ಅಫಜಲಪುರ: ತಾಲೂಕಿನ ರೇವೂರ(ಬಿ) ಹಾಗೂ ಚಿಂಚೋಳಿ ಗ್ರಾಮದ ಹೆದ್ದಾರಿ ಮಾರ್ಗ ಮಧ್ಯದಲ್ಲಿ ಅಪರಿಚಿತ ಯುವತಿಯ ಶವ ಗುರುವಾರದಂದು ಮುಂಜಾನೆ ಪತ್ತೆಯಾಗಿದೆ.
ಬುಧವಾರ ತಡರಾತ್ರಿ ಮಧ್ಯದಲ್ಲಿ ಸುಮಾರು 15-16 ವಯಸ್ಸಿನ ಯುವತಿಯ ಶವ ಸುಟ್ಟು ಹಾಕಲಾಗಿದ್ದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ಶ್ವಾನದಳದ ಸಿಬ್ಬಂದಿಯಿಂದ ಪರಿಶೀಲನೆ ನಡೆಸಲಾಗಿದ್ದು, ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ವಿಶ್ವನಾಥ ಮುದರಡ್ಡಿ, ಪಿಎಸ್ಐ ಅಶೋಕ ಪಾಟೀಲ್ ಭೇಟಿ ನೀಡಿದ್ದು ಪರಿಶೀಲನೆ ಮುಂದುವರಿಸಲಾಗಿದ್ದು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಯುವತಿಗೆ ಸಂಬಂಧಪಟ್ಟ ಕುಟುಂಬಸ್ಥರು ಅಫಜಲಪುರ ಪೊಲೀಸ್ ಠಾಣೆಗೆ ಸಂಪರ್ಕಿಸಲು
94808 03567 – 94808 03538 ಕೋರಲಾಗಿದೆ.