ಕಲಬುರಗಿ: ಇಂದು ಸಂಜೆ ಜಿಲ್ಲಾ ನ್ಯಾಯವಾದಿಗಳ ಸಂಘದ ಹಳೆಯ ಕಟ್ಟಡದ ಆವರಣದಲ್ಲಿ ಇಂದು ಬೆಳ್ಳೆಗೆ ಹೃದಯ ಬಡಿತ ವೈಫಲ್ಯ್ ದಿಂದ ನಿಧನರಾದ ಖ್ಯಾತ ನ್ಯಾಯಮೂರ್ತಿ ಡಾ. ಎಂ.ರಾಮ ಜೋಯಿಸ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೊದಲಿಗೆ ಹಿರಿಯ ನ್ಯಾಯವಾದಿಗಳಾದ ಸುಭಾಶ್ಚಂದ್ರ ಕೊಣೀನ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಅವರ ಸೇವೆ ಈ ಭಾಗಕ್ಕೆ ಅತಿ ಮುಖ್ಯವಾಗಿ ವಿಜ್ಞಾನೇಶ್ವರ ಸಂಸ್ಥೆ ಮೂಲಕ ಕ್ರಿಯಾಶೀಲತೆಯಿಂದ ಕಾರ್ಯ ಮಾಡುವದಲ್ಲದೆ, ನ್ಯಾಯಲೋಕ ಮಾಡದ ಕೆಲಸ ಇವರು ಮಾಡಿದ್ದಾರೆ ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹೇಳಿದ್ದನ್ನು ಸ್ಮರಿಸಿದರು.
ಸಭೆಯ ಸಂಚಾಲನೆ ಮಾಡಿದ ನ್ಯಾಯ ವಾದಿ ಜೇನವೆರಿ ವಿನೋದ ಕುಮಾರ ಮಾತನಾಡುತ್ತಾ, ಎರಡು ದಶಕಗಳ ಅವರ ಸೇವೆ ಯನ್ನು ಈ ಭಾಗದ ಪ್ರತಿಯೊಬ್ಬ ನಾಗರಿಕರು ಮರೆಯಲಾರದಂಥ ಕಾರ್ಯ ನಿರ್ವಹಿಸಿದ್ದಾರೆ ಎಂದು ತಮ್ಮ ಒಡನಾಟದ ಮೆಲಕು ಹಾಕಿ ಭಾವಪೂರ್ಣ ನುಡಿ ಸಮರ್ಪಿಸಿದರು.
ಸಭೆಯಲ್ಲಿ ಹಿರಿಯ ನೋಟರಿ ಪ್ರಭು ದೇವರಮನಿ, ಕೆ. ರತ್ನಾಕರ, ಸಂಜಯ.ಡಿ.ಪಂತಗೆ, ತಿಪ್ಪಣ್ಣ ಪೂಜಾರಿ, ವಿನೋದ ಡಿ. ಕುಲಕರ್ಣಿ, ಹಿರಿಯ ವಕೀಲರಾದ, ಸ್ಯೆಯಾದ್ ಮಸ್ತಾನ, ಎಲ್. ಎಂ. ಪಟೇಲ್, ಜಗನ್ನಾಥ ಕಟ್ಟಿಮನಿ, ಯೇಶ ವಂಥ ವಾಮಾನಕರ್,ಶಶಿ ಸಿರವಾಳ, ಎಸ್.ಎಸ್.ಧನ್ನಿ, ಆರ್.ಸಿ. ಧೋಡ್ಡಮನಿ, ಸಂತೋಷ್ ದೊಡ್ಡಮನಿ, ಮಹಿಳಾ ವಕೀಲರಾದ ಸಿದ್ದಮ್ಮ. ಜಿ. ಮೂಲಗೆ, ಚನ್ನಮ್ಮ ಬೆದ್ದಜಿರಗಿ, ಸೇವಕಿ, ಲಕ್ಹ್ಮಿಬಾಯಿ ತೇಲಕೇರಿ ಇತರರು ಇದ್ದರು.