ಸ್ಥಳಾಂತರ ಕೆಲಸಕ್ಕೆ ಕೈ ಹಾಕಿದರೆ ಉಗ್ರ ಹೋರಾಟ ಎಚ್ಚರಿಕೆ

2
45

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಒಂದೊಂದೇ ಇಲಾಖೆಗಳು ಸ್ಥಳಾಂತರವಾಗುತ್ತಿದ್ದು,ಸರಕಾರ ಇದನ್ನು ತಡೆದು ಸ್ಥಳಾಂತರವಾಗಿದ್ದ ಇಲಾಖೆಗಳು ಮರಳಿ ತರದೆ ಹೋದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಎಚ್ಚರಿಕೆ ನೀಡಿದರು.

ನಗರದ ಹಿಂದಿ ಪ್ರಚಾರ ಸಭಾದಲ್ಲಿ ಕನ್ನಡ ಭೂಮಿ ಜಾಗೃತಿ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ ಒಂದೋಂದೆ ಇಲಾಖೆಗಳು ಎತ್ತಂಗಡಿ ಮಾಡಲಾಗುತ್ತಿದೆ.ಆದರೂ ಇಲ್ಲಿನ ಜನ ಪ್ರತಿನಿಧಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ.

Contact Your\'s Advertisement; 9902492681

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿ ವರ್ಷಗಳೇ ಕಳೆದಿವೆ.ಆದರೂ ಅಭಿವೃದ್ಧಿ ಕೆಲಸ ದೂರದ ಮಾತು.ಇದ್ದ ಇಲಾಖೆಗಳು ಸ್ಥಳಾಂತರ ಗೊಳಿಸುತ್ತಿರುವ ಉದ್ದೇಶವಾದರೂ ಏನು? ಸರಕಾರ ಇಲ್ಲಿನ ಜನರ ಜೋತೆ ಚೆಲ್ಲಾಟ ಆಡುತ್ತಾ ಮನಸ್ಸಿಗೆ ಬಂದಂತೆ ವರ್ತಿಸುತ್ತಿದೆ.ಸರಕಾರದ ನಡೆ ಖಂಡಿಸುವ ಬದಲು ನಮ್ಮ ಸಂಸದರು,ಶಾಸಕರು ಮೌನವಹಿಸಿದ್ದು ಹೇಡಿತನ ಪ್ರದರ್ಶಿಸುತ್ತಿದ್ದಾರೆ.

ಕಚೇರಿಗೆ ಬಾರದ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

ಪದೇ ಪದೇ ನಮ್ಮ ಭಾಗಕ್ಕೆ ಅನ್ಯಾಯ ವಾಗುತ್ತಿದ್ದರೂ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ.ಸ್ಥಳಾಂತರಗೊಂಡ ಇಲಾಖೆಗಳು ಮರಳಿ ತರಬೇಕು.ಹೊಸ ಯೋಜನೆಗಳನ್ನು ಹಮ್ಮಿಕೊಂಡು ಉದ್ಯೋಗ ಸೃಷ್ಟಿಸಬೇಕು.ಇಲ್ಲದಿದ್ದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಸಂಸದರು, ಶಾಸಕರು ರಾಜೀನಾಮೆ ನೀಡಬೇಕು.ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದರು.

ಬೆಳಗಾವಿ ಹಾಗೂ ಹುಬ್ಬಳ್ಳಿ ಗೆ ಸಿಂಹ ಪಾಲು ನೀಡುತ್ತಿರುವ ಸರಕಾರದ ತಾರತಮ್ಯ ಧೋರಣೆ ಖಂಡಿಸಿ ಮುಂದಿನ ವಾರದಲ್ಲಿ ಕಲಬುರಗಿ ಸಂಸದರ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು.ನಂತರ ಹಂತ ಹಂತವಾಗಿ ಶಾಸಕರ ಮನೆಗಳ ಎದುರೂ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ನಯಾ ಸವೇರಾ ಸಂಘಟನೆ ಪದಾಧಿಕಾರಿಗಳಿಗೆ ಸನ್ಮಾನ

ಸಮಿತಿ ಜಿಲ್ಲಾ ಅಧ್ಯಕ್ಷ ಪ್ರಶಾಂತ ತಂಬೂರಿ, ರಾಜ್ಯ ಕಾರ್ಯದರ್ಶಿ ಗುರುಲಿಂಗಪ್ಪ ಟೆಂಗಳಿ, ಸಾಜೀದ ಅಲಿ ರಂಜೋಳ್ಳ್ವಿ, ಶ್ರೀಕಾಂತ್ ನಾಗಶೆಟ್ಟಿ,ಬಾಬಾ ಫಕ್ರುದ್ದೀನ್, ಯುವ ಜಿಲ್ಲಾ ಅಧ್ಯಕ್ಷ ಶರಣು ಇಕ್ಕಳಕಿಮಠ, ಉಪಾಧ್ಯಕ್ಷ ರೋಹನ್ ರಠಕಲ, ಮುಖಂಡರಾದ ಅಶೋಕ ಧಂಗಾಪೂರ, ಶಿವಪುತ್ರಪ್ಪ ಮರಡಿ, ವಿನೋದ್ ಪಾಟೀಲ್,ಬಸು ಹಿರೇಮಠ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here