ಸುರಪುರ: ಸರ್ವಜ್ಞ ಎಂಬುವನು ಗರ್ವದಿಂದಾದವನೆ ಎಲ್ಲರೊಳು ಒಂದೊಂದು ನುಡಿ ಕಲಿತು ವಿದ್ಯೆಯ ಪರ್ವತೆ ಆದ ಸರ್ವಜ್ಞ ಎನ್ನುವಂತೆ ಸರ್ವಜ್ಞ ಕವಿಯ ವಚನಗಳು ಸಮಸ್ತ ಮಾನವ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನ ಮಾತನಾಡಿದರು.
ನಗರದ ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಸರಳ ಸರ್ವಜ್ಞರ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿ,ಎಲ್ಲರು ಕೇವಲ ಮಹಾತ್ಮರನ್ನು ಜಯಂತಿ ಆಚರಣೆಗಳಿಗೆ ಸೀಮಿತಗೊಳಿಸದೆ ಸರ್ವಜ್ಞನ ಆದಿಯಾಗಿ ಎಲ್ಲರು ಮಹಾತ್ಮರ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಸಮಾಜ ಹಸನಾಗಲಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮದಲ್ಲಿ ಯಶಸ್ವಿಯಾದ ಜಿಲ್ಲಾಧಿಕಾರಿಗಳ ನಮ್ಮ ನಡೆ ಹಳ್ಳಿ ಕಡೆ ಕಾರ್ಯಕ್ರಮ
ಕಾರ್ಯಕ್ರಮದ ಆರಂಭದಲ್ಲಿ ಸರ್ವಜ್ಞನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಪುಷ್ಪವೃಷ್ಟಿಯ ಮೂಲಕ ನಮನವನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ ಸಿರಸ್ತೆದಾರ ಕೊಂಡಲ ನಾಯಕ ಸುರಪುರ ತಾಲೂಕು ಕುಂಬಾರ ಸಂಘದ ಅಧ್ಯಕ್ಷ ರಾಜು ಕುಂಬಾರ ಹಾಗು ಮುಖಂಡರಾದ ದೊಡ್ಡ ಈರಣ್ಣ ಕುಂಬಾರ ಸಂಗಣ್ಣ ಕನ್ನೆಳ್ಳಿ ಸಾಹೇಬಗೌಡ ಕುಂಬಾರ ಭೀಮರಾಯ ಕುಂಬಾರಪೇಟೆ ಆದಪ್ಪ ಕುಂಬಾರ ಅಮರೇಶ ಕುಂಬಾರ ಮಲ್ಲಣ್ಣ ಹುಬ್ಬಳ್ಳಿ ಮಡಿವಾಳಪ್ಪ ಕುಂಬಾರ ಬಸವರಾಜ ಕುಂಬಾರ ನಿಂಗಣ್ಣ ವಡಗೇರಿ ರವಿ ಕುಂಬಾರಪೇಟೆ ಶಿವಪುತ್ರ ಕುಂಬಾರ ಅಮರೇಶ ಕುಂಬಾರ ಬಸವರಾಜ ಕುಂಬಾರ ಸೇರಿದಂತೆ ತಹಸೀಲ್ ಕಚೇರಿಯ ಅನೇಕ ಸಿಬ್ಬಂದಿಗಳಿದ್ದರು.