ಅಫಜಲಪೂರ: ತಾಲೂಕಿನ ರೇವೂರ (ಬಿ) ಗ್ರಾಮದಲ್ಲಿ ಹಮ್ಮಿಕೊಂಡಿರುವ ತಹಸೀಲ್ದಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರ ವಿವಿಧ ಆಹ್ವಾಲಗಳ ಕುರಿತಂತೆ ಸುಮಾರು ೧೧೮ ಅರ್ಜಿಗಳನ್ನು ಸ್ವಿಕಾರ ಮಾಡಿ ಅಲ್ಲದೇ ೭೦ ಅರ್ಜಿಗಳನ್ನು ಪರಿಹಾರ ನೀಡಿ ಅವರಿಗೆ ಸ್ಥಳದಲ್ಲಿ ಆದೇಶ ಪತ್ರ ನೀಡಲಾಯಿತು.
ಗ್ರಾಮ ವಾಸ್ತöವ್ಯ ಕಾರ್ಯಕ್ರಮದಲ್ಲಿ ೧೧೮ ಅರ್ಜಿ ಸ್ವೀಕಾರ ೭೦ ಅರ್ಜಿ ಪರಿಹಾರ, ಸ್ಥಳದಲ್ಲಿ ೨೫ ಜನರಿಗೆ ಪಡಿತರ ಚೀಟಿ ವಿತರಣೆ : ತಹಸೀಲ್ದಾರ ನಾಗಮ್ಮಾ
ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಿದರೇ ಮುಂದೆ ಗಡಾಂತರ: ತಹಸೀಲ್ದಾರ ವರ್ಮಾ
ತಹಸೀಲ್ದಾರ ನಾಗಮ್ಮಾ ಎಂ.ಕೆ.ಅವರ ನೇತೃತ್ವದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಆಧಾರ ನವೀಕರಣ ೩೫ ಅರ್ಜಿಗಳನ್ನು ಹಾಗೂ ಸಾಮಾಜೀಕ ಭದ್ರತಾ ಯೋಜನೆ ಅಡಿಯಲ್ಲಿ ೪೨ ಅರ್ಜಿಗಳನ್ನು ಅಲ್ಲದೇ ೨೫ ಪಡಿತರ ಚೀಟಿಗಳ ಅರ್ಜಿಗಳನ್ನು ಸ್ವೀಕರ ಮಾಡಲಾಯಿತು ಹಾಗೂ ಸ್ಥಳದಲ್ಲಿ ೨೫ ಜನರಿಗೆ ಪಡಿತರ ಚೀಟಿಗಳನ್ನು ನೀಡಲಾಯಿತು. ಹಾಗೂ ಅಂತ್ಯ ಸಂಸ್ಕಾರ ಯೋಜನೆ ಅಡಿಯಲ್ಲಿ ೫ ಕುಟುಂಬಗಳಿಗೆ ಸರಕಾರದಿಂದ ಅನುಮೋದನೆಯಾದ ಪತ್ರ ಪ್ರತಿಯನ್ನು ನೀಡಲಾಯಿತು. ೩೬ ಜನರಿಗೆ ಆಧಾರ ಕಾರ್ಡ ನೀಡಲಾಯಿತು ಹೀಗೆ ಅನೇಕ ಯೋಜನೆಗಳುನ್ನು ಸ್ಥಳದಲ್ಲಿ ಇತ್ಯಾರ್ಥ ಮಾಡಲಾಯಿತು ಎಂದು ತಹಸೀಲ್ದಾರ ನಾಗಮ್ಮಾ.ಎಂ.ಕೆ. ಅವರು ಹೇಳಿದರು.
ಈ ಸಂಸರ್ಭದಲ್ಲಿ ಶಾಸಕ ಎಂವೈ ಪಾಟೀಲ ಸರಕಾರದ ಯೋಜನೆಗಳ ಬಗ್ಗೆ ಹಾಗೂ ಅದರ ಲಾಭದ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.