿದ್ಯತೆಯನ್ನುಉದಗಿಸುತ್ತದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಡಾ. ಪಿ. ವಾಸುದೇವ್ ನಾಯ್ಕ್ ತಿಳಿಸಿದ್ದಾರೆ.

ಪಪಾಯ ಹಣ್ಣಿನಲ್ಲಿರುವ ಪೋಷಕಾಂಶಗಳು: ಪಪಾಯ ಹಣ್ಣಿನಲ್ಲಿ ಶೇ. ೮೮-೯೦ ರಷ್ಟು ನೀರಿನಾಂಶವಿದೆ.ಪೋಷಕಾಂಶಗಳಲ್ಲಿ ಮುಖ್ಯವಾಗಿ ಜೀವಸತ್ವಗಳಾದ ಬಿ೧, ಬಿ೨, ಬಿ೩ ಹಾಗೂ ಖನಿಜ ಲವಣಾಂಶಗಳನ್ನು ನಮ್ಮದೇಹಕ್ಕೆಒದಗಿಸುತ್ತದೆ.ಮಾವಿನ ನಂತರ ಬೀಟಾಕರೋಟಿನ್ ಪ್ರಮಾಣದಲ್ಲಿ, ಪಪಾಯ ಹಣ್ಣುಎರಡನೇ ಸ್ಥಾನದಲ್ಲಿ.ಬೀಟಾಕರೋಟಿನ್‌ದೇಹದಲ್ಲಿ ’ಎ’ ಜೀವಸತ್ವಕ್ಕೆ ಪರಿವರ್ತನೆ ಹೊಂದಿ ಕಾರ‍್ಯ ನಿರ್ವಹಿಸುತ್ತದೆ.’ಎ’ ಜೀವಸತ್ವವುದೇಹದ ಬೇಡಿಕೆಯಾದರೆ (೬೦೦ ಮೈಕ್ರೋಗ್ರಾಂ) ಇರುಳು ಕುರುಡು ಮತ್ತುಚರ್ಮರೋಗಕಾಣಿಸುತ್ತವೆ. ಹೆಚ್ಚಿನಕೊರತೆಯಿಂದಕುರುಡರಾಗುವ ಸಾಧ್ಯತೆಯೂಇದೆ.ಪಪಾಯವನ್ನು ಬಳಸುವುದರಿಂದ ಈ ದೃಷ್ಟಿ ಮಾಂದ್ಯತೆಯನ್ನುತಡೆಗಟ್ಟಬಹುದು.ಶಾಖ ಹಾಗೂ ಬೆಳಕಿನ ಕಿರಣಗಳಿಗೆ ಹೆಚ್ಚಾಗಿ ಈ ಜೀವಸತ್ವ ನಾಶವಾಗುವುದಿಲ್ಲ.

Contact Your\'s Advertisement; 9902492681

ಪಪಾಯ ಹಣ್ಣಿನಲ್ಲಿರುವ ಪೋಷಕಾಂಶಗಳೆಂದರೆ : ನೀರಿನಾಂಶ ೭೮-೯೦ ಗ್ರಾಂ, ಶರ್ಕ ಪಿಷ್ಠ ೭.೨೯.೫ ಗ್ರಾಂ, ಥಯಾಮಿನ್ ೦.೦೪ ಮಿ.ಗ್ರಾಂ, ಸಸಾರಜನಕ ೦.೪-೦.೫ ಗ್ರಾಂ, ರಿಬೋಪ್ಲೇವಿನ್ ೦.೨೫ ಮಿ.ಗ್ರಾಂ, ಕೊಬ್ಬು ೦.೧ ಗ್ರಾಂ, ನಿಯಾಸಿನ್ ಆಮ್ಲ ೦.೨ ಮಿ.ಗ್ರಾಂ, ಖನಿಜ ೦.೪-೦.೫ ಗ್ರಾಂ, ಕ್ಯಾಲೋರಿ (ಶಕ್ತಿ) ೩೨-೩೮, ಸುಣ್ಣ ೧೭.೦೦ ಮಿ.ಗ್ರಾಂ, ಸೋಡಿಯಮ್ ೨೬ ಮಿ.ಗ್ರಾಂ, ರಂಜಕ ೧೩.೦೦ ಮಿ.ಗ್ರಾಂ, ಪೊಟ್ಯಾಸಿಯಂ ೬೯ ಮಿ.ಗ್ರಾಂ ಮತ್ತುಕಬ್ಬಿಣ ೦.೫ ಮಿ.ಗ್ರಾಂ.

