- ಡಾ. ರಾಜಕುಮಾರ ಎಂ. ದಣ್ಣೂರ
ಕಲಬುರಗಿ: ವಿಮರ್ಶೆ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ ಪರಮಪೂಜ್ಯ ಲಿಂ. ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಪ್ರಭುಗಳ 35ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಬೀದರ್ ಜಿಲ್ಲಾ ಪ್ರಥಮ ಕವಿ ಸಮ್ಮೇಳನದಲ್ಲಿ ಡಾ. ಸುನಿಲ ಜಾಬಾದಿ ಅವರಿಗೆ “ಕಲ್ಯಾಣ ರತ್ನಶ್ರೀ ಪ್ರಶಸ್ತಿ” ನೀಡಿ ಸನ್ಮಾನಿಸಿ ಗೌರವಿಸಲಾಗಿದೆ.
ಭೀಮೆಯ ಬಯಲು ಸೀಮೆಯ ಹುಡುಗ ಸದಾ ಲವಲವಿಕೆಯಿಂದ ಯಾವುದಾದರೊಂದು ಸಾಧನೆಯ ಹಾದಿ ಹುಡುಕುವ ಹುಮ್ಮಸಿನಲ್ಲಿ ಸಾಹಿತ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡು ಸಾಹಿತ್ಯ ಕೃಷಿ ಮಾಡುತ್ತಿರುವ ಡಾ. ಸುನಿಲ ಜಾಬಾದಿ ಅವರು ಯುವಪೀಳಿಗೆಯ ಲೇಖಕರಲ್ಲಿ ಎದ್ದು ಕಾಣುವ ಹೆಸರು.
ಹೊಸದನ್ನು ಕಾಣುವ, ಹುಡುಕುವ, ವಿಮರ್ಶಿಸುವ, ಚಿಂತನೆಯ ಒರೆಗಲ್ಲಿಗೆ ಹಚ್ಚುವುದು ಇವರ ವಿಶೇಷ ಗುಣ. ಸಾಹಿತ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವವರು ತುಂಬಾ ವಿರಳ. ಒಂದುಕಾಲದಲ್ಲಿ ಜನರ ಅಭಿಪ್ರಾಯ ಹಾಗಿತ್ತು “ಅದರಿಂದ ಏನು ಲಾಭವಿಲ್ಲ, ನಮ್ಮ ಕೈಯಿಂದಲೇ ಹಣ ವ್ಯಯಿಸಬೇಕಾಗುತ್ತದೆ. ಈಗಿನ ಕಾಲದಲ್ಲಿ ಒಂದು ಕೃತಿ ಬಿಡುಗಡೆ ಗೊಳಿಸಿದರೆ ಅದನ್ನು ಕೊಂಡು ಓದುವ ಓದುಗರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ೩೦-೪೦ಸಾವಿರ ಖರ್ಚು ಬಂದರೆ ಸಾಹಿತಿಗೆ ಅಷ್ಟೇನು ಲಾಭ ಸಿಗುವುದಿಲ್ಲ. ಆದರೆ ಹೆಸರು ,ಕೀರ್ತಿ,ಸನ್ಮಾನ, ಹೊಗಳಿಕೆಯ ಮಾತು ಕಿವಿತುಂಬುತ್ತದೆ.
ಜೇಬು ತುಂಬುವುದು ಅನುಮಾನವೇ ಅದನ್ನು ನಂಬಿ ಜೀವನ ನಡೆಸಲು ಅಸಾಧ್ಯ ಎನ್ನುತ್ತಿದ್ದರು. ಆದರೆ ಈಗಿನ ಯುವ ಪೀಳಿಗೆಯವರು ಆ ಮಾತನ್ನು ಸುಳ್ಳುಮಾಡಲು ಹೊರಟಿದ್ದಾರೆ. ಪುಸ್ತಕವನ್ನು ಕೊಂಡು ಓದುವ ಒಂದು ವರ್ಗ ಇನ್ನೂ ಇದೆ. ಹಿರಿಯ ಸಾಹಿತಿಗಳ ಅನುಭವೀ ಸಾಹಿತಿಗಳ ಹೊಸಹೊಸ ಕೃತಿಗಳು ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿರುತ್ತಾರೆ.
