ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳಿಗೆ ಸರಕಾರ ಸ್ಪಂದಿಸಬೇಕು: ಪೀರಪಾಶಾ ಹೊನಗುಂಟಾ

0
72

ಶಹಾಬಾದ: ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಬಗ್ಗೆ ಸರಕಾರ ಅನುಸರಿಸುತ್ತಿರುವ ಧೋರಣೆಯನ್ನು ಬಿಟ್ಟು ಅವರ ಸ್ಪಂದಿಸುವತ್ತ ಮುಂದಾಗಬೇಕೆಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಪೀರಪಾಶಾ ಹೊನಗುಂಟಾ ತಿಳಿಸಿದರು.

ಅವರು ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್-೧೯ದಿಂದ ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ ಸರ್ಕಾರ ಮಾತ್ರ ಇವರಿಗೆ ಸ್ಪಂದಿಸುವಲ್ಲಿ ಎಡವುತ್ತಿದೆ.ಇದರಿಂದ ಶಿಕ್ಷಕರು ಮತ್ತು ಖಾಸಗಿ ಆಡಳಿತ ಮಂಡಳಿಯವರು ಆತ್ಮಹತ್ಯ ಮಾಡಿಕೊಳ್ಳು ಮುಂದಾಗುತ್ತಿರುವುದು ದುರ್ದೈವದ ಸಂಗತಿ.ಅಲ್ಲದೇ ರಾಜ್ಯ ಎಲ್ಲಾ ಖಾಸಗಿ ಶಾಲಾ-ಕಾಲೇಜಿನ ಶಿಕ್ಷಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.

Contact Your\'s Advertisement; 9902492681

ಗರುಡಾದ್ರಿ ಕಲಾ ಮಂದಿರದಲ್ಲಿ ಸಿದ್ದಿವಿನಾಯಕ ಮಹಿಳಾ ಮಂಡಳಿ ಲೋಕಾರ್ಪಣೆ

ಈಗಾಗಲೇ ಖಾಸಗಿ ಶಾಲಾ ಕಾಲೆಜು ಅಭಿವೃದ್ಧಿಗಾಗಿ ಮತ್ತು ೧೫೦೦ ಕೋಟಿ ರೂ. ಅನುದಾನ ಮೀಸಲಿದ್ದರೂ ಸರಕಾರ ಅದನ್ನು ಅಭಿವೃದ್ಧಿಗಾಗಿ ಬಳಸದೇ ನಿರಾಸಕ್ತಿಯನ್ನು ತೊರುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯ ಪರಿಣಾಮ ಆಡಳಿತ ಮಂಡಳಿಯವರ ಹಾಗೂ ಶಿಕ್ಷಕರ  ಆತ್ಮಹತ್ಯೆಗೆ ಸರ್ಕಾರವೇ ಕಾರಣ. ಕೂಡಲೇ ಸರಕಾರ ಖಾಸಗಿ ಶಾಲಾ-ಕಾಲೇಜಿನ ಹಾಗೂ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಬೇಕು.ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದೆಂದು ಪಿರಪಾಶಾ ಹೊನಗುಂಟಾ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here