ಯುನಾನಿ ವೈದ್ಯ ವಿಜ್ಞಾನಕ್ಕೆ ಹಕೀಂ ಅಜ್ಮಲ್ ಖಾನ್ ಕೊಡುಗೆ ಅಪಾರ: ಡಾ. ಸಯ್ಯದಾ ಅತರ್

0
82

ಶಹಾಬಾದ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ವಿಶಿಷ್ಟ ಚಿಕಿತ್ಸಾ ವಿಧಾನವೇ ಯುನಾನಿ ವೈದ್ಯ ಪದ್ಧತಿ ಎಂದು ಆಯುರ್ವೇದ ಹಾಗೂ ಯುನಾನಿ ವೈದ್ಯ ವಿಜ್ಞಾನಕ್ಕೆ ಹಕೀಂ ಅಜ್ಮಲ್ ಖಾನ್ ಕೊಡುಗೆ ಅಪಾರ ಎಂದು ಆಯು? ಇಲಾಖೆಯ ವೈದ್ಯೆ ಡಾ.ಸಯ್ಯದಾ ಅತರ್ ಹೇಳಿದರು.

ಅವರು ಬುಧವಾರ ನಗರದ ಹಳೆಶಹಾಬಾದನಲ್ಲಿ ಆಯುಷ ಇಲಾಖೆಯಿಂದ ೫ನೇ ರಾಷ್ಟೀಯ ಯುನಾನಿ ದಿನ ಮತ್ತು ವೈದ್ಯ ಹಕೀಂ ಅಜ್ಮಲ್ ಖಾನ್ ಅವರ ಜನ್ಮ ದಿನದ ಪ್ರಯುಕ್ತ ಆಯೋಜಿಸಲಾದ ಉಚಿತ ಆರೋಗ್ಯ ಶಿಬಿರದಲ್ಲಿ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಯುನಾನಿ ಪದ್ಧತಿಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ.ನೂರಾರು ವರ್ಷಗಳಿಂದಲೂ ಈ ವೈದ್ಯ ಪದ್ಧತಿಯನ್ನು ಭಾರತದಲ್ಲಿ ಬಳಸಲಾಗುತ್ತಿದೆ. ವೈದ್ಯ ಹಕೀಂ ಅಜ್ಮಲ್ ಖಾನ್ ಪ್ರಸಿದ್ಧ ಮನೆತನದಲ್ಲಿ ಜನಿಸಿ ವೈದ್ಯ ಕ್ಷೇತ್ರದಲ್ಲಿ ಅಪಾರ ಮನ್ನಣೆಗಳಿಸಿದವರು. ಕೇವಲ ವೈದ್ಯರಾಗಿ ಮಾತ್ರವಲ್ಲದೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಆರೋಗ್ಯ ಇದ್ದರೇ ಮಾತ್ರ ನೆಮ್ಮದಿ ಬದುಕು ನಡೆಸಬಹುದು: ಸುರೇಶ ವರ್ಮಾ

ಅಲ್ಲದೇ ಕೋವಿಡ್-೧೯ ಸಂದರ್ಭದಲ್ಲಿ ನಮಗೆ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಪ್ರಮುಖ ಸವಾಲನ್ನು ಎದುರಿಸಿ, ಸಾರ್ವಜನಿಕರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದೆವೆ ಎಂದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಮಾತನಾಡಿ, ಯುನಾನಿ ವೈದ್ಯ ಪದ್ಧತಿ ಆಯುಷ್ ಇಲಾಖೆಯ ಅವಿಭಾಜ್ಯ ಅಂಗ.ಇದೊಂದು ಯಾವುದೇ ಅಡ್ಡಪರಿಣಾಮಗಳಿಲ್ಲದ ಚಿಕತ್ಸೆ. ಇಂದು ಯುನಾನಿ ಹಾಗೂ ಆಯು? ಪದ್ಧತಿ ಬಗ್ಗೆ ಹೆಚ್ಚಿನ ಪ್ರಚಾರದ ಅಗತ್ಯ ಇದೆ. ಇದರಿಂದ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು.

ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ,ನಗರಸಭೆಯ ಸದಸ್ಯ ಇನಾಯತಖಾನ ಜಮಾದಾರ,ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣಕುಮಾರ ಚವ್ಹಾಣ, ಮೆಹಬೂಬ, ಮಹ್ಮದ್ ಅಜರ್ ಬಾಕ್ರೋದ್ದಿನ್, ಸಾಜಿದ್ ಗುತ್ತೆದಾರ, ಇನಾಮದಾರ,ಡಾ.ಸಾದತ್ ಹುಸೇನ್,ಡಾ.ಫಯಾಜ, ಡಾ.ನಾಜೀಮ್ ಫರಹೀನ್,ಡಾ.ಸಾಧಿಯಾ, ಡಾ.ಶಕೀಲ ಅಹ್ಮದ್,ಡಾ.ನಸೀರ್ ಇದ್ದರು.

ಕಾಂಗ್ರೆಸ್ ಮುಖಂಡರಿಂದ ಡಾ. ಖರ್ಗೆಗೆ ಹೂಗುಚ್ಚ ನೀಡಿ ಸನ್ಮಾನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here