ವಾಡಿ: ಕಾಗಿಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವಯೋವೃದ್ದೆಯೊಬ್ಬಳು ಯುವಕರ ಸಮಯ ಪ್ರಜ್ಞೆಯಿಂದ ರಕ್ಷಣೆಯಾದ ಘಟನೆ ಸಂಭವಿಸಿದೆ.
ಸುಮಾರು ೭೫ ವಯಸ್ಸಿನ ಮಲ್ಲಮ್ಮ ಎನ್ನುವ ವೃದ್ಧೆ ಬುಧವಾರ ಮದ್ಯಾಹ್ನ ೧೨:೦೦ ಗಂಟೆಗೆ ಶಹಾಬಾದ ಸಮೀಪದ ಶಂಕರವಾಡಿ ಕಾಗಿಣಾ ನದಿ ಸೇತುವೆ ಮೇಲೆ ಪಾದರಕ್ಷೆ ಮತ್ತು ಕೋಲು ಬಿಟ್ಟು ನೀರಿಗೆ ಹಾರಿದ್ದಾಳೆ. ಅದೇ ಮಾರ್ಗವಾಗಿ ಬೈಕ್ ಮೇಲೆ ಹೊರಟಿದ್ದ ಕಲಬುರ್ಗಿ ಮೂಲದ ಸಮೀರ್ ಪಟೇಲ ಮತ್ತು ಸ್ನೇಹಿತರು, ಮಹಿಳೆಯೊಬ್ಬಳು ನದಿಗೆ ಬಿದ್ದಿದ್ದನ್ನು ಗಮನಿಸಿ ತಕ್ಷಣವೇ ನದಿಗೆ ಜಿಗಿದಿದ್ದಾರೆ.
ವಾಡಿ-ಚಿತ್ತಾಪುರ ಬಸ್ ಸೌಲಭ್ಯ ಒದಗಿಸಲು ವಿದ್ಯಾರ್ಥಿಗಳ ಪ್ರತಿಭಟನೆ
ವೃದ್ಧೆಯನ್ನು ನೀರಿನಿಂದ ಹೊರತರಲು ಹರಸಾಹಸ ಪಟ್ಟು ಜೀವ ಉಳಿಸುವ ಮೂಲಕ ಮಾನವೀಯತೆ ಮೆರೆದ್ದಾರೆ. ರಾಷ್ಟ್ರೀಯ ಹೆದ್ದಾರಿ ಪೆಟ್ರೋಲಿಂಗ್ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ೧೦೮ ವಾಹನದ ಮೂಲಕ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಯುವಕರ ಈ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಪ್ರಸಂಶೆ ವ್ಯಕ್ತವಾಗಿದೆ. ವೃದ್ಧೆ ಮಲ್ಲಮ್ಮಳ ಕುಟುಂಬ, ಊರು ಮತ್ತು ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.