ಕಾನೂನು ಸೇವಾ ಪ್ರಾಧಿಕಾರದಿಂದ 5 ದಿನಗಳ ಕಾರ್ಯಾಗಾರ

0
100

ಕಲಬುರಗಿ: ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ, ಕಾನೂನು ಸೇವಾ ಪ್ರಾಧಿಕಾರದ ಸಭಾಭವನದಲ್ಲಿ 5 ದಿನಗಳ ಕಾರ್ಯಾಗಾರ ತರಬೇತಿ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ಜೇನವೆರಿ ವಿನೋದಕುಮಾರ ರವರು 3 ನೇ ದಿನದ ಕಾರ್ಯಾಗಾರದಲ್ಲಿ ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿ, ಸರಕಾರಿ ಅದೇಶಗಳು ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳು ಹಾಗೂ MNREGA ಕಾಯ್ದೆ ಕುರಿತು ಮಾತನಾಡಿದರು.

Contact Your\'s Advertisement; 9902492681

ಮೊದಲಿಗೆ, ಕಾರ್ಯಗಾರದ ಸಂಯೋಜಕರಲ್ಲಿ ಒಬ್ಬರಾದ ನ್ಯಾಯವಾದಿ ಪ್ರೇಮ ಮೋದಿ ಯವರು ಬರಮಾಡಿಕೊಂಡರು,  ನ್ಯಾಯವಾದಿಗಳ ಸಂಘದ ಮಾಜಿ ಕಾರ್ಯದರ್ಶಿ. ಬಿಎನ್ ಪಾಟೀಲ ಹೂಗುಚ್ಛ ನೀಡಿ ಸ್ವಾಗತಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಆಯ್ದ ಸ್ವಯಂ ಸೇವಕರು ಅಸಕ್ತಿ ವಹಿಸಿ ಸರಕಾರಿ ಆದೇಶ ಗಳು ಹೇಗೆ ಪ್ರಶ್ನಿಶಬೇಕು ಎನ್ನುವ ಬಗ್ಗೆ ಅಲ್ಲದೆ ಸಾಮಾಜಿಕ ಕಲ್ಯಾಣ ಯೋಜನೆಗಳ ಕುರಿತು ತಿಳಿದುಕೊಂಡರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಶೆಟ್ಟರ ವಹಿಸಿದ್ದರು.  ಇನ್ನೋರ್ವ ನ್ಯಾಯವಾದಿ ಕಾರ್ಯಾಗಾರದ ಸಹಾಯಕ ಸoಯೋಜಕ ಗಣೇಶ ಅಂಕಲಗಿ ನಿರೂಪಣೆ ಗೈದು, ವಂದಿಸಿದರು. ಕಾರ್ಯಕ್ರಮ ದಲ್ಲಿ ಹಿರಿಯ ಹಾಗೂ ಕಿರಿಯ ನ್ಯಾಯವಾದಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here