ಕಲಬುರಗಿ: ಸಾಲಬಾಧೆ ತಾಳದೆ ರೈತನೋರ್ವ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಾಡಿ ಪಟ್ಟಣದ ನಾಲವಾರ ಗ್ರಾಮದಲ್ಲಿ ನಡೆದಿದ್ದು, ಮೂರು ದಿನಗಳ ನಂತರ ಶವ ಪತ್ತೆಯಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಖರ್ಗೆ ಸೋಲಿಸಿ ಕಲಬುರಗಿ ಜನ ಪಶ್ಚಾತಾಪ: ಶಂಕ್ರಯ್ಯ
ಬಳವಡಗಿ ಗ್ರಾಮದ ನಿವಾಸಿ ಸಿದ್ದಲಿಂಗ ಈರಣ್ಣ ದೊಡ್ಡಮನಿ (೨೩) ಆತ್ಮಹತ್ಯೆ ಮಾಡಿಕೊಂಡ ರೈತ. ತನಗಿದ್ದ ೨ ಎಕರೆ ಜಮೀನು ಸೇರಿದಂತೆ ಐದು ಎಕರೆ ಜಮೀನು ಕಡತಕ್ಕೆ ಹಾಕಿಕೊಂಡು ಕೃಷಿಯಲ್ಲಿ ತೊಡಗಿದ್ದ ರೈತ ಸಿದ್ಧಲಿಂಗ ವಾಡಿ ಎಸ್‌ಬಿಐ ಬ್ಯಾಂಕ್‌ನಲ್ಲಿ ೮೦,೦೦೦ ರೂ. ಬೆಳೆ ಸಾಲ ಪಡೆದಿದ್ದ. ಅಲ್ಲದೆ ಈ ವರ್ಷ ಎರಡೂ ಹೊಲಗಳಲ್ಲಿ ಹತ್ತಿ ಮತ್ತು ತೊಗರಿ ಬಿತ್ತನೆ ಮಾಡಿದ್ದ. ಫಸಲು ಕೈಗೆಟುಕದ ಕಾರಣ ಸಂಪೂರ್ಣ ಬೆಳೆ ನಾಶವಾಗಿದೆ.
ಬ್ಯಾಂಕಿನ ಬೆಳೆ ಸಾಲ ಮತ್ತು ಔಷಧಕ್ಕಾಗಿ ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಗೀಡಾಗಿದ್ದ ಎನ್ನಲಾಗಿದೆ. ನಾಲವಾರ ಕೋರಿಸಿದ್ಧೇಶ್ವರ ಜಾತ್ರೆಗೆಂದು ಗೆಳೆಯರ ಜತೆಗೆ ಹೋದಾತ ಮನೆಗೆ ಬಂದಿರಲಿಲ್ಲ. ಫೆ.೧೭ ರಂದು ನಾಲವಾರ ಮಠದ ಹಿಂದಿನ ಪುರಾತನ ಬಾವಿಯಲ್ಲಿ ಶವ ತೇಲಾಡಿದ್ದನ್ನು ಸ್ಥಳೀಯರು ಕಂಡಾಗ ಪ್ರಕರಣ ಬಯಲಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ: ಫೆಬ್ರವರಿ 24 ರಂದು ಉದ್ಯೋಗ ಮೇಳ
ಸ್ಥಳಕ್ಕೆ ಪಿಎಸ್‌ಐ ವಿಜಯಕುಮಾರ ಭಾವಗಿ ಭೇಟಿ ನೀಡಿದ್ದಾರೆ. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.