ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರಾಷ್ಟ್ರಪತಿಗಳಿಗೆ ಮನವಿ

0
58

ಕಲಬುರಗಿ: ತೈಲ ದರ ಏರಿಕೆ ಬೆನ್ನಲ್ಲೇ ಗಗನಕ್ಕೇರಿದ ಆಹಾರ ಸಾಮಗ್ರಿಗಳ ಬೆಲೆ ರಾಜ್ಯದಲ್ಲಿ ಅಡುಗೆ ಅನಿಲ ಆಹಾರ ಧಾನ್ಯ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಸದ್ದಿಲ್ಲದೆ ಗಗನಕ್ಕೇರಿದನ್ನು ಖಂಡಿಸಿ, ಬೆಲೆ ಏರಿಕೆ ಕಡಿತಗೊಳಿಸಬೇಕೆಂದು ಒತ್ತಾಯಿಸಿ ನಯಾ ಸವೇರಾ ಸಂಘಟನೆ ವತಿಯಿಂದ ರಾಷ್ಟ್ರಪತಿಗಳಿಗೆ ಆಗ್ರಹಿಸಿದರು.

ಹಾಲು, ಪ್ರಯಾಣದರ, ಹಾಗೂ ತಿಂಡಿತಿನಿಸುಗಳನ್ನು ಮಾಡಬೇಕೆನ್ನುವ ಮಾತುಗಳು ಹೆಚ್ಚಾಗುತ್ತಿವೆ .ವಾರದ ಹಿಂದೆ ರಾತೋರಾತ್ರಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಾಯ್ತು ಅಡುಗೆ ಅನಿಲ ಎರಡರಿಂದ ಮೂರು ತಿಂಗಳ ಹಿಂದೆ 550 ಇವಾಗ 727 ರೂಪಾಯಿ ಆಗಿದೆ. ಎರಡು ತಿಂಗಳಲ್ಲಿ ಅಡುಗೆ ಅನಿಲ ದರ ಏರಿಕೆಯಾಗಿದೆ. ಅಹಾರಧಾನ್ಯಗಳ ಧಾನ್ಯಗಳದ ತೊಗರಿ ಬೇಳೆ, ಉದ್ದಿನ ಬೇಳೆ, ಅಕ್ಕಿ, ಅಡುಗೆ ಎಣ್ಣೆ ,ಸೇರಿದಂತೆ ಅನೇಕ ವಸ್ತುಗಳಲ್ಲಿ 30ರಿಂದ 40 ರೂಪಾಯಿ ಹೆಚ್ಚಳ ಆಗಿದೆ. ತೋಟಗಾರಿಕೆ ಬೆಳೆಗಳಾದ ಬೀನ್ಸ್ ,ಈರುಳ್ಳಿ ,ದೊಡ್ಡ ಮೆಣಸಿನಕಾಯಿ, ಕುಂಬಳಕಾಯಿ, ಸೋರೆಕಾಯಿ, ಹೀರೇಕಾಯಿ, ದರ ಹೆಚ್ಚಾಗಿದೆ. ಪೆಟ್ರೋಲ್ ಬೆಲೆ ಒಂದು ವರ್ಷದಲ್ಲಿ 20 ಬಾರಿ ಹೆಚ್ಚಳವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕಳೆದ ಎರಡು ತಿಂಗಳಿನಲ್ಲಿ ಅಡುಗೆ ಅನಿಲ ದರ ಹೆಚ್ಚಳವಾಗಿದ್ದು, ಆಹಾರಧಾನ್ಯಗಳು ವಾರದ ಹಿಂದೆ ತೊಗರಿಬೇಳೆ 90 ರಿಂದ 110 ಹೆಚ್ಚಾಗಿದೆ. ಉದ್ದಿನಬೇಳೆ 85ರಿಂದ 120 ಹೆಚ್ಚಾಗಿದೆ .ಅಕ್ಕಿ ಐವತ್ತು 60ರಿಂದ 70 ರೂಪಾಯಿ ಆಗಿದೆ. ಅನೇಕ ರೀತಿಯ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿದೆ. ಸಾಮಾನ್ಯ ಜನರು ತುಂಬ ತೊಂದರೆಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದ ಮನವಿ ಪತ್ರದಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಜನರ ಮೇಲೆ ಸಂಕಷ್ಟ ಹೆಚ್ಚಿನ ಪ್ರಮಾಣ ಬಿರಿದ್ದು, ಸಾಮಾನ್ಯ ಜನರು ಜೀವನ ಮಾಡೋದು ತುಂಬಾ ಕಷ್ಟವಾಗಿದೆ. ಕೆಲಸವಿಲ್ಲದೆ ಒದ್ದಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಇದೆಲ್ಲ ಕಣ್ಣಿಗೆ ಕಂಡರೂ ಕಾಣದ ಹಾಗೆ ಇದೆ. ಆಹಾರ ಸಾಮಗ್ರಿಗಳ ದರ ಕಡಿಮೆ ಮಾಡಿ. ಜನರ ಉಪಯೋಗಕ್ಕೆ ಬಳಸುವ ವಸ್ತುಗಳ ಬೆಲೆ ಕಡಿಮೆ ಮಾಡಿ ಇಲ್ಲ ಅಂದರೆ ಸಾಮಾನ್ಯ ಜನರು ರೋಡಿಗಿಳಿ ಯುವ ಪರಿಸ್ಥಿತಿಯಲ್ಲಿದ್ದಾರೆ ಎಂದು ನಯಾ ಸವೆರ ಸಂಘಟನೆ ತಿಳಿಸಿದೆ.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮೋದಿನ ಪಟೇಲ ಅಣಬಿ, ಹೈದರಲಿ ಇನಾಮದಾರ, ಮೊಹಮ್ಮದ್ ಖಾಲಿಕ, ಸೈರಾ ಬಾನು ಅಬ್ದುಲ್ ವಾಹಿದ್, ಗೀತಾ ಮುದುಗಲ್, ಕಾಜ ಪಟೇಲ್ ಸರಡಗಿ, ಬಾಬಾ ಫಕ್ರುದ್ದಿನ್ ಅನ್ಸಾರಿ, ಮೊಹಮ್ಮದ್ ನಾಸೀರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here