ಸುರಪುರ: ತಾಲೂಕಿನ ಎಲ್ಲಾ ರೈತರ ಪಂಪಸೆಟ್‌ಗಳಿಗೆ ೧೫ ತಾಸುಗಳ ವಿದ್ಯೂತ್ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ವತಿಯಿಂದ ರಂಗಂಪೇಟೆಯ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ಗ್ರಾಮೀಣ ಭಾಗದಲ್ಲಿ ರೈತರಿಗೆ ಸದ್ಯ ೭ ತಾಸುಗಳು ವಿದ್ಯೂತ್ ನೀಡಲಾಗುತ್ತಿದ್ದು ಇದರಿಂದ ರೈತರ ಬೆಳೆಗಳಿಗೆ ಸರಿಯಾಗಿ ನೀರು ಸಿಗದೆ ರೈತರು ಸಂಕಷ್ಟ ಹೆದರಿಸುವಂತಾಗಿದೆ.ಆದ್ದರಿಂದ ಎಲ್ಲಾ ರೈತರ ಪಂಪಸೆಟ್‌ಗಳಿಗೆ ಕನಿಷ್ಟ ೧೫ ತಾಸುಗಳ ವಿದ್ಯೂತ್ ನೀಡಬೇಕು.ಸದ್ಯ ನೀಡುತ್ತಿರುವ ವಿದ್ಯೂತ್ ಆಗಾಗ ಕಡಿತಗೊಳ್ಳುತ್ತಿರುವುದರಿಂದ ಬೆಳೆಗಳಿಗೆ ಸರಿಯಾಗಿ ನೀರೆ ಸಿಗುತ್ತಿಲ್ಲ ಇದರಿಂದ ರೈತರ ಬೆಳೆ ಕೈಗೆ ಬಾರದಂತಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಲ್ಲದೆ ಹೆಗ್ಗಣದೊಡ್ಡಿ ಗೊಡ್ರಿಹಾಳ ಚಿಗರಿಹಾಳ ತಿಪ್ಪನಟಿಗಿ ಮಾಲಗತ್ತಿ ಈ ಭಾಗದ ರೈತರಿಗೆ ಕೆಂಭಾವಿ ವಿತರಣಾ ಕೇಂದ್ರದಿಂದ ವಿದ್ಯೂತ್ ಸರಬರಾಜಾಗುತ್ತಿದ್ದು ಇದರಿಂದ ರೈತರಿಗೆ ಸರಿಯಾಗಿ ವಿದ್ಯೂತ್ ದೊರೆಯುತ್ತಿಲ್ಲ,ಆದ್ದರಿಂದ ಮಾಚಗುಂಡಾಳ ತಿಪ್ಪನಟಿಗಿ ಮದ್ಯದ ಆಂಜನೇಯ ಕ್ಯಾಂಪ್ ಬಳಿಯ ವಿತರಣಾ ಕೇಂದ್ರದಿಂದ ವಿದ್ಯೂತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿದರು.
ನಂತರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಬರೆದ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಹಯ್ಯಾಳ ತಾಲೂಕು ಅಧ್ಯಕ್ಷ ಹೆಚ್.ಆರ್.ಬಡಿಗೇರ ಕೆಂಭಾವಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಧರಮಿಬಾಯಿ ಗೊಡ್ರಿಹಾಳ ಬಸವರಾಜ ದೇವಿಂದ್ರಪ್ಪ ಬನಗೊಂಡಿ ಸಿದ್ರಾಮಪ್ಪ ಹಯ್ಯಾಳ ಶೇಖಪ್ಪ ಸಜ್ಜನ್ ಬಸವರಾಜ ಅಂಗಡಿ ದೇವರಾಜ ಗೌಡಗೇರಾ ಶರಣಗೌಡ ಚಂದ್ರಕಾಂತ ನಿಂಗಣ್ಣ ಜೈನಾಪುರ ಸಿದ್ದು ಯಡಿಯಾಪುರ ಮಲಕರೆಡ್ಡಿ ಮುದನೂರ ನಾರಾಯಣ ಸೇರಿದಂತೆ ಅನೇಕರಿದ್ದರು.