ಆನ್ಲೈನ್ ಮೂಲಕ ಕೊಂಡು ಓದುತ್ತಾರೆ. ಅಲ್ಲದೇ ಪುಸ್ತಕದ ಮಳಿಗೆಗಳಿಗೆ ಭೇಟಿನೀಡಿ ಕೊಂಡುಕೊಳ್ಳುತ್ತಾರೆ. ಬರವಣಿಗೆ ಎನ್ನುವುದು ಕವಿಯ ಮನಸ್ಸಿನ ವಿವಿಧ ತುಮುಲಗಳನ್ನು , ಭಾವನೆಗಳನ್ನು ಹೊರಹಾಕುವ ಪ್ರಕ್ರೀಯೆ ಎನ್ನಬಹುದು. ಕೆಲವರು ಕಲ್ಪನೆಗೆ ಜೀವನೀಡುತ್ತಾರೆ. ಇನ್ನು ಕೆಲವರು ತಮ್ತಮ್ಮ ಪ್ರೀತಿ ಪಾತ್ರರ ಹೊಗಳಿ ಬರೆಯುತ್ತಾರೆ. ಇನ್ನು ಸಾಮಾಜಮುಖಿಯಾಗಿ, ಕ್ರಾಂತಿಕಾರಿಯಾಗಿ ಸಮಾಜದಲ್ಲಿ ,ಜನರಲ್ಲಿ ಸಂಚಲನ ಮೂಡಿಸುವಂತೆ ಬರೆಯುವವರು ಇದ್ದಾರೆ.
ಬರವಣಿಗೆ ಎನ್ನುವುದು ಕವಿಯ ಮನಸ್ಸಿನ ವಿವಿಧ ತುಮುಲಗಳನ್ನು , ಭಾವನೆಗಳನ್ನು ಹೊರಹಾಕುವ ಪ್ರಕ್ರೀಯೆ ಎನ್ನಬಹುದು. ಕೆಲವರು ಕಲ್ಪನೆಗೆ ಜೀವನೀಡುತ್ತಾರೆ. ಇನ್ನು ಕೆಲವರು ತಮ್ತಮ್ಮ ಪ್ರೀತಿ ಪಾತ್ರರ ಹೊಗಳಿ ಬರೆಯುತ್ತಾರೆ. ಇನ್ನು ಸಾಮಾಜಮುಖಿಯಾಗಿ, ಕ್ರಾಂತಿಕಾರಿಯಾಗಿ ಸಮಾಜದಲ್ಲಿ ಹಾಗೂ ಜನರ ಮನಸ್ಸಿನಲ್ಲಿ ಸಂಚಲನ ಮೂಡಿಸುವಂತೆ ಬರೆಯುವವರು ಇದ್ದಾರೆ.
ಡಾ.ಜಾಬಾದಿ ಅವರು ಗ್ರಾಮೀಣ ಪ್ರದೇಶದ ಅಪ್ಪಟ ಹಳ್ಳಿ ಪ್ರತಿಭೆ. ಬುದ್ಧ, ಬಸವ, ಡಾ. ಬಿ.ಆರ್ ಅಂಬೇಡ್ಕರ್, ಪೆರಿಯಾರ್, ನಾರಾಯಣಗುರು ಹೀಗೆ ಸಾಮಾಜಿಕ ಹೋರಾಟಗಾರರ ಚಿಂತನೆಯನ್ನು ಮೈಗೂಡಿಸಿಕೊಂಡು ಅವರ ಚಿಂತನೆಯ ದಾರಿಯಲ್ಲಿ ಸಾಗುತ್ತಿರುವ ಈ ಯುವ ಲೇಖಕ. ಆ ಅರಿವಿನ ಮೂಲಕ ಬುದ್ಧತ್ವ-ಅಂಬೇಡ್ಕರ್ ತತ್ವ ಚಿಂತನೆಗಳನ್ನು ಅರಿತುಕೊಂಡು ಹಲವಾರು ಲೇಖನ, ಕವನಗಳು, ಅನೇಕ ವಿಚಾರ ಸಂಕಿರಣ, ಕವಿಗೋಷ್ಠಿ ಗೋಷ್ಠಿಗಳಲ್ಲಿ ಮಂಡಿಸಿದ ಲೇಖನಗಳು ಪ್ರಕಟಗೊಂಡಿವೆ.
ಇವರ ವಿಮರ್ಶೆ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ ಪರಮಪೂಜ್ಯ ಲಿಂ ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಪ್ರಭುಗಳ 35ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಬೀದರ್ ಜಿಲ್ಲಾ ಪ್ರಥಮ ಕವಿ ಸಮ್ಮೇಳನದಲ್ಲಿ “ಕಲ್ಯಾಣ ರತ್ನಶ್ರೀ ಪ್ರಶಸ್ತಿ” ನೀಡಿ ಸನ್ಮಾನಿಸಿ ಗೌರವಿಸಲಾಗಿದೆ.