ಡಾ. ಖರ್ಗೆಯವರಿಗೆ ಬೆದರಿಕೆ ಕರೆ: ಮುಖಂಡರ ಖಂಡನೆ

0
56
kharge

ಕಲಬುರಗಿ: ಕಾಂಗ್ರೆಸ್ ಪಕ್ಷದ ಹಿರಿಯ ರಾಷ್ಟ್ರೀಯ ನಾಯಕರಾದಂತಹ ಡಾ. ಮಲ್ಲಿಕಾರ್ಜುನ ಖರ್ಗೆಯವರಿಗೆ ಬೆದರಿಕೆ ಕರೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಆಳಂದ ಮಾಜಿ ಶಾಸಕರಾದ ಬಿಆರ್ ಪಾಟೀಲ್ ಹಾಗೂ ಕೆಪಿಸಿಸಿ ಸದಸ್ಯ ಹಣಮಂತ ಭೂಸನೂರ್ ಸದರಿ ಬೆಳವಣಿಗೆಯನ್ನು ಕಟು ಶಬ್ದಗಳಲ್ಲಿ ಖಂಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ರಾಜ್ಯಸಭೆ ಸದಸ್ಯರು, ಕಾಂಗ್ರೆಸ್ ಹಿರಿಯ ನಾಯಕರು, ಮಾಜಿ ಕೇಂದ್ರ ಸಚಿವರು ಆಗಿರುವ ಡಾ. ಮಲ್ಲಿಕಾರ್ಜುನ ಖರ್ಗೆಯವರಿಗೆ 2 ದಿನಗಳ ಹಿಂದೆ ಮಧ್ಯಪ್ರದೇಶದಿಂದ ಬೆದರಿಕೆ ಕರೆ ಬಂದಿದೆ, ಈ ಬೆಳವಣಿಗೆ ಖಂಡಿಸುತ್ತೇನೆ. ಈ ಮುಂಚೆಯೂ ಖರ್ಗೆಯವರಿಗೆ ಕರೆಗಳು ಬಂದಿದ್ದಿವೆ. ಈ ಬಗ್ಗೆ ದೂರು ದಾಖಲಿಸಿದರೂ ಇಂದಿಗೂ ತಪ್ಪಿತಸ್ಥರನ್ನು ಪತ್ತೆ ಹಚ್ಚುವ ಕೆಲಸವಾಗಿಲ್ಲವೆಂದು ದೂರಿದ್ದಾರೆ.

Contact Your\'s Advertisement; 9902492681

ಈಗಲಾದರೂ ಬೆದರಿಕೆ ಕರೆ ಮಾಡಿದವರು ಯಾರು? ಅವರು ಯಾಕೆ ಹೀಗೆ ಮಾಡುತ್ತಿದ್ದಾರೆಂಬ ಬಗ್ಗೆ ಸಂಪೂರ್ಣ, ಸಮಗ್ರ ತನಿಖೆಯಾಗಬೇಕು. ಅವರನ್ನು ಹುಡುಕಿ ಶಿಕ್ಷೆಗೆ ಗುರಿ ಪಡಿಸುವ ಕೆಲಸ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಲಿ. ಬೆದರಿಕೆ ಕರೆ ಮಾಡುವುದು ಖಂಡನೀಯ ಸಂಗತಿ. ಹೇಡಿಗಳು ಈ ಕೆಲಸ ಮಾಡುತ್ತಿದಾರೆ. ಆದರೆ ಇದನ್ನು ಹಾಗೇ ಬಿಡುವಂತಿಲ್ಲ. ತನಿಖೆ ಮಾಡಿ ದುಷ್ಕರ್ಮಿಗಳನ್ನು ಹುಡುಕಿ ದಂಡಿಸುವ ಕೆಲಸವಾಗಲಿ ಎಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here