ಸ್ಮಾರ್ಟ್ ಕ್ಲಾಸ್ ಆರಂಭಕ್ಕೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಸಂಘ ನೆರವು

2
36

ಸುರಪುರ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗು ಸಾಂಸ್ಕೃತಿಕ ಸಂಘ ಕಲಬುರ್ಗಿ ಯಾದಗಿರಿ ವತಿಯಿಂದ ಹುಣಸಗಿ ತಾಲೂಕಿನ ನಾಲ್ಕು ಶಾಲೆಗಳಾದ ನಮ್ಮೂರ ಕಿರಿಯ ಪ್ರಾಥಮಿಕ ಶಾಲೆ ಹುಣಸಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಸಕರ ಮಾದರಿ ಶಾಲೆ ಯುಕೆಪಿ ಕ್ಯಾಂಪ್ ಹುಣಸಗಿ ಶ್ರೀಗುರು ಪುಟ್ಟುರಾಜ ಸಂಸ್ಕೃತ ವೇದ ಪಾಠಶಾಲೆ ಕಲ್ಲದೇವನಹಳ್ಳಿ ನೂತನ ಪಬ್ಲಿಕ್ ಶಾಲೆ ಹುಣಸಗಿ ಸ್ಮಾರ್ಟ್ ಕ್ಲಾಸ್ ಆರಂಭಿಸಲು ವಿವಿದ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಹಾಗು ಸಂಘದ ಹುಣಸಗಿ ತಾಲೂಕು ಸಂಚಾಲಕ ಬಸವರಾಜ ಸ್ವಾಮಿ ಸ್ಥಾವರಮಠ ತಿಳಿಸಿದರು.

ಜನನಿ ಕಾಲೇಜಿನಲ್ಲಿ ಪ್ರವೇಶಕ್ಕೊಂದು ಸಸಿ ವಿಶೇಷ ಕಾರ್ಯಕ್ರಮ

Contact Your\'s Advertisement; 9902492681

ಹುಣಸಗಿಯಲ್ಲಿ ಉಪಕರಣಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು,ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲ್ ಸೇಡಂ ಅವರ ಕಾಳಜಿಯಿಂದಾಗಿ ಈ ಭಾಗದ ಮಕ್ಕಳಲ್ಲಿನ ಪ್ರತಿಭೆಯನ್ನು ಹೆಚ್ಚಿಸಲು ಹಾಗು ಕಲಿಕೆಗೆ ನೆರವಾಗಲು ಕಂಪ್ಯೂಟರ್ ಸೇರಿದಂತೆ ವಿವಿಧ ಉಪಕರಣಗಳನ್ನು ನೀಡಿದ್ದು ಶಾಲೆಗಳು ಇವುಗಳ ಸದುಪಯೋಗ ಮಾಡಿಕೊಳ್ಳುವ ಮೂಲಕ ಮಕ್ಕಳಿಗೆ ಉನ್ನತ ಮಟ್ಟದ ಕಲಿಕಾ ಸಾಮರ್ಥ್ಯ ಹಾಗು ಜ್ಞಾನವನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಆಶಿಸಿದರು.

ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ

ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ರಾಘವೇಂದ್ರ ಕಾಮನಟಿಗಿ ಬೋರಮ್ಮ ಹುಣಸಗಿ ಸಂತೋಷ ರಾಠೋಡ ಪ್ರಶಾಂತ ಸಂತೋಷ ಬೈಲಾಪುರ ಕನ್ನೆಳ್ಳಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here