ಸುರಪುರ: ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿ ಪ್ಲಾಸ್ಟಿಕ್ ಗೋಡಾನ್ ಬಳಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಅಪಾರ ಪ್ರಮಾಣದ ಪ್ಲಾಸ್ಟಿಕ್ ವಸ್ತುಗಳು ಸುಟ್ಟು ಕರಕಲಾಗಿವೆ.
ರವಿವಾರ ರಾತ್ರಿ ೧೧ ಗಂಟೆಯ ವೇಳೆಗೆ ಬೆಂಕಿ ತಗುಲಿದ್ದು ಮಾಹಿತಿ ತಿಳಿದು ಅಗ್ನಿ ಶಾಮಕ ಸಿಬ್ಬಂದಿ ಸಕಾಲಕ್ಕೆ ಬಂದು ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ ಯಾರೂ ಇಲ್ಲದಕಾರಣ ಬೇಗ ಯಾರಿಗು ತಿಳಿದಿಲ್ಲ,ಆದರೆ ನಮಗೆ ಮಾಹಿತಿ ಬಂದ ನಂತರ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದೇವೆ,ಆದರೆ ಅಷ್ಟರಲ್ಲಿ ಪ್ಲಾಸ್ಟಿಕ್ ವಸ್ತುಗಳು ಸುಟ್ಟಿದ್ದವು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಕಾಶ ತಿಳಿಸಿದ್ದಾರೆ.
ರಂಗಂಪೇಟೆಯ ಮೋಹಿದ್ ಎಂಬುವವರಿಗೆ ಸೇರಿದ ಗೋಡಾನ್ ಇದಾಗಿದ್ದು,ಅದರಲ್ಲಿ ಪ್ಲಾಸ್ಟಿಕ್ ವಸ್ತುಗಳು ಇಡಲಾಗಿತ್ತು,ಆದರೆ ರಾತ್ರಿ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಬಿದ್ದಿದ್ದು ಅಂದಾಜು ೫೦ ಸಾವಿರ ರೂಪಾಯಿಯ ವಸ್ತುಗಳು ನಾಶವಾಗಿರಬಹುದು ಎಂದು ಅಂದಾಜಿಸಲಾಗಿದೆ.