ಕಲಬುರಗಿ: ಬಸವ ಸಮಿತಿಯ ಅನುಭವ ಮಂಟಪದಲ್ಲಿ ಬಸವ ಸಮತಿ ನೂತನ ಅಧ್ಯಕ್ಷಸ್ಥಾನಕ್ಕೆ ಅವಿರೋಧವಾಗಿ ಆರಿಸಿ ಬಂದ ಶ್ರೀ ಅರವಿಂದ ಜತ್ತಿ ಹಾಗೂ ಶಾರದಾ ಜತ್ತಿ ಅವರನ್ನು ಕಲಬುರಗಿ ಬಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಅರವಿಂದ ಜತ್ತಿ ಅವರು ಇದೇ ಜನೇವರಿ-ಫೆಬ್ರುವರಿ ತಿಂಗಳುಗಳಲ್ಲಿ ನಡೆದ ಬಸವ ಸಮಿತಿ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಹೊಸ ಅವಧಿಗೆ ಅಧಿಕಾರವಹಿಸಿಕೊಂಡು ನಿನ್ನೆಯಷ್ಟೇ ಕಲಬುರಗಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಈ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಅರವಿಂದ ಜತ್ತಿ ಅವರು ೨೦೦೨ ರಲ್ಲಿ ಮೊದಲನೇ ಸಲ ಬಸವ ಸಮಿತಿಯ ಅಧ್ಯಕ್ಷರಾಗಿ ಆಧಿಕಾರ ಸ್ವೀಕರಿಸಿದ್ದರು. ಇಪ್ಪತ್ತು ವರ್ಷಗಳ ವರೆಗೆ ನಾಲ್ಕು ಅವಧಿಯ ಅಧ್ಯಕ್ಷಸ್ಥಾನ ಯಶಸ್ವಿಯಾಗಿ ಮುಗಿಸಿದ ಅವರು ಈಗ ೫ನೇ ಅವಧಿಗೆ ಅಧಿಕಾರ ಸ್ವೀಕರಿಸಿದ್ದಾರೆ. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅರವಿಂದ ಜತ್ತಿ ಅವರು ತಮ್ಮ ಅವಧಿಯಲ್ಲಿ ನಡೆದ ಸಮಿತಿಯ ಪ್ರಗತಿಯ ಕಾರ್ಯಕ್ರಮಗಳನ್ನು ನೆನಪಿಸಿಕೊಂಡರು.
ವಿಶೇಷವಾಗಿ ಡಾ. ಎಂ.ಎಂ. ಕಲಬುರಗಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ವಚನಗಳ ಅನುವಾದ ಮತ್ತು ಪ್ರಕಟನಾ ಯೋಜನೆ ಬಗ್ಗೆ ಹಮ್ಮೆ ವ್ಯಕ್ತಪಡಿಸಿದರು. ರಾಮಕೃಷ್ಣ ಆಶ್ರಮ ಅಸ್ತಿತ್ವಕ್ಕೆ ಬಂದು ೧೨೦ ವರ್ಷಗಳಲ್ಲಿ ಸ್ವಾಮಿ ವಿವೇಕಾನಂದರ ಕೃತಿಗಳು ೮೦ ಭಾಷೆಗಳಲ್ಲಿ ಅನುವಾದ ಗೊಂಡಿವೆ. ೯೦೦ ವರ್ಷಗಳ ಹಿಂದಿನ ಶರಣರ ವಚನಗಳು ಇನ್ನೂ ೩೦ ಭಾಷೆಗಳಿಗೂ ಹೋಗಿ ಮುಟ್ಟಿಲ್ಲ. ತಮ್ಮ ಈ ಅವಧಿಯಲ್ಲಿ ವಚನಗಳು ಕನಿಷ್ಠ ೮೦-೮೧ ಭಾಷೆಗಳಿಗೆ ಮುಟ್ಟಿಸಲು ಪ್ರಯತ್ನ ಮಾಡುವುದಾಗಿ ಹೇಳಿದರು.
ಇದರ ಜೊತೆ ಇನ್ನೂ ಅನೇಕ ಯೋಜನೆಗಳ ಆಲೋಚನೆಯಿದ್ದು ಮುಖ್ಯವಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಕಮ್ಮಟಗಳನ್ನು ಏರ್ಪಡಿಸುವ ವ್ಯವಸ್ಥೆ ಮಾಡಲಿದ್ದೇವೆ ಎಂದು ಹೇಳಿದರು.
ಕೋವಿಡ್ ಹೆಸರಲ್ಲಿ ದರೋಡೆ ಸಲ್ಲದ್ದು ಕರವೇ ಕಿಡಿ
ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಡಾ. ಬಿ.ಡಿ. ಜತ್ತಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಕೆ. ಉದ್ದಂಡಯ್ಯ, ಕಾರ್ಯದರ್ಶಿಗಳಾದ ಬಂಡಪ್ಪ ಕೇಸೂರ, ಸಹಕಾರ್ಯದರ್ಶಿಗಳಾದ ಡಾ. ಕಲ್ಯಾಣರಾವ ಪಾಟೀಲ, ಅವರಲ್ಲದೆ ಬಸವ ಸಮಿತಿಯ ಸಿಬ್ಬಂದಿ ವರ್ಗದವರಾದ ಸುನಂದಾ, ಗುರುಶಾಂತಮ್ಮ, ನಾಗಮ್ಮ ಶಿವಾನಂದ ಹಾಗೂ ಸುನೀಲ, ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದೆ ವೇಳೆಯಲ್ಲಿ ಅರವಿಂದ ಜತ್ತಿ ಹಾಗೂ ಶಾರದಾ ಅರವಿಂದ ಜತ್ತಿ ಅವರನ್ನು ಸನ್ಮಾಸಿ ಗೌರವಿಸಿದರು.