ಶಹಾಬಾದ: ಪಂಡಿತ್ ದೀನ್ದಯಾಳ ಉಪಾಧ್ಯಾಯ ಅವರು ಸರಳ ಜೀವಿಯಾಗಿದ್ದು, ಬಿಜೆಪಿಗೆ ಭದ್ರ ಬುನಾದಿ ಹಾಕಿದ ದೀಮಂತ ನಾಯಕರಲ್ಲಿ ಅವರು ಒಬ್ಬರಾಗಿದ್ದರು ಎಂದು ವಾಡಿ-ಶಹಾಬಾದ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಹೇಳಿದರು.
ಅವರು ಗುರುವಾರ ಬಿಜೆಪಿ ಪಕ್ಷದ ವತಿಯಿಂದ ನಗರದ ಬಿಜೆಪಿ ಕಛೇರಿಯಲ್ಲಿ ಪಂಡಿತ್ ದೀನ್ದಯಾಳ ಉಪಾಧ್ಯಾಯರ ಪುಣ್ಯತಿಥಿ ಅಂಗವಾಗಿ ಆಯೋಜಿಸಲಾದ ಸಮರ್ಪಣ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು
ದೀನ್ ದಯಾಳ್ ಅವರು ಜನರ ನಾಡಿ ಮಿಡಿತಗಳನ್ನು ಅರ್ಥೆಸಿಕೊಳ್ಳುವ ಮೂಲಕ ಹೋರಾಟ ಮನೋಭಾವ ಹೆಚ್ಚಿಸಿಕೊಂಡಿದ್ದರು.ಪಕ್ಷ ಸಂಘಟನೆಗಾಗಿ ಸಾಕಷ್ಟ ಶ್ರಮಿಸಿದ್ದಾರೆ.ಅವರ ಆದರ್ಶ ಗುಣಗಳು, ಮಾರ್ಗದರ್ಶನಗಳನ್ನು ಎಲ್ಲಾ ಕಾರ್ಯಕರ್ತರು ಪಾಲಿಸಬೇಕೆಂದು ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಶರ್ಮಾ ಮಾತನಾಡಿ,ಪಕ್ಷ ಸಂಘಟನೆಯಲ್ಲಿ ಪ್ರತಿಯೊಬ್ಬರೂ ಶ್ರದ್ಧೆಯಿಂದ ಪಾಲ್ಗೊಳ್ಳಬೇಕು.ಇಂದು ಪಕ್ಷಕ್ಕಾಗಿ ದುಡಿದು ತನ್ನನ್ನು ತಾನು ಅರ್ಪಿಸಿಕೊಂಡವರು ಉತ್ತಮ ನಾಯಕರಾಗಿ ಹೊರಹೊಮ್ಮಿದ್ದಾರೆ.ಅಂದಿನ ದಿನಗಳಲ್ಲಿ ಭೂತಪೂರ್ವ ಪತ್ರಿಕೆಯನ್ನು ಹೊರತಂದು ಬ್ರಿಟಿಷರ ದೌರ್ಜನ್ಯದ ವಿರುದ್ಧ ನೇರ ನುಡಿಗಳ ಮೂಲಕ ಪತ್ರಿಕೆಯ ಶಕ್ತಿ, ಸಾಮರ್ಥ್ಯ ಎಷ್ಟು ಎಂಬುದನ್ನು ತೋರಿಸಿದ್ದರು.ಅವರ ಕೆಲ ಪುಸ್ತಕಗಳು ಜೀವನಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
ಭಾವಚಿತ್ರಕ್ಕೆ ಮಂಡಲ ಉಪಾಧ್ಯಕ್ಷೆ ಶಶಿಕಲಾ ಸಜ್ಜನ ಪೂಜೆ ನೇರವೇರಿಸಿದರು. ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗೀರಥಿ ಗುನ್ನಾಪುರ,ಸದಾನಂದ ಕುಂಬಾರ, ಅರುಣ ಪಟ್ಟಣಕರ,ಸುಭಾಷ್ ಜಾಪುರ,ಸೂರ್ಯಕಾಂತ ವಾರದ,ಶಿವಗೌಡ ಪಾಟೀಲ,ರಾಜು ದಂಡಗೂಲಕರ, ತಿಮ್ಮಣ್ಣ ಕುರ್ಡೆಕರ,ದತ್ತ ಫಂಡ,ಪಾರ್ವತಿ ಪವರ,ಭಿಮಯ್ಯ ಗುತ್ತೆದಾರ, ನಿಂಗಣ್ಣ ಹುಳಗೋಳಕರ,ರಾಮು ಕುಸಾಳೆ,ಜಯಶ್ರೀ ಗೌಳಿ,ದುರ್ಗಪ್ಪ ಪವರ,ಅಣ್ಣಪ್ಪ ದಸ್ತಾಪೂರ,ದೀನೆಶ ಗೌಳಿ,ಸುಭಾಷ್ ಕುಸಾಳೆ, ಜಗದೇವ ಸುಭೆದಾರ, ಬುಗಪ್ಪ ಎಲ್ಲೆರಿ,ಸುನೀಲ ನಿಕ್ಕಮ್ಮ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಂಡಲ ಪ್ರಧಾನ ಕಾರ್ಯದರ್ಶಿ ಸಿದ್ರಾಮ ಕುಸಾಳೆ ನಿರೂಪಿಸಿ, ಸ್ವಾಗತಿಸಿದರು. ಬಸವರಾಜ ಬಿರಾದಾರ ವಂದಿಸಿದರು.