ಪಪಾಯಔಷಧಿಯ ಗುಣಗಳು: ಹಣ್ಣಿನ ತಿರುಳಿನ ಜೊತೆಗೆ, ಹಾಲು ಮತ್ತುಜೇನುತುಪ್ಪ ಬೆರೆಸಿ ಸೇವಿಸುವುದರಿಂದ ನರಗಳ ದೌರ್ಬಲ್ಯವನ್ನು ಹೋಗಲಾಡಿಸಬಹುದು. ಹಣ್ಣು, ಕಾಯಿ, ಎಲೆ, ಬೇರು ಇವುಗಳ ರಸ ಮೂಲವ್ಯಾದಿ ರೋಗ ಮತ್ತುಅಜೀರ್ಣಕ್ಕೆ ಪರಿಹಾರಒದಗಿಸುತ್ತದೆ. ಪಪಾಯ ಕಾಯಿ ಅಥವಾಎಲೆಯನ್ನು ಸಕ್ಕರೆಯೊಂದಿಗೆ ಬೆರೆಸಿ ತಿನ್ನುವುದರಿಂದ ಹೊಟ್ಟೆ ಹಾಗೂ ಕರುಳಿನ ಹಾನಿಕಾರಕ ಜಂತುಗಳು ನಾಶವಾಗುತ್ತವೆ. ಈ ದಿಶೆಯಲ್ಲಿ ನ್ಯಾಷನಲ್‌ಡ್ರಗ್‌ಆಯಂಡ್‌ಟಾಕ್ಸಿಕಾಲಜಿಕಲ್‌ಇನ್ಸಟಿಟ್ಯೂಟ್ ಸಂಶೋಧನೆಕೈಗೊಂಡಿದೆ.ಊಟವಾದ ನಂತರತಿನ್ನುವ ಪಪಾಯ ಹಣ್ಣು ಪಚನ ಶಕ್ತಿಯನ್ನೂ ವೃದ್ಧಿಸುತ್ತದೆ.ಪಪಾಯ ಹಣ್ಣು ಪಚನ ಶಕ್ತಿಯನ್ನು ವೃದ್ಧಿಸುತ್ತದೆ.ಪಪಾಯಹೋಳುಗಳನ್ನು ಗಾಯ ಮತ್ತು ಹಣ್ಣುಗಳ ಮೇಲಿಡುವುದರಿಂದ ಬೇಗ ಗುಣಮುಖರಾಗಬಹುದುಎಂದು ಸಂಶೋಧನೆಗಳು ತಿಳಿಸಿವೆ ಎಂದು ಕೃಷಿ ವಿಶ್ವವಿದ್ಯಾಲಯದ ಬಿಂದುಕೆ.ಜಿ ಸ್ಪಷ್ಟಪಡಿಸಿದ್ದಾರೆ.

ನಮ್ಮದೇಶದ ಬಡಮಕ್ಕಳಿಗೆ ಕಾಣಬರುತ್ತಿರುವ ಇರುಳು ಕುರುಡು (೮-೧೦%), ರಕ್ತಹೀನ (೪೦%) ಹಾಗೂ ’ಬಿ’ ಗುಂಪಿನ ಜೀವಸತ್ವಗಳ ಕೊರತೆಯನ್ನು (೫%) ನಿಯಂತ್ರಿಸಲುಕಡಿಮೆ ವೆಚ್ಚದ ಪಪಾಯಗಿಡದ ಬಳಕೆಯನ್ನು ಜನಪ್ರಿಯಗೊಳಿಸುವುದು ಅತ್ಯಾವಶ್ಯಕ. ಈ ನಿಟ್ಟಿನಲ್ಲಿ ಪಪಾಯವನ್ನುಆಹಾರದ ವಿವಿಧರೂಪದಲ್ಲಿ ಬಳಸುವುದಕ್ಕೆ ಆಹಾರ ಸಂಸ್ಥೆಗಳಾದ, ಹೈದರಾಬಾದನ ನ್ಯಾಷನಲ್‌ಇನ್ಸಟಿಟ್ಯೂಟ್‌ಆಫ್ ನ್ಯೂಟ್ರಿಷನ್ ಮತ್ತು ಮೈಸೂರಿನ ಸೆಂಟ್ರಲ್ ಫುಡ್‌ಟೆಕನಾಲಾಜಿಕಲ್‌ರಿಸರ್ಚಇನ್ಸಿಟಿಟ್ಯೂಟ್ ಇವುಗಳು ಗಣನೀಯ ಸೇವೆ ಸಲ್ಲಿಸುತ್ತವೆ.

ಬೆಳೆದ ಪಪಾಯರಫ್ತಿಗಾಗಿ ಮಾರಾಟಕ್ಕೆ ಬಂದರೆ ಸಾಲದು, ಮನೆಯಲ್ಲಿಯೂಇದರ ಬಳಕೆ ಅವಶ್ಯಕ. ಪಪಾಯವನ್ನು ನಮ್ಮ ದಿನನಿತ್ಯದಆಹಾರದಲ್ಲಿ ಬಳಸುವುದರಿಂದ ಸದೃಢಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದಲ್ಲದೇ.ಈ ನಿಟ್ಟಿನಿಂದ ಸ್ವಲ್ಪ ಮಟ್ಟಿಗಾದರೂ ನಮ್ಮಜನತೆಯಲ್ಲಿನ ಪೋಷಕಾಂಶಗಳ ನ್ಯೂನ್ಯತೆಯನ್ನುತಡೆಗಟ್ಟಬಹುದು ಎಂದು ವಿವಿ ಜಹೀರ್‌ ಅಹಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here