ನರೇಗಾ ಯೋಜನೆ ಅಡಿ ಬೆನಕನಹಳ್ಳಿ ಪ್ರೌಢಶಾಲೆಯ ಆವರಣ ಸ್ವಚ್ಛಗೊಳಿಸಿದ ಕಾರ್ಮಿಕರು

0
27

ಸುರಪುರ: ತಾಲೂಕಿನ ಕಚಕನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆನಕನಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣವನ್ನು ಗ್ರಾಮ ಪಂಚಾಯತಿ ನೆರವಿನಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಅಡಿ ಸ್ವಚ್ಛಗೊಳಿಸುವ ಕಾಮಗಾರಿಯನ್ನು ಕೈಗೊಳ್ಳಲಾಯಿತು.

ಶಾಲೆಯ ಇಡೀ ಆವರಣ ಸ್ವಚ್ಛತೆ,ಗಿಡಗಳಿಗೆ ನೀರು ಹರಿಸಲು ಕಾಲುವೆ ವ್ಯವಸ್ಥೆ,ಶಾಲೆಯ ಸುತ್ತಲಿನ ಮುಳ್ಳಿನ ಗಿಡಗಳನ್ನು ಕಡಿಯುವುದು ಮುಂತಾದ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗಳನ್ನು ನರೇಗಾ ಯೋಜನೆ ಅಡಿ ಕೈಗೊಳ್ಳಲಾಗಿದ್ದು ಸುಮಾರು ೬೦ಜನ ಕಾರ್ಮಿಕರು ಕಳೆದ ಐದು ದಿನಗಳಿಂದ ಈ ಕಾಮಗಾರಿಯನ್ನು ಕೈಗೊಂಡಿದ್ದಾರೆ.

Contact Your\'s Advertisement; 9902492681

ಈ ಕುರಿತು ಶಾಲೆಯ ಮುಖ್ಯೋಪಾಧ್ಯಾಯಿನಿ ಸಂಗಮ್ಮ ನಾಗಾವಿರವರು ಪತ್ರಿಕೆಯೊಂದಿಗೆ ಮಾತನಾಡಿ “ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಪ್ರಭುಗೌಡ ಬೆನಕನಹಳ್ಳಿರವರ ಸಹಕಾರ ಹಾಗೂ ಗ್ರಾಮ ಪಂಚಾಯತಿ ಪಿ.ಡಿ.ಓ ಮಕಾಶಿ ಮತ್ತು ಪಂಚಾಯತಿಯ ಎಲ್ಲಾ ಸಿಬ್ಬಂದಿ ವರ್ಗದವರ ಸಹಾಯದಿಂದ ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳಲಾಗಿದೆ” ಒಳ್ಳೆಯ ಕಾರ್ಯ ಕೈಗೊಂಡಿದ್ದೇವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಿ.ಇ.ಓ ಭೇಟಿ : ನರೇಗಾ ಯೋಜನೆ ಅಡಿ ಶಾಲೆಯಲ್ಲಿ ನಡೆದಿರುವ ಕಾಮಗಾರಿಯನ್ನು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವರೆಡ್ಡಿರವರು ಶಾಲೆಗೆ ಭೇಟಿ ನೀಡಿ ವೀಕ್ಷಿಸಿದರು, ಮಕ್ಕಳಿಗೆ ಅನುಕೂಲವಾಗುವಂತೆ ಶಾಲೆಯ ಅಭಿವೃದ್ಧಿಗಾಗಿ ನರೇಗಾ ಯೋಜನೆಯನ್ನು ಬಳಸಿಕೊಂಡಿರುವುದು ಉತ್ತಮ ಕಾರ್ಯ ಇದೇ ರೀತಿಯಲ್ಲಿ ಎಲ್ಲಾ ಶಾಲೆಗಳಲ್ಲಿ ಈ ರೀತಿಯಾಗಿ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಕೈಗೊಂಡಲ್ಲಿ ಆಯಾ ಗ್ರಾಮದ ಮಕ್ಕಳಿಗೆ ಅನುಕೂಲವಾಗುವದಲ್ಲದೇ ಶಾಲೆಯ ಬೆಳವಣಿಗೆ ಆಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಅಮರೇಶ ಕುಂಬಾರ,ಹಣಮಂತ ಪೂಜಾರಿ,ಶಿಕ್ಷಕರಾದ ಶೇಖಪ್ಪ ನಾಯ್ಕೋಡಿ,ಈರಯ್ಯ ವಸ್ತ್ರದ,ಮರೆಪ್ಪ,ಬಸಪ್ಪ,ರವಿಕುಮಾರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here