ಸುರಪುರ: ತಾಲೂಕು ಕುಂಬಾರ ಸಂಘದ ವತಿಯಿಂದ ನಗರದ ರಂಗಂಪೇಟೆಯ ಆಟೋ ನಿಲ್ದಾಣ ಬಳಿಯಲ್ಲಿನ ಕವಿ ಸರ್ವಜ್ಞ ವೃತ್ತದಲ್ಲಿ ತ್ರಿಪದಿಯ ಕವಿ ಸರ್ವಜ್ಞರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರಸಭೆ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿಯವರು ಸರ್ವಜ್ಞನ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಾತನಾಡಿ,ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಲು ತಮ್ಮ ವಚನಗಳ ಮೂಲಕ ಸಂದೇಶವನ್ನು ಸಾರಿದ ಮಹಾನ್ ಕವಿ ಸರ್ವಜ್ಞ ಎಂದು ಬಣ್ಣಿಸಿದರು.
ಗ್ರಾಮದಲ್ಲಿ ಯಶಸ್ವಿಯಾದ ಜಿಲ್ಲಾಧಿಕಾರಿಗಳ ನಮ್ಮ ನಡೆ ಹಳ್ಳಿ ಕಡೆ ಕಾರ್ಯಕ್ರಮ
ಇದೇ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ರಾಜು ಕುಂಬಾರ ಮಾತನಾಡಿ,ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಬರೆಯದ ವಚನಗಳಿಲ್ಲ ಎಂಬಂತೆ ಎಲ್ಲ ವಿಷಯಗಳ ಕುರಿತು ವಚನ ರಚಿಸಿದ ಸರ್ವಜ್ಞರ ಜಯಂತಿಯನ್ನು ನಾವೆಲ್ಲರು ಆಚರಿಸುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ.ಅದರಂತೆ ಕಳೆದ ಮೂರು ವರ್ಷಗಳ ಹಿಂದೆ ನಿರ್ಮಿಸಲಾದ ಕುಂಬಾರ ಭವನವನ್ನು ಸಮುದಾಯಕ್ಕೆ ನೀಡುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಕುಂಬಾರ ಸಂಘದ ವತಿಯಿಂದ ನಗರಸಭೆ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿ ಹಾಗು ಪೌರಾಯುಕ್ತರಾದ ಜೀವನಕುಮಾರ್ ಕಟ್ಟಿಮನಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ ನಗರಸಭೆ ಸದಸ್ಯ ಶಿವುಕುಮಾರ ಕಟ್ಟಿಮನಿ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಲಕ್ಷ್ಮಣ ಕಟ್ಟಿಮನಿ ಸಂಗಪ್ಪ ಮಲ್ಲಾ ದೊಡ್ಡ ಈರಣ್ಣ ಕುಂಬಾರ ಶರಣು ಅರಕೇರಿ ಮಲ್ಲಣ್ಣ ಹುಬ್ಬಳ್ಳಿ ಸಾಹೇಬಗೌಡ ಕುಂಬಾರ ಭೀಮರಾಯ ಕುಂಬಾರಪೇಟೆ ಬಸವರಾಜ ಕುಂಬಾರ ಮಡಿವಾಳಪ್ಪ ಕುಂಬಾರ ಅಮರೇಶ ಕುಂಬಾರ ನಿಂಗಣ್ಣ ವಡಗೇರಿ ಅಂಬ್ರೇಶ ಪಾನಶಾಪ್ ಗಿರಿಧರ ಹೂಗಾರ ಸೇರಿದಂತೆ ಅನೇಕರಿದ್ದರು.