ಆಳಂದ: ತಾಲೂಕಿನ ಸುಂಟನೂರ ಗ್ರಾಮ ಪಂಚಾಯತಿಯ ಮೊದಲ ಅವಧಿಯ 30 ತಿಂಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಶಾಸಕ ಸುಭಾಷ್ ಆರ್ ಗುತ್ತೇದಾರ ಬೆಂಬಲಿತ ಸುಜಾತಾ ಸಾಗರ ಅಧ್ಯಕ್ಷರಾಗಿ, ಅಪ್ಪಾರಾಯ ಶಿವಪ್ಪ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮ ಪಂಚಾಯತ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುಜಾತಾ ಸಾಗರ, ಉಪಾಧ್ಯಕ್ಷ ಸ್ಥಾನಕ್ಕೆ ಅಪ್ಪಾರಾಯ ಶಿವಪ್ಪ ನಾಮಪತ್ರ ಸಲ್ಲಿಸಿದ್ದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಜೆಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣೆ, ರಾಮಚಂದ್ರ ಅವರಳ್ಳಿ, ಸಂಗಯ್ಯ ಮಠಪತಿ, ವಿಠ್ಠಲ ತಳವಾರ, ಬಾಬುರಾವ ಪಟ್ಟಣ, ವಿಶ್ವನಾಥ ನ್ಯಾಮನ, ಶಿವಪುತ್ರ ನ್ಯಾಮನ, ಬಾಬುರಾವ ಪಾಣಢಗಾಂವ, ಅರ್ಜುನ ವಗ್ಗನ, ಶಾಂತು ನ್ಯಾಮನ, ಶಿವಾನಂದ ಕುಂಬಾರ, ಸಿದ್ದಾರೂಢ ಪಟ್ಟಣ, ಜಲಾಲೋದ್ದೀನ್ ಜಮಾದಾರ, ಬಾಬಾಸಾಬ್ ಜಮಾದಾರ ಸೇರಿದಂತೆ ಮುಖಂಡರು ಭಾಗವಹಿಸಿದ್ದರು.