ಸುರಪುರ: ತಾಲೂಕಿನ ಗುಡಿಹಾಳ ಜೆ ಗ್ರಾಮದಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಹೆಮನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿನ ಶೆಳ್ಳಗಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವತಿಯಿಂದ ಎನ್.ಸಿ.ಡಿ ಕ್ಯಾಂಪ್ ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದ ಮೂಲಕ ೩೦ ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ ಸಕ್ಕರೆ ಕಾಯಿಲೆ ರಕ್ತದೊತ್ತಡ ಪರೀಕ್ಷೆ ಮತ್ತು ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲಾಯಿತು.ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಇರುವವರು ವ್ಯಾಯಾಮ ಮತ್ತು ಯೋಗಾಸನ ಮಾಡುವಂತೆ ತಿಳಿಸಿದರು ಹಾಗು ಸಮತೋಲನ ಆಹಾರ ಸೇವನೆ ಬಗ್ಗೆ ಅರಿವು ಮೂಡಿಸಲಾಯಿತು.
15 ದಿನದಲ್ಲಿ ನೆರೆಯ ರಾಜ್ಯಗಳಿಂದ ಮರಳಿದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ
ಶಿಬಿರದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳಾದ ಚಳಿಗೆಪ್ಪ ಹಾಗು ಆಶಾ ಕಾರ್ಯಕರ್ತೆಯರಾದ ಹಣಮಂತಿ ಶಾಲೆಯ ಪ್ರಧಾನ ಗುರು ಬಾಬು ಶಿಕ್ಷಕರಾದ ರಾಜಶೇಖರ ಉಪಸ್ಥಿತರಿದ್ದರು.ಶಿಬಿರದಲ್ಲಿ ಗ್ರಾಮದ ಅನೇಕ ಜನರು ಭಾಗವಹಿಸಿ ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಂಡರು.