ಕಲಬುರಗಿ: ಮಹಾದಾಸೋಹಿ ಶರಣಬಸವೇಶ್ವರ ಟ್ರಸ್ಟ್ ನ್ ಅಡಿಯಲ್ಲಿ ಸುಮಾರು ಒಂದು ಕೋಟಿಗಿಂತ ಹೆಚ್ಚು ವೆಚ್ಚದಲ್ಲಿ ಬಡವರಿಗಾಗಿ ನಿರ್ಮಾಣವಾಗಿರುವ “ಶ್ರೀಮತಿ ಪೂರ್ಣಿಮಾ ಪಿ ಎಂ ಬಿರಾದಾರ್ ಚಾರಿಟೇಬಲ್ ಡಯಾಲಿಸಿಸ್ ಕೇಂದ್ರ” ದಲ್ಲಿ ಫೆಬ್ರವರಿ ೩ರ ರಿಂದ ಪ್ರತಿದಿನ ಡಯಾಲಿಸಿಸ್ ಮಾಡಲಾಗುತ್ತಿದೆ ಎಂದು ಕೇಂದ್ರ ನಿರ್ವಾಹಕರಾದ ಅರುಣಕುಮಾರ ಸಿ.ಪಾಟೀಲ್ ತಿಳಿಸಿದ್ದಾರೆ.
ಈ ಕೇಂದ್ರ ಅಧಿಕೃತವಾಗಿ ಮಹಾದಾಸೋಹಿ ಶರಣಬಸವೇಶ್ವರ ಟ್ರಸ್ಟ್ ನ್ ಅಧ್ಯಕ್ಷ ಶರಣು ಪಪ್ಪಾ ಮಾತನಾಡಿ, ಅಂತರರಾಷ್ಟ್ರೀಯ ಗುಣಮಟ್ಟದ ಹಾಗೂ ಸುಸಜ್ಜಿತವಾದ ಕೇಂದ್ರ ಆಧುನಿಕ ತಂತ್ರಜ್ಞಾನ ಓಳಗೊಂಡಿರುವ ಯಂತ್ರೋಪಕರಣಗಳನ್ನು ಅಳವಡಿಸಲಾಗಿದ್ದು, ರೋಗಿಗಳಿಗೆ ಅವರ ನೋವುಗಳನ್ನು ಮರೆಯಲು ಪ್ರತಿಯೊಂದು ಹಾಸಿಗೆಗೆ ಒಂದು ಟಿ.ವಿ ಕಲ್ಪಿಸಲಾಗಿದೆ, ಹಾಗೂ ರೋಗಿಯ ಸಂಭಂದಿಕರಿಗಾಗಿ ಸುಸ್ಸಜಿತವಾದ ಕೋಣೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಅವಶ್ಯವಿರುವ ಬಡ ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಈ ವೇಳೆಯಲ್ಲಿ ವಿರೇಶ ಎಸ್. ಶೇರಿಕಾರ ಇದ್ದರು.