ಭಕ್ತಿ ಭಾವವೇ ಸಂಧ್ಯಾವಂದನೆ: ಅಜೇಂದ್ರ ಶ್ರೀಗಳು

0
69

ಶಹಾಪುರ : ನಿತ್ಯವೂ ಸಂಧ್ಯಾವಂದನೆಯಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿನ ಚಿತ್ತಚಾಂಚಲ್ಯ ದೂರವಾಗಿ ಏಕಾಗ್ರತೆ ಹೆಚ್ಚಾಗಿ ಭಗವಂತನಲ್ಲಿ ನಂಬಿಕೆ,ಪ್ರೀತಿ,ಭಯ,ಭಕ್ತಿ ಮುಂತಾದ ಭಾವನೆಗಳು ಅಚಲವಾಗಿ,ವ್ಯಕ್ತಿ ಆಧ್ಯಾತ್ಮದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವದೆ ಸಂಧ್ಯಾವಂದನೆ ಎಂದು ಶಹಾಪುರದ ವಿಶ್ವಕರ್ಮ ಏಕದಂಡಿಗಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಹೇಳಿದರು.

ತಾಲ್ಲೂಕಿನ ಸಗರ ಗ್ರಾಮದ ತಿಂಥಿಣಿ ಶ್ರೀ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಧಾರ್ಮಿಕ ಸಂಧ್ಯಾವಂದನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಇದು ಹಿಂದೂಗಳ ಆಚರಿಸುವ ದೈನಂದಿನ ಕ್ರಿಯೆ ಆಗಿದೆ ಆದ್ದರಿಂದ ಸಮಾಜದ ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು.

Contact Your\'s Advertisement; 9902492681

ಆಧ್ಯಾತ್ಮಿಕ ವಿಚಾರ ಧಾರೆಗಳು ಪ್ರತಿಯೊಬ್ಬ ವ್ಯಕ್ತಿಯಯಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರಿ’ಮನಸ್ಸಿನ ಸಮತೋಲನಕ್ಕೆ ಯೋಗ,ಧ್ಯಾನ,ಪ್ರಾರ್ಥನೆ, ದೇವರ ಪೂಜೆ ವ್ರತಾಚರಣೆಗಳು ಹಬ್ಬ ಹರಿದಿನಗಳು, ಮನುಕುಲದ ಬಾಂಧ್ಯವ್ಯ ವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದರು.ಈ ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ವಿಚಾರಧಾರೆಯನ್ನು ಪಸರಿಸುವ ಸಣ್ಣ ಪ್ರಯತ್ನ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರಾದ ಈರಣ್ಣ ಹತ್ತಿಗುಡೂರ,ವಾಸುದೇವ ವಠಾರ,ಮನೋಹರ ಪ್ರತಿಹಸ್ತ, ಬಲವಂತ ವಟಾರ,ಮಾನಯ್ಯ ಕಂಬಾರ,ಮನೋಹರ ವಿಶ್ವಕರ್ಮ,ಹಲಕರ್ಟೆಪ್ಪ ಪತ್ತಾರ,ದೇವಿಂದ್ರಪ್ಪ ವಟಾರ, ರಮೇಶ ಪ್ರತಿಹಸ್ತ, ದೇವರಾಜ ವಠಾರ, ವಿನೋದ ದೇವರಗುಡಿ, ಖಂಡಪ್ಪ ಬಜಾರ,ಹಾಗೂ ಇನ್ನಿತರ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here