ಶಹಾಬಾದ:ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ಉಂಟಾದ ಪ್ರವಾಹದ ಪರಿಹಾರದಲ್ಲಿ ಆದ ಅನ್ಯಾಯವನ್ನು ಖಂಡಿಸಿ ದಸಂಸ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ ಸಮಿತಿಯಿಂದ ಫೆಬ್ರವರಿ 15ರಂದು ಬೆಳಿಗ್ಗೆ 10 ಗಂಟೆಗೆ ನಗರದ ಪ್ರವಾಸಿ ಮಂದಿರದಿಂದ ತಹಸೀಲ್ದಾರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ವಿದ್ಯಾರ್ಥಿ ಒಕ್ಕೂಟ ಸಮಿತಿಯ ತಾಲೂಕಾ ಸಂಚಾಲಕ ಪೂಜಪ್ಪ ಮೇತ್ರೆ ತಿಳಿಸಿದ್ದಾರೆ.
ಭೀಮಾ ಹಾಗೂ ಕಾಗಿಣಾ ನದಿಯ ಪ್ರವಾಹದಿಂದ ಹೊನಗುಂಟಾ ಗ್ರಾಮದಲ್ಲಿ ಅನೇಕ ಮನೆಗಳು ಜಲಾವೃತಗೊಂಡು ಅಪಾರ ಪ್ರಮಾಣದಲ್ಲಿ ದವಸ ಧಾನ್ಯಗಳು ಹಾಗೂ ಇತರ ಸಾಮಾನುಗಳು ಹಾಳಾಗಿ ಹೋಗಿತ್ತು.ಆದರೆ ಜಲಾವೃತಗೊಂಡ ಮನೆಗಳನ್ನು ಬಿಟ್ಟು ಗ್ರಾಮದ ಮುಖಂಡರ ಮಾತು ಕೇಳಿ ಜಲಾವೃತಗೊಳ್ಳದ ಮನೆಗಳಿಗೆ ಪರಿಹಾರ ನೀಡಿದ್ದಾರೆ.ಅಲ್ಲದೇ ಗ್ರಾಮದ ಎತ್ತರದ ಪ್ರದೇಶದ ಮನೆಗಳಿಗೆ ಪ್ರವಾಹದ ನೀರು ಬರೋದೆ ಇಲ್ಲ.ಅಂತಹ ಮನೆಗಳಿಗೂ ಪರಿಹಾರ ನೀಡಿರುವುದು ಮಾತ್ರ ಅಪರಾಧ.ಕನಿಷ್ಠ ಪಕ್ಷ ಜಲಾವೃತಗೊಂಡ ಮನೆಗಳಿಗೆ ಪರಿಹಾರ ನೀಡಲು ಮುಂದಾಗದಿರದಿರುವುದರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.