ಕೆ.ಎಸ್.ಭಗವಾನ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಅವರನ್ನು ಬಂಧಿಸಬೇಕೆಂದು ಆಗ್ರಹ

0
41

ಶಹಾಬಾದ:ಸಾಹಿತಿ ಕೆ.ಎಸ್.ಭಗವಾನ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಅವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಗುರುವಾರ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಸುರೇಶ ಮೆಂಗನ ಮಾತನಾಡಿ, ಸಾಹಿತಿ, ಪ್ರಗತಿಪರ ಚಿಂತಕರಾದ ಕೆ.ಎಸ್.ಭಗವಾನ ಅವರು ಜಾಮೀನು ಅರ್ಜಿ ಡೆಯಲು ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಹೋಗುತ್ತಿರುವ ಸಂದರ್ಭದಲ್ಲಿ ಮಾಧ್ಯಮದವರು ಬಂದಾಗ ಅವರ ಜತೆಗೆ ಮಾತನಾಡುವ ಸಂದರ್ಭದಲ್ಲಿ ಅಲ್ಲಿದ್ದ ಜಾತಿವಾದಿ ಮೀರಾ ರಾಘವೇಂದ್ರ ಎಂಬ ವಕೀಲೆ ಭಗವಾನ ಅವರ ಮುಖಕ್ಕೆ ಮಸಿ ಬಳಿದು ಅವಮಾನಿಸಿರುವುದು ಪ್ರಜ್ಞಾವಂತರ ತಲೆ ತಗ್ಗಿಸುವಂತ ವಿಷಯವಾಗಿದೆ. ತಾತ್ವಿಕ ಭೀನ್ನಾಭಿಪ್ರಾಯಗಳು ದೈಹಿಕ ಹಲ್ಲೆಗೆ ಹಾಗೂ ಹಿಂಸೆಗೆ ರೂಪ ತಾಳಬಾರದು.

Contact Your\'s Advertisement; 9902492681

ಭಾರತದಲ್ಲಿ ಸಂವಿಧಾನ ನಮಗೆ ಮಾತನಾಡುವ ಅವಕಾಶ ಕಲ್ಪಿಸಿದೆ.ಆದರೆ ಕಾನೂನುನನ್ನು ಗೌರವಿಸುವ ವಕೀಲೆ ಇದನ್ನು ತಿಳಿದುಕೊಳ್ಳದೇ, ಈ ರೀತಿಯ ಮಾಡಿರುವುದು ಖಂಡನೀಯ ವಿಷಯವಾಗಿದೆ.ಇತಿಹಾಸವನ್ನು ತಿಳಿದುಕೊಳ್ಳದೇ ಸತ್ಯಾಸಂಗತಿಯ ಅರಿವಿಲ್ಲದೇ ರಾಮನ ಬಗ್ಗೆ ಭಾವುಕರಾಗಿ ರಾಮ ಬಗ್ಗೆ ಮಾತನಾಡಿದರೇ ಸಾಲದು, ರಾಮನ ಬಗ್ಗೆ ಇತಿಹಾಸ ಗೊತ್ತಿರಬೇಕು.ಆದರೆ ಈ ಬಗ್ಗೆ ಯಾವುದೇ ಜ್ಞಾನ ಇಲ್ಲದೇ ಮಸಿ ಬಳಿದಿದ್ದಾರೆ.ಕೂಡಲೇ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಮುಖಂಡ ಕೃಷ್ಣಪ್ಪ ಕರಣಿಕ್ ಮಾತನಾಡಿ, ರಾಮ ರಾಜ್ಯದ ಕನಸು ಕಾಣುವ ಈ ದೇಶದಲ್ಲಿ ದಿನಿತ್ಯ ಅನ್ಯಾಯ,ಅತ್ಯಚಾರ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಡೆಯುತ್ತಿದ್ದರೂ ಒಂದು ಮಾತನಾಡದ ಮೀರಾ ರಾಘವೇಂದ್ರ ಅವರಿಗೆ ನಾಚಿಕೆವಾಗಬೇಕು.ಈ ದೇಶದ ಮಹಿಳೆಯರಿಗೆ ರಕ್ಷಣೆ ಮಾಡುತ್ತಿರುವುದು ರಾಮಾಯಣ, ಮಹಾಭಾರತದಿಂದಲ್ಲ.ಅದು ಸಂವಿಧಾನದಿಂದ ಎಂಬುದು ಅರ್ಥಮಾಡಿಕೊಳ್ಳಬೇಕು. ಆವೇಶದಿಂದ ನ್ಯಾಯಾಲಯದ ಆವರಣದಲ್ಲಿ ಮಸಿ ಬಳಿದ ಮೀರಾ ರಾಘವೇಂದ್ರ ಅವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು.ವಕೀಲೆ ವೃತ್ತಿಯ ಪರವಾನಗಿ ರದ್ದುಪಡಿಸಬೇಕು ಆಗ್ರಹಿಸಿದರು.ನಂತರ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಬಸವರಾಜ ಮಯೂರ,ಮಲ್ಲಣ್ಣ ಮಸ್ಕಿ, ಮಹಾದೇವ ನಾಲವಾರಕರ್,ಶಾಮ ನಂದೂರಕರ್,ಪೂಜಪ್ಪ ಮೇತ್ರೆ,ಲೋಹಿತ್ ಕಟ್ಟಿ, ಪ್ರವೀಣ ರಾಜನ್, ಮಲ್ಲಿಕಾರ್ಜುನ ಪೂಜಾರಿ, ಸಂತೋಷ ಬಂಡೇರ್, ಲಕ್ಷö್ಮಣ ತರನಳ್ಳಿ,ಶರಣು ಧನ್ನೇಕರ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here