ಗ್ರಾಪಂ ಗದ್ದುಗೆ ಹಿಡಿಯಲು ರಾಜಕೀಯ ರಂಗೇರುತ್ತಿರುವ ಕಣ

0
101

ಶಹಾಬಾದ: ತಾಲೂಕಿನ ನಾಲ್ಕು ಗ್ರಾಪಂಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಗ್ರಾಪಂ ಗದ್ದುಗೆ ಹಿಡಿಯಲು ರಾಜಕೀಯ ರಂಗೇರುತ್ತಿದೆ.

ಮರತೂರ ಗ್ರಾಪಂ ಸದಸ್ಯರನ್ನು ಬಿಟ್ಟರೇ ಉಳಿದ ಭಂಕೂರ,ತೊನಸನಹಳ್ಳಿ(ಎಸ್), ಹೊನಗುಂಟಾ ಮೂರು ಗ್ರಾಪಂಗಳಲ್ಲಿ ಜಿದ್ದಾಜಿದ್ದಿನ ಕಣ ಏರ್ಪಟ್ಟಿದ್ದು, ಆಕಾಂಕ್ಷಿಗಳು ಗದ್ದುಗೆ ಹಿಡಿಯಲು ತಮ್ಮ ಬೆಂಬಲಿಗರನ್ನು ಪ್ರವಾಸಕ್ಕೆ ತೆಗೆದುಕೊಂಡು ಹೋಗಿದ್ದಾರೆ.

Contact Your\'s Advertisement; 9902492681

ತೊನಸನಹಳ್ಳಿ(ಎಸ್), ಮರತೂರ ಗ್ರಾಪಂಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಫೆಬ್ರವರಿ ೫ ರಂದು ನಿಗದಿಯಾದರೇ, ಭಂಕೂರ ಮತ್ತು ಹೊನಗುಂಟಾ ಗ್ರಾಪಂ ಚುನಾವಣೆ ಫೆಬ್ರವರಿ ೬ ರಂದು ನಡೆಯಲಿದೆ. ಚುನಾವಣೆಗೆ ಕೇವಲ ಒಂದೆರಡು ದಿನಗಳಿರುವುದರಿಂದ ಎಲ್ಲರ ಚಿತ್ತ ಗ್ರಾಪಂಗಳತ್ತ ನೆಟ್ಟಿದೆ.ಈಗಾಗಲೇ ಆಯಾ ಗ್ರಾಪಂಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಅಧಿಕಾರದ ಗದ್ದುಗೆ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.ಸುಮಾರು ಇಪ್ಪತ್ತು ದಿನಗಳಿಂದ ಗ್ರಾಪಂ ಸದಸ್ಯರನ್ನು ಪುಣ್ಯ ಕ್ಷೇತ್ರಗಳಿಗೆ ಹಾಗೂ ರೇಸಾರ್ಟ ಮೋರೆ ಹೋಗಿದ್ದು ನೇರವಾಗಿ ಚುನಾವಣಾ ದಿನಾಂಕದಂದೆ ಬಂದು ಮತದಾನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.ಇಲ್ಲಿಯವರೆಗೆ ರಾಜಕೀಯಕ್ಕೆ ಮೀಸಲಿದ್ದ ರೇಸಾರ್ಟ ರಾಜಕೀಯ ಇಂದು ಹಳ್ಳಿಗೆ ತಲುಪಿದೆ.

ಗ್ರಾಪಂ ಚುನಾವಣೆ ಪಕ್ಷತೀತವಾದರೂ ಸದಸ್ಯರು ಮಾತ್ರ ಒಂದು ಪಕ್ಷಕ್ಕೆ ಅಂಟಿಕೊಂಡಿರುವುದರಿಂದ, ಈಗ ಪಕ್ಷದ ನಡುವಿನ ಜಿದ್ದಜಿದ್ದಿನ ಹೋರಾಟವಾಗಿ ಮಾರ್ಪಟ್ಟಿದೆ.ಮರತೂರ ಗ್ರಾಪಂಯಲ್ಲಿ ಬಹುತೇಖ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದರಿಂದ ಅವರಿಗೆ ಯಾರ ತೊಡಕಿಲ್ಲದೇ ಗದ್ದುಗೆ ಪಡೆಯಬಹುದು.ಆದರೆ ಉಳಿದ ಪಂಚಾಯತಿಗಳಲ್ಲಿ ನಿರ್ದಿಷ್ಟವಾದ ಬಹುಮತವಿಲ್ಲದ ಕಾರಣ ಯಾವ ಆಕಾಂಕ್ಷಿಗಳು ಸದಸ್ಯರ ಬೇಡಿಕೆ ಪೂರೈಸುತ್ತಾರೆ ಅವರ ಕಡೆಗೆ ವಾಲುತ್ತಿದ್ದಾರೆ.ಅಲ್ಲದೇ ಆಕಾಂಕ್ಷಿಗಳು ಸದಸ್ಯರನ್ನು ಸೆಳೆಯಲ್ಲು ಕಸರತ್ತು ನಡೆಸಿದ್ದಾರೆ.ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರ ಗುಂಪುಗಳು ಗೋವಾ, ದಕ್ಷಿಣ ಕನ್ನಡ, ಘತ್ತರಗಿ,ಬಾದಾಮಿ, ಗಣಗಾಪೂರ ಸೇರಿದಂತೆ ಅನೇಕ ತೀರ್ಥ ಕ್ಷೇತ್ರಗಳಿಗೆ ಕರೆದುಕೊಂಡು ಹೋಗಿದ್ದು, ಯಾರ ಒತ್ತಡಕ್ಕೆ ಮಣಿದು ಇತರ ಪಕ್ಷಗಳಿಗೆ ಪಲಾಯನವಾಗದಂತೆ ಮೊಬೈಲ್ ಬಂದ್ ಮಾಡಿಸಲಾಗಿದೆ.ಒಟ್ಟಾರೆ ಆಕಾಂಕ್ಷಿಗಳು ನಾನಾ ರೀತಿಯ ಲಾಭಿಗಳ ನಡುವೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಯಾರ ಪಾಲಾಗುತ್ತದೆ ಎಂಬುದಕ್ಕೆ ಚುನಾವಣಾ ದಿನಾಂಕದವರೆಗೆ ಕಾಯಬೇಕಿದೆ.

ತಾಲೂಕಿನ ನಾಲ್ಕು ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಆಯಾ ಗ್ರಾಪಂಗಳಲ್ಲಿ ನಡೆಯಲಿದ್ದು, ಅಂದು ಗ್ರಾಪಂ ಸದಸ್ಯರು ಚುನಾವಣಾಧಿಕಾರಿಗಳು ನೀಡಿದ ಪ್ರಮಾಣ ಪತ್ರಗಳೊಂದಿಗೆ ನಿಗದಿತ ಸಮಯದಲ್ಲಿ ಬರತಕ್ಕದ್ದು.ಅಲ್ಲದೇ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು- ಸುರೇಶ ವರ್ಮಾ ತಹಸೀಲ್ದಾರರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here