ಪೊಗರು ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅಪಮಾನ: ದೃಶ್ಯ ತೆಗೆದು ಹಾಕಲು ಆಗ್ರಹ

2
37

ಶಹಾಬಾದ: ಧೃವಸರ್ಜಾ ಅಭಿನಯದ ಪೊಗರು ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅಪಮಾನ ಮಾಡಿದ ದೃಶ್ಯವನ್ನು ಕೂಡಲೇ ತೆಗೆದು ಹಾಕಬೇಕು.ಇಲ್ಲದಿದ್ದರೇ ಸೆನ್ಸಾರ್ ಮಂಡಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಪ್ರತಿಭಟನೆ ನಡೆಸಲಾಗುವುದೆಂದು ನಗರದ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶ್ರೀಧರ ಜೋಷಿ ಆಕ್ರೋಶ ವ್ಯಕ್ತಪಡಿಸಿದರು.

ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ,ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯವನ್ನ ಟಾರ್ಗೆಟ್ ಮಾಡಲಾಗ್ತಿದೆ . ಪೊಗರು ಸಿನಿಮಾದಲ್ಲಂತೂ ಬ್ರಾಹ್ಮಣ ಸಮುದಾಯಕ್ಕೆ ತೀರ ಅವಮಾನ ಮಾಡಲಾಗಿದೆ. ಬ್ರಾಹ್ಮಣರ ಸ್ವಾಭಿಮಾನವನ್ನ ಕೆಣಕಲಾಗುತ್ತಿದೆ. ಸೆನ್ಸಾರ್ ಮಂಡಳಿ ಚಿತ್ರವನ್ನ ಸೆನ್ಸಾರ್ ಮಾಡುವಾಗ ಈ ಎಲ್ಲ ಅಂಶಗಳನ್ನ ಗಮನಿಸಬೇಕು . ಯಾವುದೇ ಒಂದು ಸಮಾಜದ ಭಾವನೆಗೆ ಧಕ್ಕೆಯಾಗುವಂತ ಸೀನ್ ಗಳಿಗೆ ಕತ್ತರಿ ಹಾಕಬೇಕು ಅಂಟ್ ಪ್ರತಿಭಟನಾಕಾರರು ಒತ್ತಾಯಿಸಿದರು.

Contact Your\'s Advertisement; 9902492681

ಸ್ಮಾರ್ಟ್ ಕ್ಲಾಸ್ ಆರಂಭಕ್ಕೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಸಂಘ ನೆರವು

ಸಿನಿಮಾದಲ್ಲಿ ಪುರೋಹಿತಶಾಹಿ ವರ್ಗಕ್ಕೆ ತುಂಬಾ ಅವಮಾನಿಸಲಾಗಿದೆ. ಈ ಹಿಂದೆಯೂ ಸಹ ಅನೇಕ ಚಿತ್ರಗಳಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡೋ ದೃಶ್ಯಗಳನ್ನ ಬಲವಂತವಾಗಿ ಸೃಷ್ಟಿಸಲಾಗಿದೆ ಎಂದು ಕಿಡಿಕಾರಿದರು.ಕೂಡಲೇ ದೃಶ್ಯಗಳಿಗೆ ಕತ್ತರಿ ಹಾಕಬೇಕೆಂದು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here