ಜೇವರ್ಗಿ: ತಾಲೂಕಿನ ಕಟ್ಟಿಸಂಗಾವಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ೩ನೇ ತರಗತಿ ವಿದ್ಯಾರ್ಥಿ ಪ್ರಶಾಂತ ತಂದೆ ಸಂಗಣ್ಣ ವಿದ್ಯಾರ್ಥಿಯು ಪ್ರಜ್ಞಾ ದಿ ಇನ್ಸ ಟಿಟ್ಸಟ್ ಆಫ್ ಇನೊವೆಟವ ಲರ್ನಿಂಗ ಸಂಸ್ಥೆ ಆಯೋಜಿಸಿದ ಮಕ್ಕಳ ಹೃದಯಾಂತರಾಳದ ಶಿರ್ಷಿಕೆಯಡಿ ರಾಜ್ಯ ಮಟ್ಟದ “ಕಂದ ನಿಂದ ಕಥೆ” ಹೇಳುವ ಆನ್‌ಲೈನ ಮೂಲಕ ಸ್ಪರ್ಧೆ ಏರ್ಪಡಿಸಿದರು. ಇದರಲ್ಲಿ ೧೨೫ ಮಕ್ಕಳು ಭಾಗವಹಿಸಿದರು . ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಶಾಂತ ಕನ್ನಡ ರಾಜ್ಯೋತ್ಸ ಕಥೆಯನ್ನು ಹೇಳಿ ಈ ಕಥೆ ಸ್ಪರ್ಧೇಯಲ್ಲಿ ವಿಜೇತನಾಗಿ “ಪ್ರಜ್ಞಾ ಪ್ರಶಸ್ತಿ” ಪಡೆದುಕೊಂಡಿದಾನೆ.
ಈ ಸ್ಪರ್ಧೇಯಲ್ಲಿ ೬ ರಿಂದ ೧೮ ವರ್ಷದೊಳಗಿನ ಮಕ್ಕಳು ಭಾಗವಹಿಸಿದರು. ೩ ನೇ ತರಗತಿಯಲ್ಲಿ ಓದುತಿರುವ ಪ್ರಶಾಂತ ಇದರಲ್ಲಿ ವಿಜೇತನಾಗಿರುವುದು ನಮ್ಮ ಶಾಲೆಯ ಎಲ್ಲರಿಗೂ ಬಹಳ ಸಂತಸ ತಂದಿದೆ ಪ್ರಶಾಂತ ನಮ್ಮ ಶಾಲೆಗೆ ಕೀರ್ತಿ ತಂದಿದಾನೆ ಎಂದು ಮು.ಗು ವಿಜಯಲಕ್ಷ್ಮಿ ದೇಸಾಯ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ. ಗ್ರಾ.ಪಂ ಮದರಿಯ ಅಧ್ಯಕ್ಷ ರೇಖಾ ಗಂ/ ಸಂಗಣ್ಣ ಹಾಗೂ ಊರಿನ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.