ರಂಗಂಪೇಟೆ: ವೀರಶೈವ ಲಿಂಗಾಯತ ಸಮುದಾಯದ ಗಣ್ಯ ಸಾಧಕರಿಗೆ ಸನ್ಮಾನ

0
26

ಸುರಪುರ: ನಗರದ ರಂಗಂಪೇಟೆಯ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಿತಿ ವತಿಯಿಂದ ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಗಣ್ಯರು,ರಾಜ್ಯದಲ್ಲಿಯೇ ನಮ್ಮ ಸುರಪುರ ತಾಲೂಕಿನ ವೀರಶೈವ ಲಿಂಗಾಯತ ಸಮಿತಿ ಉತ್ತಮವಾದ ರೀತಿಯಲ್ಲಿ ಕೆಲಸ ಮಾಡುತ್ತಿದೆ.ಸುಸಜ್ಜಿತವಾದ ಕಲ್ಯಾಣ ಮಂಟಪ ಬಸವೇಶ್ವರ ಪತ್ತಿನ ಸಹಕಾರ ಸಂಘ ಬಸವೇಶ್ವರ ವಿದ್ಯಾರ್ಥಿ ನಿಲಯ, ಪ್ರಾಥಮಿಕ ಶಾಲೆ ಐಟಿಐ ಕಾಲೇಜು ಹೀಗೆ ಅನೇಕ ಸಮಾಜಮುಖ ಕಾರ್ಯಗಳನ್ನು ಮಾಡಿದೆ,ಇದು ಕೇವಲ ಒಬ್ಬರಿಂದಾದುದಲ್ಲ ಇಡೀ ಸುರಪುರ ಮತ್ತು ಹುಣಸಗಿ ತಾಲೂಕಿನ ಸಮಸ್ತ ವೀರಶೈವ ಲಿಂಗಾಯತ ಸಮುದಾಯದ ಜನತೆಯ ಶ್ರಮದ ಫಲವಾಗಿದೆ ಎಂದರು.

Contact Your\'s Advertisement; 9902492681

ಸಮಾಜದ ಅಭೀವೃಧ್ಧಿಗಾಗಿ ಅನೇಕ ಹಿರಿಯರು ತನು ಮನ ಧನದ ಮೂಲಕ ಸೇವೆಯನ್ನು ಸಲ್ಲಿಸಿದ್ದಾರೆ,ಅವರೆಲ್ಲರ ಶ್ರಮವನ್ನು ನಾವು ಸ್ಮರಿಸಬೇಕು ಹಾಗು ಹಿರಿಯರಿಗೆ ಗೌರವಿಸುವ ಮೂಲಕ ಮತ್ತಷ್ಟು ಸೇವೆಯನ್ನು ಮಾಡುವ ಜವಬ್ದಾರಿ ಯುವಕರ ಮೇಲಿದೆ ಎಂದರು.ಅಲ್ಲದೆ ಇನ್ನೂ ಕೆಲವು ತಿಂಗಳುಗಳಲ್ಲಿ ಬಸವೇಶ್ವರರ ಮೂರ್ತಿಯನ್ನು ಅನಾವರಣಗೊಳಿಸುವ ಕೆಲಸ ಆಗಲಿದೆ ಎಂದರು.

ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುಖಂಡರಾದ ನ್ಯಾಯವಾದಿ ಬಸವಲಿಂಗಪ್ಪ ಪಾಟೀಲ್ ಜಿಡಿಸಿಸಿ ಉಪಾಧ್ಯಕ್ಷ ಸುರೇಶ ಸಜ್ಜನ್ ಜಿ.ಪಂ ಅಧ್ಯಕ್ಷ ಬಸನಗೌಡ ಯಡಿಯಾಪುರ ಮಾಜಿ ಜಿ.ಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್ ಡಿಡಿಎಲ್‌ಆರ್ ಕಲಬುರಗಿ ಶಂಕರ ಖಾದಿ ಬಾಪುಗೌಡ ಪಾಟೀಲ್ ಹುಣಸಗಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಮನಗೌಡ ಸುಬೇದಾರ್ ಎಪಿಎಂಸಿ ಸದಸ್ಯ ಮಲ್ಲಣ್ಣ ಸಾಹು ಮುಧೋಳ ಕಸಾಸಂ ಅಧ್ಯಕ್ಷ ಬಸವರಾಜ ಜಮದ್ರಖಾನಿ ಸಾಹಿತಿ ವಿರೇಶ ಹಳ್ಳೂರ್ ನಯೋಪ್ರಾ ಅಧ್ಯಕ್ಷ ಪ್ರಕಾಶ ಸಜ್ಜನ್ ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್ ನಗರಸಭೆ ಸದಸ್ಯ ಮುತ್ತಮ್ಮ ಅಕ್ಕಿ ನಯೋಪ್ರಾ ಸದಸ್ಯ ವೀರಭದ್ರಪ್ಪ ಕುಂಬಾರ ವೀರಶೈವ ಮಹಾಸಭಾದ ಗೌರವಾಧ್ಯಕ್ಷ ಶರಣಪ್ಪ ಕಲಕೇರಿ ಅಧ್ಯಕ್ಷ ಮಂಜುನಾಥ ಜಾಲಹಳ್ಳಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಹಾಗು ಬಸವೇಶ್ವರ ಪತ್ತಿನ ಸಹಕಾರ ಸಂಘದ ಡಿ.ಸಿ.ಪಾಟೀಲ್ ಶ್ವೇತಾ ಎಮ್.ಗುಳಗಿ ಸೇರಿದಂತೆ ಎಲ್ಲಾ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡ ಸೂಗುರೇಶ ವಾರದ ಪ್ರಾಸ್ತಾವಿಕವಾಗಿ ಮಾತನಾಡಿದರು,ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಸಾಪ ಮಾಜಿ ಅಧ್ಯಕ್ಷ ಶಾಂತಪ್ಪ ಬೂದಿಹಾಳ ಹೆಚ್.ಸಿ ಪಾಟೀಲ್ ಸಂಗನಗೌಡ ಪಾಟೀಲ್ ವಜ್ಜಲ ಜಯಲಲಿತಾ ಪಾಟೀಲ್ ಬಸವರಾಜ ಜಮದ್ರಖಾನಿ ರಾಜಶೇಖರ ಪಾಟೀಲ್ ವಜ್ಜಲ್ ಜಿ.ಪಂ ಅಧ್ಯಕ್ಷ ಬಸನಗೌಡ ಯಡಿಯಾಪುರ ಸುರೇಶ ಸಜ್ಜನ್ ಬಸವಲಿಂಗಪ್ಪ ಪಾಟೀಲ್ ಶಂಕರ ಖಾದಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾ ವೀರಪ್ಪ ಆವಂಟಿ ಶಿವರಾಜಪ್ಪ ಗೋಲಗೇರಿ ಬಸಣ್ಣ ಸಾಹು ಬೂದುರ ನ್ಯಾಯವಾದಿ ಜಿ.ಎಸ್.ಪಾಟೀಲ್ ಸಂಗಣ್ಣ ಯಕ್ಕೆಳ್ಳಿ ವೇದಿಕೆ ಮೇಲಿದ್ದರು ನಿವೃತ್ತ ಶೀಕ್ಷಕ ಶಿವಕುಮಾರ ಮಸ್ಕಿ ನಿರೂಪಿಸಿದರು,ಸೋಮಶೇಖರ ಶಾಬಾದಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here