ಕಲಬುರಗಿ: ಕೇಂದ್ರ ಸರ್ಕಾರದ ಕರಾಳ ಕೃಷಿ ಕಾಯ್ದೆಗಳ ವಿರುದ್ಧಕಿಸಾನ್ ಸಂಯುಕ್ತ ಮೋರ್ಚಾ ನೀಡಿರುವ ಕರೆಯ ಅನ್ವಯ 18 ಫೆಬ್ರುವರಿ ರಂದು ದೇಶವ್ಯಾಪಿ ’ರೈಲ್‌ರೋಕೋ’ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ ಎಂದು ಸಮಿತಿಯ ಪರವಾಗಿ ಮಹೇಶ್‌ಎಸ್. ಬಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿಸಂಯುಕ್ತ ಮೋರ್ಚಾದರಾಜ್ಯ ನಾಯಕರಾದ ಹಾಗೂ ಐಕ್ಯ ಹೋರಾಟ ಸಮಿತಿಯ ಬಿ. ಆರ್. ಪಾಟೀಲ್,ಆರ್.ಕೆ.ಎಸ್. ನ ರಾಜ್ಯ ಕಾರ್ಯದರ್ಶಿಗಳಾದ ಹೆಚ್. ವ್ಹಿ. ದಿವಾಕರ್, ಕೆ.ಪಿ.ಆರ್.ಎಸ್. ನ ಜಿಲ್ಲಾಅಧ್ಯಕ್ಷರಾದ ಶರಣಬಸ್ಸಪ್ಪ ಮಮಶೆಟ್ಟಿ, ಆರ್.ಕೆ.ಎಸ್. ನ ಜಿಲ್ಲಾಅಧ್ಯಕ್ಷರಾದಗಣಪತರಾವ್ ಕೆ. ಮಾನೆ, ಎಐಕೆಎಸ್ ನ ಜಿಲ್ಲಾಅಧ್ಯಕ್ಷರಾದ ಮೌಲಾಮುಲ್ಲಾ, ರಾಜ್ಯರೈತ ಸಂಘಟನೆ (ಪುಟ್ಟಣ್ಣಯ್ಯ ಬಣ) ಯಜಿಲ್ಲಾ ನಾಯಕರಾದಉಮಾಪತಿ ಮಾಲೀಪಾಟಿಲ್, ಕೋಡಿಹಳ್ಳಿ ಚಂದ್ರಶೇಖರ್ ಬಣದ ಬಸುಗೌಡ ಬಿರಾದರ್, ಆರ್.ಪಿ.ಐ. (ಅಂಬೇಡ್ಕರ್ ವಾದ) ದರಾಜ್ಯಅಧ್ಯಕ್ಷರಾದ ಬಿ. ಹೊಸಮನಿ,ಐಕ್ಯ ಹೋರಾಟ ಸಮಿತಿಯಜಿಲ್ಲಾಸಂಚಾಲಕರಾದ ಶೌಕತ್ ಅಲಿ ಆಲೂರ್, ಜಿಲ್ಲಾ ನಾಯಕರಾದ ಶ್ಯಾಮ್ ನಾಟೆಕರ್,ಡಿಎಸ್‌ಎಸ್ ನ ಜಿಲ್ಲಾಅಧ್ಯಕ್ಷರಾದಅರ್ಜುನ ಭದ್ರೆ, ಡಿಎಸ್‌ಎಸ್ (ಅಂಬೇಡ್ಕರ್ ವಾದ) ದಜಿಲ್ಲಾಅಧ್ಯಕ್ಷರಾದಎಸ್. ಆರ್. ಕೊಲ್ಲೂರ್ ರವರನ್ನೊಳಗೊಂಡಂತೆ ಹಲವಾರು ನಾಯಕರುಗಳು, ಸಂಘಟನೆಗಳು ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಧ್ಯಾಹ್ನ ೧೨ ರಿಂದ ೪ ರ ವರೆಗೆ ನಾಲ್ಕು ಗಂಟೆಗಳ ಕಾಲ ಈ ಪ್ರತಿಭಟನೆಯನ್ನು ನಡೆಸಲು ಅಖಿಲ ಭಾರತ ಸಮಿತಿಯುಕರೆ ನೀಡಿದ್ದು, ಇದರ ಪ್ರಯುಕ್ತ, ಕಲಬುರಗಿಯಲ್ಲಿ ಮಧ್ಯಾಹ್ನ ೨ ರಿಂದ ೪ ರ ವರೆಗೆರೈಲ್ವೇ ನಿಲ್ದಾಣದಲ್ಲಿಸಾಂಕೇತಿಕ ಪ್ರತಿಭಟನೆಯನ್ನು ನಡೆಸಲು ಸಂಯುಕ್ತ ಹೋರಾಟ-ಕರ್ನಾಟಕ (ಕಲಬುರಗಿ) ಸಮಿತಿಯು ನಿರ್ಧರಿಸಿದೆ. ನಂತರ ಸಂಜೆ ೪ ರಿಂದ ೪.೩೦ ರ ವರೆಗೆರೈಲ್‌ರೋಕೋ ನಡೆಸಲಾಗುವುದು. ಆದ್ದರಿಂದಜಿಲ್ಲೆಯ ಸಮಸ್ಥ ರೈತ ಬಾಂದವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಭಾಗವಹಿಸಬೇಕಾಗಿ ಮನವಿ ಮಾಡಿದ್ದಾರೆ.