ಭಾಲ್ಕಿ: ಜೀವನದಲ್ಲಿ ಹುಟ್ಟು ಆಕಸ್ಮಿಕ ಸಾವು ಖಚಿತ ಇವುಗಳ ಮಧ್ಯೆ ದಿವಂಗತ ವೀರಬಸಪ್ಪ(ವಿ.ಕೆ)ಪಾಟೀಲ್ ಮಾಡಿರುವ ಕಾರ್ಯ ಅನುಕರಣೀಯವಾಗಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಖಟಕ್ ಚಿಂಚೋಳಿಯಲ್ಲಿ ನೀಲಮ್ಮ ವೀರಬಸಪ್ಪ ಪಾಟೀಲ್ ಕಲ್ಯಾಣ ಮಂಟಪ ಉದ್ಘಾಟನೆ ಸಮಾರಂಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಹೇಳಿಕೆ.
ವಕೀಲರಾದ ಶ್ರೀವಾಮನ್ ರಾವ್, ಪತ್ನಿಯ ಕೊಲೆ ಆರೋಪಿಗಳ ಪತ್ತೆಗೆ ಆಗ್ರಹ
ತಾಲೂಕಿನ ಖಟಕ್ ಚಿಂಚೋಳಿ ಕ್ರಾಸ್ ಸಮೀಪದಲ್ಲಿ ಸೋಮವಾರ ನಡೆದ ನೀಲಮ್ಮ ವೀರಬಸಪ್ಪ ಪಾಟೀಲ್ ಕಲ್ಯಾಣ ಮಂಟಪ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಿವಂಗತ ವೀರಬಸಪ್ಪ(ವಿ.ಕೆ) ಪಾಟೀಲ್ ಅವರು ಶರಣ ಜೀವಿಗಳಾಗಿದ್ದರು. ತಮ್ಮ ಜೀವಿತಾವಧಿಯಲ್ಲಿ ಈ ಭಾಗಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಬಸವತತ್ವದ ಅನುಯಾಯಿ ಆಗಿದ್ದ ಅವರು ಧರ್ಮ ಮಾರ್ಗದಲ್ಲಿ ನಡೆದು ಅನೇಕ ವಿಧಾಯಕ ಕಾರ್ಯಗಳು ಮಾಡಿದ್ದರು.
ಸುರಪುರ: ವಕೀಲರ ಸಂಘಕ್ಕೆ 44 ಜನ ವಕೀಲರ ರಾಜೀನಾಮೆಗೆ ಸಿದ್ಧತೆ
ಕೊಡಗೈ ದಾನಿಯಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ನಿರ್ಮಾಣಕ್ಕೆ ಸ್ವಂತ ನಿವೇಶನ ನೀಡಿರುವುದು ಸೇರಿ ಜಿಲ್ಲೆಯ ನಾನಾ ಕಡೆಗಳಲ್ಲಿ ಬಸವೇಶ್ವರರ ಅಶ್ವರೂಢ ಮೂರ್ತಿ ಪ್ರತಿಷ್ಟಾಪನೆಗೆ ಲಕ್ಷಾಂತರ ರೂ ದೇಣಿಗೆ ನೀಡಿ ಮಾನವೀಯತೆ ಮೆರದಿದ್ದರು.
ಶಿಕ್ಷಣ ಸಂಸ್ಥೆ, ಕಲ್ಯಾಣ ಮಂಟಪ ನಿರ್ಮಾಣ ದಿವಂಗತ ಪಾಟೀಲ್ ಅವರ ಕನಸಾಗಿತ್ತು. ಅದನ್ನು ಅವರ ಧರ್ಮಪತ್ನಿ ನೀಲಮ್ಮ ವಿಕೆ ಪಾಟೀಲ್ ಪೂರೈಸಿರುವುದು ಸಾರ್ಥಕವೆನಸಿದೆ ಎಂದು ತಿಳಿಸಿದರು.