ಶಹಾಬಾದ: ಸಾರ್ವಜನಿಕರು ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಿದರೇ ಮುಂದೆ ಗಡಾಂತರ ಎದುರಿಸಬೇಕಾಗುತ್ತದೆ ಎಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದರು.
ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಪಕ್ಕದ ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಜನರ ಬೇಜವಾಬ್ದಾರಿಯಿಂದ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದೆ. ಇದರಿಂದ ಆತಂಕ ಮನೆಮಾಡಿದೆ. ಆದ್ದರಿಂದ ತಾಲೂಕಿನ ಸಾರ್ವಜನಿಕರು ಬೇಜವಬ್ದಾರಿತನ ತೋರದೇ, ಕಡ್ಡಾಯವಾಗಿ ಮಾಸ್ಕ್ ಧರಿಸಿ.ಈಗಾಗಲೇ ಹಳೆಯ ಸೊಂಕು ತನ್ನ ರೂಪ ಬದಲಿಸಿಕೊಂಡು ಸೊಂಕನ್ನು ಉಂಟು ಮಾಡುತ್ತಿದ್ದು, ಇದರಿಂದ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ.ಈಗಾಗಲೇ ಮೊದಲನೇ ಹಂತದ ಅಲೆಯಲ್ಲಿಯೇ ಸಾಕಷ್ಟು ತೊಂದರೆ ಅನುಭವಿಸಿದ್ದೆವೆ.
ನಿರುದ್ಯೋಗದ ವಿರುದ್ಧ ಸಹಿ ಸಂಗ್ರಹ ಅಭಿಯಾನ
ಇದನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಮಾಸ್ಕ್, ಸ್ಯಾನಿಟೈಜರ್ ಬಳಕೆ ಮಾಡಿ. ಸಾರ್ವಜನಿಕರ ಸ್ಥಳಗಳಲ್ಲಿ ಆದಷ್ಟು ಸೇರುವುದನ್ನು ಬಿಡಿ. ಮಾರುಕಟ್ಟೆ ಪ್ರದೇಶದಲ್ಲಿ ಜನಜಂಗುಳಿ ಹೆಚ್ಚಾಗಿರುವುದರಿಂದ ಆದಷ್ಟು ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡಕೊಳ್ಳಬೇಕು.ಒಮ್ಮೆ ಈ ಸೊಂಕು ಹರಡಿದರೇ ನಿಯಂತ್ರಿಸುವುದು ಬಲು ಕಷ್ಟವಾಗುತ್ತದೆ.ಅಲ್ಲದೇ ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡದ ಸಮಸ್ಯೆ ಇರುವವರಲ್ಲಿ ಕೊರೊನಾ ಸೊಂಕು ತೀವ್ರವಾಗುತ್ತದೆ.ಅಲ್ಲದೇ ೫೦ ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚು ಹಾನಿ ಮಾಡುತ್ತದೆ.
ಆದ್ದರಿಂದ ಕುಟುಂಬದ ಸ್ವಾಸ್ಥ್ಯ ಕಾಪಾಡುವುದು ನಿಮ್ಮೆಲ್ಲರ ಜವಾಬ್ದಾರಿಯಾದರೇ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ತಾಲೂಕಾಢಳಿತದ ಕರ್ತವ್ಯ.ಆದ್ದರಿಂದ ಆದಷ್ಟು ಮುಂಜಾಗ್ರತೆ ವಹಿಸುವುದು ಉತ್ತಮ. ಸ್ವಯಂಪ್ರೇರಿತರಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ.ಇಲ್ಲದಿದ್ದರೇ ಮಾಸ್ಕ್ ಧರಿಸದಿರುವ ವ್ಯಕ್ತಿಗಳಿಗೆ ಮತ್ತೆ ದಂಡ ಹಾಕುವ ಕಾರ್ಯಕ್ಕೆ ಎಡೆ ಮಾಡಿಕೊಡಬೇಡಿ.ಇಲ್ಲದಿದ್ದರೇ ತಾಲೂಕಾಢಳಿತ ನಿರ್ದ್ಯಾಕ್ಷಣವಾಗಿ ಕ್ರಮಕೈಗಳ್ಳಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಯಚೂರು ವಿವಿ ಲಾಂಛನದಲ್ಲಿ ಯಾದಗಿರಿ ಜಿಲ್ಲೆಯನ್ನು ಪರಿಗಣಿಸಲು ಕಸಾಪ ಆಗ್ರಹ