ಸುರಪುರ ಪೊಲೀಸ್ ಉಪ ವಿಭಾಗದಿಂದ ಪದವಿ ವಿದ್ಯಾರ್ಥಿಗಳಿಗೆ ಲಿಖಿತ ರಸಪ್ರಶ್ನೆ ಕಾರ್ಯಕ್ರಮ

1
425

ಸುರಪುರ: ಸುರಪುರ ಪೊಲೀಸ್ ಉಪ ವಿಭಾಗದ ವತಿಯಿಂದ ಸಂಚಾರಿ ನಿಯಮಗಳು ಮತ್ತು ಪೊಲೀಸ್ ಕಾನೂನು ಅರಿವು ಕುರಿತು ಪದವಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದಕ್ಕಾಗಿ ಲಿಖಿತ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿಯವರು ತಿಳಿಸಿದ್ದಾರೆ.

ಇದೇ ಫೆಬ್ರುವರಿ 19 ನೇ ತಾರೀಖು ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ 12 ಗಂಟೆಯವರೆಗೆ ಸುರಪುರ ಶಹಾಪುರ ಮತ್ತು ಹುಣಸಿಗಿ ತಾಲೂಕಿನ ಪದವಿ ಕಾಲೇಜುಗಳಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ.

Contact Your\'s Advertisement; 9902492681

ಸುರಪುರ ನಗರದ ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಶ್ರೀ ಪ್ರಭು ಮಹಾವಿದ್ಯಾಲಯದಲ್ಲಿ ಅದೇ ರೀತಿ ಶಹಾಪುರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರ್ಥನಾ ಪದವಿ ಕಾಲೇಜು ಯಶಸ್ವಿನಿ ಕಾಲೇಜು ಪ್ರಿಯಾಂಕ ಕಾಲೇಜು ದೇಶಮುಖ ಕಾಲೇಜು ವಿಶ್ವಜ್ಯೋತಿ ಕಾಲೇಜು ಹಾಗೂ ಪ್ರಜ್ಞಾ ಕಾಲೇಜಿನಲ್ಲಿ ಇನ್ನು ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಹಾಗೂ ಕೊಡೆಕಲ್ ಪಟ್ಟಣದ ಜನಕ ಪದವಿ ಮಹಾವಿದ್ಯಾಲಯ ಬಸವೇಶ್ವರ ಪದವಿ ಮಹಾವಿದ್ಯಾಲಯ ಮತ್ತು ಹುಣಸಿಗಿಯಲ್ಲಿ ಎರಡು ಕಾಲೇಜು ಕೆಂಭಾವಿಯ ಒಂದು ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳು ಲಿಖಿತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಗ್ರಾಪಂ ಪಿಡಿಓ ಅವರಿಂದ ಹಣ ದುರ್ಬಳಕೆ: ತನಿಖೆಗೆ ಆಗ್ರಹ

ಪ್ರತಿ ಕಾಲೇಜಿನಲ್ಲಿ ಪ್ರಥಮ ಸ್ಥಾನ ಗಳಿಸಿದ 5 ಜನ ವಿದ್ಯಾರ್ಥಿಗಳಿಗೆ ಜಾಗೃತಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡು ಈ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here