ಕಲಬುರಗಿ: ಪ್ರತಿಯೊಬ್ಬ ವಿದ್ಯಾರ್ಥಿಯು ಕಲಿಕೆಯ ಅವಧಿಯಲ್ಲಿ, ತಮ್ಮ ಕಲಿಕೆಯ ಕ್ಷೇತ್ರದಲ್ಲಿನ ಭವಿಷ್ಯತ್ತಿನ ಅವಕಾಶಗಳನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದು ಐಸಿಟಿ (ಇನ್‌ಫ್ರಾಮೇಶನ್ ಆಂಡ್ ಕಮ್ಯುನಿಕೇಶನ್ ಟೆಕ್ನಾಲೋಜಿ) ಅಕಾಡೆಮಿ ಅಧ್ಯಕ್ಷರಾದ ಡಾ.ಬಿ ಅನ್‌ಬುಥಂಬಿ ಅಭಿಪ್ರಾಯ ಪಟ್ಟರು.
ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಬುಧವಾರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಇಂಡಕ್ಷನ್ ಕಾರ್ಯಕ್ರಮದ ಬಗ್ಗೆ ಆನ್‌ಲೈನ್ ಮೂಲಕ ಮಾತನಾಡಿದ ಅವರು, ಭವಿಷ್ಯತ್ತಿನ ದಿನದಲ್ಲಿ ಉದ್ಯೋಗವಕಾಶಗಳನ್ನು ಪಡೆದುಕೊಳ್ಳಲು ಯಾವ ಯಾವ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಆಯಾ ವಿಭಾಗದ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದುಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದರು.
ಹೈ ಪರ್‌ಫಾರ್‌ಮೇನ್ಸ್ ಬ್ಯುಸಿನೇಸ್ ಕೋಚ್ ಚೀಫ್ ಎಸ್ಸಿಕ್ಯೂಟರ್ ಸಂಗೀತಾ ಶಂಕರ ಸುಮೇಶ, ಎಚ್‌ಆರ್ ವಿಭಾಗದ ಹಿರಿಯ ಉಪಾಧ್ಯಕ್ಷ ಗೋಕುಲ ಸಂಥನಾಮ, ಜೋಹೊ ಸ್ಕೂಲ್‌ನ್ ಅಧ್ಯಕ್ಷ ರಾಜೇಂದ್ರ ದಂಡಪಾಣಿ, ಮೊಟಿವೇಷನಲ್ ತರಬೇತಿದಾರ ಶಿವಕುಮಾರ ಪಳನಿಅಪನ್ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಕುರಿತು ಮಾತನಾಡಿದರು.
ವಿವಿ ಕುಲಪತಿ ಡಾ. ನಿರಂಜನ್ ವಿ ನಿಷ್ಠಿ, ವಿವಿ ಸಮ ಕುಲಪತಿ ಡಾ. ವಿ.ಡಿ. ಮೈತ್ರಿ ಮತ್ತು ಎನ್. ಎಸ್. ದೇವರಕಲ್, ವಿವಿ ಕುಲಸಚಿವ ಡಾ. ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜಶಾಸ್ತ್ರಿ, ಡೀನ್ ಡಾ. ಲಕ್ಷ್ಮೀ ಪಾಟೀಲ ಮತ್ತು ಡಾ. ಬಸವರಾಜ ಮಠಪತಿ ಆನ್‌ಲೈನ್ ಮೂಲಕ ಭಾಗವಹಿಸಿದರು. ಪ್ರೊ. ಸಯ್ಯದ್ ಆಶ್ರಾ ಕಾರ್ಯಕ್ರಮ ಸಂಯೊಜಿಸಿದರು.
ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಇಂಜೀನಿರಿಂಗ್ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜೀನಿರಿಂಗ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಶನ್ ಇಂಜೀನಿರಿಂಗ್, ಸಿವಿಲ್ ಇಂಜೀನಿರಿಂಗ್, ಇನ್‌ಫಾರ್‌ಮೇಶನ್ ಸೈನ್ಸ್ ಇಂಜೀನಿರಿಂಗ್, ಮಾಸ್ಟರ್ ಆಫ್ ಸೈನ್ಸ್, ಮಾಸ್ಟರ್ ಆಫ್ ಬ್ಯುಸಿನೇಸ್ ಅಡ್ಮಿನಿಸ್ಟ್ರೇಷನ್ (ಎಂಬಿಎ), ಮಾಸ್ಟರ್ ಆಫ್ ಟೂರಿಸಂ, ಬ್ಯಾಚುಲರ್ ಆಫ್ ಬ್ಯುಸಿನೇಸ್ ಅಡ್ಮೀನಿಸ್ಟ್ರೇಶನ್, (ಬಿಬಿಎ), ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್(ಬಿಸಿಎ), ಎಂಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಂ.ಎ ಕನ್ನಡ ಮತ್ತು ಇಂಗ್ಲೀಷ್ ವಿಭಾಗದಿಂದ ೫ ಜನ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ತಮ್ಮ ಹೆಸರು ನೊಂದಾಯಿಸಿಕೊಂಡು ಪ್ರವೇಶ ಪಡೆದಿದ್ದರು.