ಸೇಡಂ: ಬರುವ ಮೇ ತಿಂಗಳಲ್ಲಿ ನಿಡಗುಂದ ಕಂಚಾಳ ಕುಂಟಿ ನಂದೀಶ್ವರ ಮಠದ ಶ್ರೀ ಕರುಣೇಶ್ವರ ಸ್ವಾಮೀಜಿ ಅವರ ಪಟ್ಟಾಧಿಕಾರಿ ಮಹೋತ್ಸವ ಅದ್ದೂರಿಯಾಗಿ ನಿರ್ಧರಿಸಲಾಗಿದೆ ಎಂದು ಎನ್.ಇ.ಕೆ.ಆರ್.ಟಿ.ಸಿ. ಮತ್ತು ಕವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೋರು ಹೇಳಿದರು.
ಪಟ್ಟಣದ ಸಮೀಪದ ನಿಡಗುಂದಾ ಗ್ರಾಮದ ಕಂಚಾಳಕುಂಟಿ ನಂದೀಶ್ವರ ಮಠದ ಆವರಣದಲ್ಲಿ ರವಿವಾರ ಜರುಗಿದ ಸೇವಾ ನಿವೃತ್ತಿ ಹೊಂದಿದ ಎ.ಇ.ಇ. ಬಾಬು ಎಸ್. ಕುಂಬಾರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದನ್ನೂ ಸಹ ಓದಿ: ಮದುವೆಗೆ ವಿಳಂಬ: ಇಬ್ಬರು ಯುವ ಪ್ರೇಮಿಗಳ ಆತ್ಮಹತ್ಯೆ
ಕರುಣೆಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ನಿಡಗುಂದ ಮಠದ ಕೀರ್ತಿ ಹೆಚ್ಚಿಸುವ ಕಾರ್ಯ ಬಾಬು ಕುಂಬಾರ ಅವರು ಮಾಡಿದ್ದಾರೆ. ಅವರ ಸಮಾಜೋಧಾರ್ಮಿಕ ಸೇವೆ ಶ್ಲಾಘನೀಯ ಎಂದರು. ಜಿಪಂ ಸದಸ್ಯ ಗೌತಮ [ಪಾಟೀಲ್, ಶರಣು ಮೆಡಿಕಲ್, ಡಾ ಅಂಬುಜಾಕ್ಷಿ ಕುಂಬಾರ ವೀರಯ್ಯ ಶಾಸ್ತ್ರಿ, ಸುಭಾಶ್ಚಂದ್ರ ನಿಷ್ಟಿ, ಮುಕುಂದ ದೇಶಪಾಂಡೆ, ಕುಂಬಾರ ರಾಜ್ಯ ಒಕ್ಕೂಟದ ರಾಜ್ಯ ಅದ್ಯಕ್ಷ ಶಿವಕುಮಾರ ಚೌಡಶೆಟ್ಟಿ, ನಿವೃತ್ತ ಡಿಡಿಪಿಐ ಗುರುರಾಜ ಚಿಕ್ಕವೀರಯ್ಯ, ಸಾಹಿತಿ ಮುಡಬಿ ಗುಂಡೆರಾವ ಮಾತನಾಡಿದರು.
ಈ ವೇಳೆ ಬಸವರಾಜ ಭೂತಪುರ, ಗ್ರಾಪಂ ಅಧ್ಯಕ್ಷ ಅರವಿಂದರೆಡ್ಡಿ ದೇಶಮುಖ, ರವಿ ಚಿತಾಪುರ, ತಾಪಂ ಸದಸ್ಯೆ ಲೀಲಾವತಿ ಸೋಮಶೇಖರ ನಿರ್ಮಲಾ ಜಗನ್, ವಿಶ್ವನಾಥ ಪಾಟೀಲ್, ಚೆನ್ನವೀರ ನಿರ್ಣಾ ಬಸವರಾಜ ಸೂಲೆಪೇಟೆ, ನಟರಾಜ ವೆಂಕಟರಾವ್,
ಶಿವಮಾದಯ್ಯ, ವೀರೇಶ ಹೂಗಾರ, ಹಣಮಂತ ಪೂಜಾರಿ, ಬಸವರಾಜ ಚತ್ರಸಾಲ, ಶಿವಾನಂದ, ಶಂಕರ, ಜಡಾಲ್ ತುಳಜಮ್ಮ, ಶಂಕ್ರಪ್ಪ ಕುಂಬಾರ, ಮತ್ತು ವಿಶ್ವಕುಂಬಾರ ಸರ್ವಜ್ಞ ಪೀಠದ ಯಾದಗಿರಿ ಜಿಲ್ಲಾದ್ಯಕ್ಷ ಶೇಖರಪ್ಪ ಕುಂಬಾರ ಇದ್ದರು.
ಇದನ್ನೂ ಸಹ ಓದಿ: ತೊಗರಿ ಬೆಳೆಗಾರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾನವ ಸರಪಳಿ ಪ್ರತಿಭಟನೆ
ಸದಾನಂದ ನಿರೂಪಿಸಿದರು, ವೀರಶೆಟ್ಟಿ ನಿರೂಪಿಸಿದರು, ಇದೇ ಸಂದರ್ಭದಲ್ಲಿ ಕರುಣೇಶ್ವರ ಸ್ವಾಮಿಗಳಿಗೆ ಕರ್ನಾಟಕ ಕುಂಬಾರ ಮಹಾಸಂಘದ ರಾಜ್ಯ ಉಪಾದ್ಯಕ್ಷರಾದ ಶೇಖರಪ್ಪ ಅರ್ಜುಣಗಿ ಅವರು ಶಾಲು ಹೊದಿಸಿ ಸನ್ಮಾನಿಸಿ ಆಶೀರ್ವಾದ ಪಡೆದರು. ನಂತರ ನಿವೃತ್ತಿ ಹೊಂದಿದ ಬಾಬು ಕುಂಬಾರ ಅವರಿಗೂ ಸನ್ಮಾನಿಸಿದರು. ಮೊದಲ ಬಾರಿಗೆ ಕಲ್ಯಾಣ ಕರ್ನಾಟಕಕ್ಕೆ ಆಗಮಿಸಿದ ರಾಜ್ಯ ಕುಂಬಾರರ ಒಕ್ಕುಟದ ಅಧ್ಯಕ್ಷರಾದ ಶಿವಕುಮಾರ ಚೌಡಶೇಟ್ಟಿ ಇವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೆಂಕಟರಾವ್ ಮೈಸೂರು, ನೌಕರರ ಸಂಘದ ಅಧ್ಯಕ್ಷ ಹರೀಷ ಇನ್ನಿತರರು ಹಾಜರಿದ್ದರು.