ಕಲಬುರಗಿ: ಉತ್ತಮ ಬದುಕು ರೂಪುಗೊಳ್ಳಬೇಕಾದರೆ ಉತ್ಸಾಹ ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಎಂದು ರಂಗಾಯಣ ನಿರ್ದೇಶಕರಾದ ಪ್ರಭಾಕರ ಜೋಶಿ ಹೇಳಿದರು.
ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಫ್ರೆಷರ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಜೀವನದ ಎಲ್ಲ ರಂಗಗಳಲ್ಲಿ ಆಸಕ್ತಿವಹಿಸಿ ಇಷ್ಟವಾದ ಕ್ಷೇತ್ರದಲ್ಲಿ ತನ್ಮಯತೆಯಿಂದ ತೊಡಗಿಸಿಕೊಂಡರೆ ಯಶಸ್ಸು ಖಚಿತವಾಗಿ ಲಭಿಸುತ್ತದೆ ಎಂದರು.
ಕಲಬುರಗಿ: ಬಾವಿಗೆ ಬಿದ್ದು ರೈತ ಆತ್ಮಹತ್ಯೆ
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಆರ್. ಕೊಂಡಾ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕಾಲೇಜು ಶ್ರಮಿಸುತ್ತಿದೆ. ಇಲ್ಲಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸಾಧನೆ ಮಾಡಬೇಕು. ಈ ಕಾಲೇಜಿನಿಂದ ಪಾಸಾಗಿ ಹೋದವರು ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ ಎಂದರು.
ಉಪಪ್ರಾಚಾರ್ಯ ಡಾ.ಅಣ್ಣಾರಾವ, ಡಾ.ವೀಣಾ,ಡಾ.ಮೀನಾಕ್ಷಿ ಬಾಳಿ, ಡಾ.ನಾಗೇಂದ್ರ ಮಸೂತಿ, ಪ್ರೊ. ವಿಜಯಕುಮಾರ ಪರುತೆ, ವಿದ್ಯಾರ್ಥಿ ಸಂಘದ ಸಲಹೆಗಾರರಾದ ಉಮಾ ಮಿಣಜಗಿ ರೇವೂರ್ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಡಾ.ವೀಣಾ ಎಚ್.,ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಹೋಮೈ ಇರಾನಿ, ಅಕ್ಷತಾ ಹಿರೇಮಠ, ಹರಿಣಿ, ಪಲ್ಲವಿ ಚೌವ್ಹಾಣ್, ಅರ್ಚನಾ ಉಪಸ್ಥಿತರಿದ್ದರು.