ಸಾಮಾನ್ಯ ಸಭೆ: ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ

0
30

ಸುರಪುರ: ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯನ್ನು ನಡೆಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಶಾರದಾ ಭೀಮಣ್ಣ ಬೇವಿನಾಳ ಮಾತನಾಡಿ,ಇದುವರೆಗೂ ಕೋವಿಡ್ ಕಾರಣದಿಂದ ಅನೇಕ ಅಭೀವೃಧ್ಧಿ ಕಾರ್ಯಕ್ರಮಗಳು ಮಂದಗತಿಯಲ್ಲಿದ್ದವು ಈಗ ಎಲ್ಲವು ಒಂದು ಹಂತಕ್ಕೆ ಬಂದಿದ್ದು ಅಧಿಕಾರಿಗಳು ಜವಬ್ದಾರಿಯಿಂದ ಕಾರ್ಯಪ್ರವೃತ್ತರಾಗುವ ಮೂಲಕ ಅಭೀವೃಧ್ಧಿ ಕೆಲಸಗಳಿಗೆ ವೇಗ ನೀಡುವಂತೆ ಕರೆ ನೀಡಿದರು.

Contact Your\'s Advertisement; 9902492681

ಹಜರತ್ ಸಯ್ಯದ್ ಬುರ‍್ಹಾನುದ್ದಿನ್ ಶಹಾ ಖಾದ್ರಿ ದರ್ಗಾ ಉರುಸ್: ಧರ್ಮ ಸಮ್ಮೇಳನ

ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಭಿಯಂತರರಾದ ಅಂಬ್ರೇಶ ಮಾತನಾಡಿ, ಮುಂದೆ ಬೇಸಿಗೆ ಆಗಮಿಸುತ್ತಿದ್ದು ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ ಹಾಗು ತಾಲೂಕಿನ ಯಾವ್ಯಾವ ಗ್ರಾಮಗಳಲ್ಲಿ ಆರ್.ಒ ಪ್ಲಾಂಟ್ ಕಾಮಗಾರಿಗಳನ್ನು ನಡೆಸಲಾಗಿದೆ ಅವೆಲ್ಲವುಗಳನ್ನು ಮಾರ್ಚ್ ೫ರ ಒಳಗಾಗಿ ಮುಗಿಸುವಂತೆ ತಾಕೀತು ಮಾಡಿದರು.

ನಂತರ ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಕ್ಷೇತ್ರ ಶಿಕ್ಷಣಾಧಿಕಾರಿ ಮಾಧವರಡ್ಡಿ ಅಕ್ಷರದಸಾಸೋಹ ಸಹಾಯಕ ನಿರ್ದೇಶಕ ಮೌನೇಶ ಕಂಬಾರ ಸಮಾಜಕಲ್ಯಾಣಾಧಿಕಾರಿ ಸತ್ಯನಾರಾಯಣ ದರಬಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ತಿಪ್ಪಾರಡ್ಡಿ ಅಲ್ಪಸಂಖ್ಯಾತರ ವಸತಿ ನಿಲಯಗಳ ಮೇಲ್ವಿಚಾರಕಿ ಸಂಗೀತಾ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹಣಮಂತಪ್ಪ ಅಂಬಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಲಾಲಸಾಬ್ ಪೀರಾಪುರ ಸೇರಿದಂತೆ ತೋಟಗಾರಿಕೆ ಮೀನುಗಾರಿಕೆ ಕೃಷಿ ಸಾರಿಗೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಇಲಾಖೆಗಳ ಪ್ರಗತಿ ಕಾರ್ಯಗಳ ಕುರಿತು ವಿವರಣೆ ನೀಡಿದರು.

ಹಜರತ್ ಸಯ್ಯದ್ ಬುರ‍್ಹಾನುದ್ದಿನ್ ಶಹಾ ಖಾದ್ರಿ ದರ್ಗಾ ಉರುಸ್: ಧರ್ಮ ಸಮ್ಮೇಳನ

ಸಭೆಯಲ್ಲಿ ತಾಲೂಕು ಪಂಚಾಯತಿ ಸದಸ್ಯರಾದ ಬೈಲಪ್ಪಗೌಡ ವಾಗಣಗೇರಾ ದೇವರಗೋನಾಲ ತಾಲೂಕು ಪಂಚಾಯತಿ ಸದಸ್ಯ ದೊಡ್ಡಕೊತಲೆಪ್ಪ ಹಾವಿನ ದೇವಾಪುರ ತಾಲೂಕು ಪಂಚಾಯತಿ ಸದಸ್ಯ ನಂದನಗೌಡ ಪಾಟೀಲ್ ಸೇರಿದಂತೆ ಅನೇಕ ಜನ ಸದಸ್ಯರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಬಂದಿರುವ ೩೨ ಲಕ್ಷ ೨೫ಸಾವಿರ ರೂಪಾಯಿಗಳ ಅನುದಾನಕ್ಕೆ ಕ್ರೀಯಾಯೋಜನಗೆ ಅನುಮೊದನೆ ಪಡೆಯಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here