ಸುರಪುರ: ರಾಜ್ಯದಲ್ಲಿರುವ ಪಿಂಜಾರರ ಅಭಿವೃಧ್ದಿಗಾಗಿ ಸರಲಾರ ಅಭಿವೃಧ್ಧಿ ನಿಗಮವನ್ನು ಸ್ಥಪಿಸಬೇಕೆಂದು ಅನೇಕ ವರ್ಷಗಳಿಂದ ಮನವಿ ಮಾಡಿದರು ಸರಕಾರ ಕಡೆಗಣಿಸುತ್ತಿದೆ ಎಂದು ಪಿಂಜಾರ ವಿವಿದುದ್ದೇಶ ಸಂಘದ ಜಿಲ್ಲಾಧ್ಯಕ್ಷ ಅಹ್ಮದ ಪಠಾಣ್ ಬೇಸರ ವ್ಯಕ್ತಪಡಿಸಿದರು.
ನಗರದ ಪಿಂಜಾರ ವಿವಿದುದ್ದೇಶ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ,ರಾಜ್ಯದಲ್ಲಿರು ಪಿಂಜಾರ ಮತ್ತು ಮನ್ಸೂರಿ ಮತ್ತಿತರೆ ಒಳಪಂಗಡಗಳು ತುಂಬಾ ಹಿಂದುಳಿದಿವೆ,ರಾಜಕೀರ ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕ ರಂಗಗಳಲ್ಲಿ ಹಿಂದುಳಿದಿದ್ದು ನಮ್ಮ ಸಮುದಾಯ ಅಭೀವೃಧ್ಧಿಗಾಗಿ ನಿಗಮವನ್ನು ಸ್ಥಾಪಿಸುವಂತೆ ಸರಕಾರಗಳಿಗೆ ಅನೇಕಬಾರಿ ಮನವಿ ಮಾಡಲಾಗಿದೆ.ಆದರೆ ಇದುವರೆಗೂ ಸರಕಾರ ನಮ್ಮ ಮನವಿಗೆ ಸ್ಪಂಧಿಸುತ್ತಿಲ್ಲ.ಆದ್ದರಿಂದ ಈಗ ಮಾರ್ಚ್ ೨೧ ಮತ್ತು ೨೨ ರಂದು ಟಿಪ್ಪು ಸುಲ್ತಾನ ಜನ್ಮಸ್ಥಳವಾದ ದೇವನಹಳ್ಳಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆಯನ್ನು ನಡೆಸಿ ಸರಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಆಸ್ತಿಗಾಗಿ ಅಣ್ಣನ ಮಗನನ್ನೆ ಕೊಂದ ಪಾಪಿ ಚಿಕ್ಕಪ್ಪ: ದೀವಳಗುಡ್ಡದಲ್ಲಿ ಘಟನೆ
ಇದೇ ಸಂದರ್ಭದಲ್ಲಿ ಕರ್ನಾಟಕ ಜಮಾತ್ ಎ ಮನ್ಸೂರಿ ಸಂಘದ ರಾಜ್ಯಾಧ್ಯಕ್ಷ ಕೆ.ಎಮ್.ಜಮೀರ್ ಮಾತನಾಡಿ,ಈಗಾಗಲೆ ರಾಜ್ಯದ ಎಲ್ಲಾ ಜಿಲ್ಲೆಯ ನಮ್ಮ ಸಮುದಾಯದ ಜನರಿಗೆ ಜಾಗೃತಿಯನ್ನು ಮಾಡಲಾಗುತ್ತಿದ್ದು ಬರುವ ಮಾರ್ಚ್ ೨೧ ರಿಂದ ನಡೆಯುವ ಪಾದಾಯಾತ್ರೆಯ ಹೋರಾಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಲಿದ್ದು ಸರಕಾರ ನಮ್ಮ ಬೇಡಿಕೆ ಈಡೇರಿಸುವ ವರೆಗೆ ನಿರಂತರ ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆ.ಮ್.ಜಮೀರ್ ಹಾಗು ಇತರೆ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಭೆಯಲ್ಲಿ ಪತ್ರಕರ್ತ ಹಸನಸಾಬ್ ಅಂಜಳ ಎಮ್.ಬಿ.ಕೊಡಗಲಿ ಭಾವಸಾಬ್ ಪರಸನಹಳ್ಳಿ ದಾವೂದ್ ಪಠಾಣ್ ಅಬ್ದುಲ್‌ಸಾಬ್ ಬೇವಿನಾಳ ಶರ್ಮದ್ದೀನ್ ಶಕಾಪುರ ಬಂದುಸಾಬ್ ಅಗ್ನಿ ಬಾಷಾ ನಾಗರಾಳ ನಬಿಸಾಬ್ ದೇವಾಪುರ ಲಾಲು ಕೊಳೂರ ಸೊಪಿಸಾಬ್ ಹುಣಸಗಿ ಹುಸೇನ್ ಗಾದಿ ಹುಣಸಗಿ ಖಾಜಾಹುಸೇನ್ ಕಕ್ಕೇರಾ ಸಾಹೆಬಲಾಲ್ ಹುಣಸಗಿ ಟಿಪ್ಪು ಸುಲ್ತಾನ್ ದೇವದುರ್ಗ ಸೇರಿದಂತೆ ಅನೇಕರಿದ್ದರು.
ಇದನ್ನೂ ಸಹ ಓದಿ: ಕೊಡೇಕಲ್ ಪೊಲೀಸ್ ಠಾಣೆಯ ಪಿಎಸ್‌ಐ ಅಮಾನತ್ತಿಗೆ ಮಾಜಿ ಶಾಸಕ ಆರ್.ವಿ.ನಾಯಕ ಪತ್ರ