ವಾಡಿ: ಇಂಗಳಗಿ ಗ್ರಾಪಂಗೆ ಶುಕ್ರವಾರ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದಿದ್ದು, ಅಧಿಕಾರ ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ. ಗುಪ್ತ ಮತಾದನದಲ್ಲಿ ತಲಾ ೧೪ ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಸುಭಾಷ್ ಯಾಮೇರ ಹಾಗೂ ಉಪಾಧ್ಯಕ್ಷೆಯಾಗಿ ಕಮಲಮ್ಮ ಭೀಮರಾಯ ಚುನಾಯಿತರಾದರು.
ಅಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಂಗೀತಾ ಚವ್ಹಾಣ ಹಾಗೂ ಉಪಾಧ್ಯಕ್ಷ ಸ್ಥಾನದ ಸಾವಿತ್ರಿ ದಾದರಾವ ತಲಾ ಆರು ಮತಗಳನ್ನು ಪಡೆದು ಪರಾಭವಗೊಂಡರು ಎಂದು ಚುನಾವಣಾಧಿಕಾರಿ ಅಣ್ಣಪ್ಪ ಕುದುರಿ ತಿಳಿಸಿದ್ದಾರೆ. ಪಿಡಿಒ ರೇಷ್ಮಾ ಕೋತ್ವಾಲ್ ಹಾಗೂ ಕಾರ್ಯದರ್ಶಿ ಶ್ರೀಶೈಲ ಕೊಟ್ಟರಗಿ ಇದ್ದರು.
ಗ್ರಾಪಂ ಮುಂದೆ ಜಮಾಯಿಸಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಕಾಂಗ್ರೆಸ್ ಹಿರಿಯ ಮುಖಂಡರಾದ ಅಣ್ಣಾರಾವಗೌಡ ಪಾಟೀಲ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಸೂರ್ಯಕಾಂತ ರದ್ದೇವಾಡಿ, ಶರಣು ನಾಟೀಕಾರ, ಮರಬಸಯ್ಯಸ್ವಾಮಿ, ಮಹ್ಮದ್ ಗೌಸ್ ದುದ್ದನಿ, ರುದ್ರುಗೌಡ ಪಾಟೀಲ, ಬಸವರಾಜ ಸ್ಥಾವರಮಠ, ಕಾಶೀನಾಥ ಚೆನಗುಂಡ, ಕಾದೀರ ಪಟೇಲ, ಶೇರಲಿ ದುದ್ದನಿ, ಮುಕ್ರುಮ್ ಪಟೇಲ, ಡಾ.ಗಫಾರ್, ಮಹ್ಮದ್ ಮೋದಿನ್ ಪಾಲ್ಗೊಂಡಿದ್ದರು.