ಗರುಡಾದ್ರಿ ಕಲಾ ಮಂದಿರದಲ್ಲಿ ಸಿದ್ದಿವಿನಾಯಕ ಮಹಿಳಾ ಮಂಡಳಿ ಲೋಕಾರ್ಪಣೆ

0
56

ಸುರಪುರ: ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಶ್ರೀ ಸಿದ್ಧಿವಿನಾಯಕ ಮಹಿಳಾ ಮಂಡಳಿ ಬೊಮ್ಮನಗುಡ್ಡ ಹಾಗು ಅರುಣ್ ಪಬ್ಲಿಕೇಷನ್ ಸಂಸ್ಥೆಯ ಉದ್ಘಾಟನೆ ಕಾರ್ಯಕ್ರಮ ನಡೆಸಲಾಯಿತು.ಅಲ್ಲದೆ ಈ ಸಂಸ್ಥೆಗಳ ಉದ್ಘಾಟನೆ ಅಂಗವಾಗಿ ಕಾವ್ಯ ಕಟ್ಟುವ ಬಗೆ ಎಂಬ ವಿಷಯದ ಕುರಿತು ಒಂದು ದಿನದ ಕಾವ್ಯ ಕಮ್ಮಟವನ್ನು ನಡೆಸಲಾಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ನಿಷ್ಠಿ ಕಡ್ಲೆಪ್ಪನವರ ಮಠದ ಪೂಜ್ಯರಾದ ಶ್ರೀ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ,ಇಂದು ಅನೇಕರು ಕಾವ್ಯ ಕಟ್ಟುವುದು ಎಂದರೆ ಕಾಟಾಚಾರಕ್ಕೆ ಮತ್ತು ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ರೀತಿಯಲ್ಲಿ ಬರೆಯುವವರಿದ್ದಾರೆ,ಆದರೆ ಸಾಹಿತ್ಯ ಎನ್ನುವಂತದ್ದು ಎಲ್ಲರನ್ನು ಬೆಸೆಯುವ ಕೊಂಡಿಯಂತಿರಬೇಕು ಎಂದು ಅಭಿಪ್ರಾಯ ಪಟ್ಟರು.

Contact Your\'s Advertisement; 9902492681

ಕವಿ ಎಂದರೆ ಸಂಸ್ಕೃತಿಯ ಯಜಮಾನ ಇದ್ದಂತೆ: ಶಿವರಂಜನ್ ಸತ್ಯಂಪೇಟೆ

ಕಾರ್ಯಕ್ರಮದಲ್ಲಿ ಆಶಯ ಮಾತುಗಳನ್ನಾಡಿದ ಜನಪದ ಸಾಹಿತಿ ಸಾಹೇಬಗೌಡ ಬಿರಾದಾರ್ ಮಾತನಾಡಿ,ಕಾವ್ಯ ಎಂದರೆ ನಿಸರ್ಗದ ಹಾಗು ಪ್ರಕೃತಿಯ ಮರು ಸೃಷ್ಟಿ ಇದ್ದಂತೆ.ರವಿ ಕಾಣದ್ದನ್ನು ಕವಿ ಕಂಡ ಎನ್ನುವಂತೆ ಕವಿ ತನಗೆ ಕಂಡದ್ದನ್ನು ಕಾವ್ಯ ರೂಪದಲ್ಲಿ ಕಟ್ಟುತ್ತಾನೆ,ಆದರೆ ಇಂದಿನ ಅನೇಕರ ಕಾವ್ಯವು ಕೇವಲ ಪ್ರಮಾಣ ಪತ್ರ ಪಡೆಯಲು ನಂತರ ಅದರ ಒಂದು ಫೋಟೊ ಫೇಸಬುಕ್‌ಲ್ಲಿ ಹಾಕಲು ಎಂಬಂತಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.ಅಲ್ಲದೆ ಕಾವ್ಯ ಕಟ್ಟುವವರನ್ನು ಸರಿದಾರಿಗೆ ತರುವಂತಿದ್ದ ನಮ್ಮ ಅನೇಕ ಮಹನಿಯರುಗಳಾದ ರಾಜಾ ಮದನಗೋಪಾಲ ನಾಯಕ ಈಶ್ವರಯ್ಯ ಮಠ ಚಂದ್ರಕಾಂತ ಕರದಳ್ಳಿ ಎ.ಕೃಷ್ಣಾ ರಂತವರು ಇಂದು ಇಲ್ಲವಾಗಿರುವುದು ನೋವಿನ ಸಂಗತಿಯಾಗಿದೆ ಎಂದರು.

ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಉಪಸ್ಥಿತರಿದ್ದರು, ಇದೇ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ನ್ಯಾಯವಾದಿ ನಿಂಗಣ್ಣ ಚಿಂಚೋಡಿ ದೇವಿಂದ್ರಪ್ಪ ಬೇವಿನಕಟ್ಟಿ ಮಾತನಾಡಿದರು ಸಿದ್ದಿವಿನಾಯಕ ಮಹಿಳಾ ಮಂಡಳಿಯ ಬೋರಮ್ಮ ಬೊಮ್ಮನಗುಡ್ಡ ಇದ್ದರು.

ವೀರಶೈವ ಮಹಾಸಭಾ ನೂತನ ಪದಾಧಿಕಾರಿಗಳಿಗೆ ಸತ್ಕಾರ

ಯಾದಗಿರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿರೇಶ ಹಳ್ಳೂರ ಸಂಗೀತ ಕಲಾವಿದ ಚಂದ್ರಹಾಸ ಮಿಠ್ಠಾ ಅವರನ್ನು ಸನ್ಮಾನಿಸಲಾಯಿತು.ದೇವು ಹೆಬ್ಬಾಳ ನಿರೂಪಿಸಿದರು,ಶರಣಬಸವ ಯಳವಾರ ವಂದಿಸಿದರು.

ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಗಂಗಾಧರ ರುಮಾಲ ಶರಣಗೌಡ ಪಾಟೀಲ್ ಶ್ರೀಹರಿರಾವ್ ಆದವಾನಿ ಶಾಂತಪ್ಪ ಬೂದಿಹಾಳ ಮಾನು ಸಗರ ಸಿದ್ದಯ್ಯಸ್ವಾಮಿ ಸ್ಥಾವರಮಠ ಕುತುಬುದ್ದೀನ್ ಮಕ್ತಾಪುರ ಮೂರ್ತಿ ಬೊಮ್ಮನಹಳ್ಳಿ ಶಿವಕುಮಾರ ಅಮ್ಮಾಪುರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here