ಸುರಪುರ: ನಮ್ಮ ವಿಧಾನಸಭಾ ಕ್ಷೇತ್ರದಲ್ಲಿನ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕತೆಯರು ಮತ್ತು ಸಾಹಾಯಕಿಯರಿಲ್ಲದೆ ಅಂಗನವಾಡಿ ಕೇಂದ್ರ ಇದ್ದರು ಇಲ್ಲದಂತಾಗಿವೆ, ಇದರಿಂದ ಸರ್ಕಾರದ ಮತ್ವಾಕಾಂಕ್ಷೇ ಯೋಜನೆಗಳ ಅನುಷ್ಠಾನವು ಸರಿಯಾಗಿ ತಲುಪುತ್ತಿಲ್ಲಾ ಆದ್ದರಿಂದ ಶೀಘ್ರವಾಗಿ ಕ್ಷೇತ್ರದಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸುವಂತೆ ಮಾಜಿ ಶಾಸಕ ರಾಜಾ ವೆಂಕಟ್ಟಪ್ಪ ನಾಯಕ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸುರಪುರ ಮತ್ತು ಹುಣಸಗಿ ತಾಲೂಕಿನ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ, ಒಬ್ಬರಿಗೆ ಎರಡೆರಡು ಗ್ರಾಮಗಳ ಕೇಂದ್ರ ನೀಯೋಜನೆ ಮಾಡಿರುವುದರಿಂದ ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಗರ್ಭಿಣಿಸ್ತ್ರೀಯರಿಗಾಗಿ ಪೌಷ್ಟಕಾಂಶದ ಕೊರೆತೆ ನಿಗಿಸಲು ಸಕಾರ ಹಮ್ಮಿಕೊಂಡಿರುವ ಮಾತೃ ವಂದನಾ ಯೋಜನೆಯಂತ ಇನ್ನು ಅನೇಕ ಸರ್ಕಾರಿ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಜನರಿಗೆ ತಲುಪದೆ ಜನರು ವಂಚಿತರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸುರಪುರ: ಬೆಂಕಿ ತಗುಲಿ ಗುಡಿಸಲು ಭಸ್ಮ
ಕ್ಷೇತ್ರ ಶಿಶು ಅಭಿವೃದ್ಧಿ ಯೋಜಾನಾ ಇಲಾಖೆಯು ಸರ್ಮಪಕವಾಗಿ ಯೋಜನೆಗಳನ್ನು ಸಿಬ್ಬಂದಿ ಕೊರತೆ ಮತ್ತು ಇನ್ನಿತರ ಕಾರಣಗಳಿಂದಾಗಿ ನೆಪ ಹೇಳಿ ಜನರಿಗೆ ಸರಿಯಾದ ಸಮಯಕ್ಕೆ ತಲುಪಿಸದೆ ಇರುವುದು ಸರ್ವೆ ಸಾಮಾನ್ಯವಾಗಿದೆ. ಈ ಕುರಿತು ಕ್ರಮವಹಿಸುವಂತೆ ಜಿಲ್ಲಾ ಯೋಜನಾಧಿಕಾರಿಗಳಿಗೆ ಪತ್ರ ಬರೆದು ಈಗಾಗಲೆ ಒತ್ತಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.