ಮೈಸೂರು: ಸಾಹಿತಿ ಪ್ರೊ. ಕೆ.ಎಸ್ ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವ ಘಟನೆ ನಡೆಸಿದ ನ್ಯಾಯವಾದಿ ಮೀರಾ ರಾಘವೇಂದ್ರ ಅವರ ವಕೀಲ ವೃತಿಯ ಮೇಲೆ ನಿರ್ಬಂಧ ವಿಧಿಸಬೇಕೆಂದು ಅರಸು ಪ್ರತಿಷ್ಠಾನ ಸಮಿತಿಯ ಅಧ್ಯಕ್ಷರಾದ ಜಾಕೆರ್ ಹುಸೇನ್ ಹಾಗೂ ರಾಜ್ಯ ಪ್ರಧಾನ ಸಂಚಾಲಕರಾದ ಡೈರಿ ವೆಂಕಟೇಶ ಆಗ್ರಹಿಸಿದ್ದಾರೆ.
ಹಿಂದೂ ಧರ್ಮ ಹಾಗೂ ಶ್ರೀರಾಮನ ಬಗ್ಗೆ ಸದಾ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಆರೋಪಿಸಿ ಇಂದು ಕೋರ್ಟ್ ಆವರಣದಲ್ಲೇ ನ್ಯಾಯವಾದಿ ಮೀರಾ ರಾಘವೇಂದ್ರ ಈ ಕೃತ್ಯ ನಡರಸಿದ್ದಾರೆಂದು ಸಮಿತಿ ಆರೋಪಿಸಿ, ಆವರಣದಲ್ಲಿ ನಡೆದ ಘಟನೆ ಅಕ್ಷಮ್ಯ ಅಪರಾಧವಾಗಿದೆ ಎಂದು ತಿಳಿಸಿದ್ದಾರೆ.
ನ್ಯಾಯದ ಪರ ಕೆಲಸ ಮಾಡುವವರಿಂದಲೇ ಇಂತಹ ಕೃತ್ಯ ಸರಿಯಲ್ಲ. ಪ್ರೊ. ಭಗವಾನ್ ವಯಸ್ಸಿಗಾದರೂ ಬೆಲೆ ಕೊಡಬೇಕಾಗಿತ್ತು. ಇದು ವಕೀಲ ವೃತ್ತಿಗೆ ಮಾಡಿದ ಅಪಮಾನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀರಾ ರಾಘವೇಂದ್ರ ಅವರ ವಕೀಲ ವೃತಿಯ ಮೇಲೆ ನಿರ್ಬಂಧ ಹೇರುವಂತೆ ಅವರು ಆಗ್ರಹಿಸಿದ್ದಾರೆ.